#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ದೇಶದ ಯುವಕರು ನಮ್ಮ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಬೇಕು: ಚಿದಾನಂದ್ ಎಂ.ಗೌಡ

ಗ್ರಾಮಗಳಲ್ಲಿ ದೇವಸ್ಥಾನಗಳು ಅಭಿವೃದ್ಧಿಯಾಗಿ ದೇವರ ಉತ್ಸವಗಳು ನಡೆಯುತ್ತಿದ್ದರೆ. ಆ ಗ್ರಾಮಗಳು ಸುಭೀಕ್ಷವಾಗಿರುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡ ಬೇಕು. ವಿಧಾನ ಪರಿ ಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ತಮಗೆ ಬರುವ ಅಲ್ಪ ಅಭಿ ವೃದ್ಧಿ ಹಣ ದಲ್ಲೂ ತಾಲೂಕಿನ ಹಲವು ಶಾಲೆಗಳಿಗೆ ದೇವಸ್ಥಾನಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು

ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಪ್ರವೇಶದ್ವಾರ ನಿರ್ಮಾಣಕ್ಕೆ ಭೂಮಿ ಪೂಜೆ

ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನದ ಪ್ರವೇಶದ್ವಾರ ನಿರ್ಮಾಣ ಕಾಮಗಾರಿಗೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಭೂಮಿ ಪೂಜೆ ನೆರವೇರಿಸಿದರು.

Profile Ashok Nayak Feb 8, 2025 9:34 PM

ಶಿರಾ: ಭಾರತ ದೇಶದ ಸಂಸ್ಕೃತಿ, ಆಚಾರಗಳು ಪ್ರಪಂಚಕ್ಕೆ ಮಾದರಿಯಾಗಿದ್ದು, ನಮ್ಮ ಆಚಾರ-ವಿಚಾರ ಸಂಸ್ಕೃತಿಗಳನ್ನು ಇಂದಿನ ಯುವಕರು ಮುಂದುವರೆಸಿಕೊಂಡು ಹೋಗಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು. ಅವರು ಶನಿವಾರ ತಾಲೂಕಿನ ಮೇಲ್ಕುಕುಂಟೆ ಗ್ರಾಮದಲ್ಲಿರುವ ಪುರಾತನ ಇತಿಹಾಸವುಳ್ಳ ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನದ ಪ್ರವೇಶದ್ವಾರ ನಿರ್ಮಾಣ ಕಾಮ ಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನವು ಪುರಾತನವಾದ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ದ್ವಾರಬಾಗಿಲು ನಿರ್ಮಾಣಕ್ಕೆ ಹಲವು ದಿನಗಳಿಂದ ಬೇಡಿಕೆ ಇತ್ತು.

ಇದನ್ನೂ ಓದಿ: Tumkur News: ತುಮಕೂರಲ್ಲಿ ಆಯಿಲ್‌ ಟ್ಯಾಂಕ್ ಸ್ಫೋಟವಾಗಿ ಇಬ್ಬರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ

ಆ ಬೇಡಿಕೆಗೆ ವಿಧಾನಪರಿಷತ್ ಪ್ರದೇಶಾಭಿವೃದ್ಧಿಯಿಂದ ಸುಮಾರು 15 ಲಕ್ಷ ರೂ.ಗಳನ್ನು ನೀಡಲಾ ಗಿದ್ದು, ಶೀಘ್ರವಾಗಿ ಪ್ರವೇಶ ದ್ವಾರ ನಿರ್ಮಾಣವಾಗಲಿದೆ. ಇದರ ಜೊತೆಗೆ ತಾಲೂಕಿನ ಐತಿಹಾಸಿಕ ಪ್ರಸಿದ್ದ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನಕ್ಕೂ ಪ್ರವೇಶ ದ್ವಾರ ನಿರ್ಮಾಣ ಮಾಡಲು ಕ್ರಮ ಕೈಗೊ ಳ್ಳುತ್ತೇನೆ ಎಂದರು.

ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿ ಗ್ರಾಮಗಳಲ್ಲಿ ದೇವಸ್ಥಾನಗಳು ಅಭಿವೃದ್ಧಿಯಾಗಿ ದೇವರ ಉತ್ಸವಗಳು ನಡೆಯುತ್ತಿದ್ದರೆ. ಆ ಗ್ರಾಮಗಳು ಸುಭೀಕ್ಷವಾಗಿರುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ವಿಧಾನ ಪರಿ ಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ತಮಗೆ ಬರುವ ಅಲ್ಪ ಅಭಿವೃದ್ಧಿ ಹಣ ದಲ್ಲೂ ತಾಲೂಕಿನ ಹಲವು ಶಾಲೆಗಳಿಗೆ ದೇವಸ್ಥಾನಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಪಿಡಿಓ ಗಂಗೂಬಾಯಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ. ಮಲ್ಲೇಶ್, ಗ್ರಾ.ಪಂ. ಸದಸ್ಯ ಟಿ.ಡಿ.ನರಶೀಂಹಮೂರ್ತಿ, ತಿಪ್ಪೇಸ್ವಾಮಿ, ಡಿ.ಶಿವಲಿಂಗಯ್ಯ, ಮಾಜಿ ತಾ.ಪಂ. ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮಾಜಿ ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ನಗರ ಬಿಜೆಪಿ ಅಧ್ಯಕ್ಷ ಗಿರಿಧರ್, ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನದ ಪ್ರಧಾನ ಅರ್ಚಕರಾದ ಚಕ್ರಪಾಣಿ, ಎಸ್.ರಂಗನ್, ಮುಖಂಡರಾದ ಎನ್.ಕುಮಾರ್, ಚಂದ್ರು, ರಾಘ ವೇಂದ್ರ, ಕೊಟ್ಟ ಶ್ರೀನಿವಾಸ ಗೌಡ ಸೇರಿದಂತೆ ಹಲವರು ಹಾಜರಿದ್ದರು.