ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BJP Karnataka: ಯತ್ನಾಳ್‌ ಉಚ್ಚಾಟನೆಯಿಂದ ಬಿಜೆಪಿ ರೆಬೆಲ್ಸ್‌ ಬಣದಲ್ಲಿ ಆತಂಕ!

BJP Karnataka: ಎಸ್‌.ಟಿ.ಸೋಶೇಖರ್‌, ಶಿವರಾಮ್‌ ಹೆಬ್ಬಾರ್‌ ಸೇರಿ ಐವರು ಬಿಜೆಪಿ ನಾಯಕರಿಗೆ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಯತ್ನಾಳ್‌ ಉಚ್ಚಾಟನೆಯಾಗಿದ್ದರಿಂದ ಅವರ ಬಣದ ನಾಯಕರಲ್ಲಿ ಸದ್ಯ ಆತಂಕ ಮೂಡಿದೆ.

ಯತ್ನಾಳ್‌ ಉಚ್ಚಾಟನೆಯಿಂದ ಬಿಜೆಪಿ ರೆಬೆಲ್ಸ್‌ ಬಣದಲ್ಲಿ ಆತಂಕ!

Profile Prabhakara R Mar 26, 2025 7:27 PM

ಬೆಂಗಳೂರು: ರಾಜ್ಯ ನಾಯಕರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ಅವರಿಗೆ ಬಿಜೆಪಿ ಪಕ್ಷದಿಂದ (BJP Karnataka) ಗೇಟ್‌ ಪಾಸ್‌ ಸಿಕ್ಕಿರುವುದರಿಂದ ರೆಬೆಲ್ಸ್‌ ಬಣದಲ್ಲಿ ಆತಂಕ ಮೂಡಿದೆ. ಪಕ್ಷದ ಶಿಸ್ತು ಕಾಪಾಡುವ ಉದ್ದೇಶದಿಂದ ಯತ್ನಾಳ್‌ ಅವರನ್ನು ಹೈಕಮಾಂಡ್‌ ಉಚ್ಚಾಟನೆ ಮಾಡಿದ್ದು, ಇದರಿಂದ ವಿಜಯೇಂದ್ರ ಬಣ ಮೇಲುಗೈ ಸಾಧಿಸಿದಂತಾಗಿದೆ. ಯತ್ನಾಳ್‌ ಹೇಳಿಕೆಗಳಿಂದ ರಾಜ್ಯ ನಾಯಕರು ಮುಜುಗರ ಪಡುವಂತಾಗಿತ್ತು. ಇದೀಗ ಹೈಕಮಾಂಡ್‌, ಯತ್ನಾಳ್‌ (Basanagouda Patil Yatnal) ಉಚ್ಚಾಟನೆ ಮಾಡುವ ಮೂಲಕ ಪಕ್ಷದಲ್ಲಿ ಅಶಿಸ್ತಿನಿಂದ ನಡೆದುಕೊಳ್ಳುವವರಿಗೆ ಎಚ್ಚರಿಕೆಯನ್ನು ರವಾನಿಸಿದೆ.

ಯತ್ನಾಳ್‌ ಬಣದಲ್ಲಿ ರಮೇಶ್‌ ಜಾರಕಿಹೊಳಿ, ಕುಮಾರ್‌ ಬಂಗಾರಪ್ಪ, ಸಿದ್ದೇಶ್ವರ್‌, ಬಿ.ಪಿ. ಹರೀಶ್‌, ಪ್ರತಾಪ್‌ ಸಿಂಹ, ಅರವಿಂದ್‌ ಲಿಂಬಾವಳಿ ಗುರುತಿಸಿಕೊಂಡಿದ್ದಾರೆ. ರೈತರಿಗೆ ವಕ್ಫ್‌ ಮಂಡಳಿಯಿಂದ ನೀಡಿದ್ದ ನೋಟಿಸ್‌ ವಿರುದ್ಧ ಯತ್ನಾಳ್‌ ನೇತೃತ್ವದಲ್ಲಿ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ನಡೆದಿತ್ತು. ಪಾದಯಾತ್ರೆಯಲ್ಲಿ ಯತ್ನಾಳ್ ಬಣದ ನಾಯಕರು, ಬೆಂಬಲಿಗರು ಪಾಲ್ಗೊಂಡಿದ್ದರು. ಇದರಿಂದ ಬಿಜೆಪಿ ಬಣ ಬಡಿದಾಟ ಬಹಿರಂಗವಾಗಿತ್ತು.

ಇನ್ನು ಬಣ ರಾಜಕೀಯ ಮತ್ತು ಆಂತರಿಕ ಕಚ್ಚಾಟದಿಂದ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ನಾಯಕರಿಗೆ ಮಂಗಳವಾರ ಕಮಲ ಬಿಜೆಪಿ ಹೈಕಮಾಂಡ್ ಶಾಕ್ ನೀಡಿತ್ತು. 3 ಶಾಸಕರು, ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇವರಲ್ಲಿ ಶಾಸಕ ಬಿ.ಪಿ ಹರೀಶ್ ಯತ್ನಾಳ್​ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಎಸ್.​​ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ರೆಬೆಲ್ ಶಾಸಕರಾಗಿದ್ದು, ಇವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದಾರೆ. ಅಲ್ಲದೇ ಬಹಿರಂಗವಾಗಿಯೇ ಕಾಂಗ್ರೆಸ್​ ನಾಯಕರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ರೇಣುಕಾಚಾರ್ಯ ಹಾಗೂ ಸುಬ್ರಹ್ಮಣ್ಯ ನಾಯ್ಡು ಸೇರಿಕೊಂಡು ಯತ್ನಾಳ್‌ಗೆ ಟಾಂಗ್ ಕೊಡಲು ಸಭೆ ಮೇಲೆ ಸಭೆ ಮಾಡಿದ್ದರು. ಅಲ್ಲದೇ ಬೃಹತ್ ಲಿಂಗಾಯತ ಸಮಾವೇಶ ಮಾಡುವ ಮೂಲಕ ಪರೋಕ್ಷವಾಗಿ ಯತ್ನಾಳ್​ ಹಾಗೂ ಹೈಕಮಾಂಡ್​ಗೆ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಇದರ ವಿರುದ್ದ ಯತ್ನಾಳ್‌ ಬಣ ಹಿಂದು ಸಮಾವೇಶ ಮಾಡಲು ನಿರ್ಧರಿಸಿತ್ತು. ಆದರೆ, ಆದರೆ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿದ್ದರಿಂದ ನಂತರ ಯತ್ನಾಳ್ ಬಣ ಸುಮ್ಮನಾಗಿತ್ತು.



ಈ ಸುದ್ದಿಯನ್ನೂ ಓದಿ | Basanagouda Patil Yatnal: ಸತ್ಯವಂತರಿಗಿದು ಕಾಲವಲ್ಲ, ದುಷ್ಟರಿಗೆ ಸುಭಿಕ್ಷಕಾಲ: ಉಚ್ಚಾಟನೆ ಬಗ್ಗೆ ಯತ್ನಾಳ್‌ ಕಿಡಿ

ಈ ನಡುವೆಯೇ ಬಿಜೆಪಿ ನಾಯಕರಿಗೆ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಯತ್ನಾಳ್‌ ಉಚ್ಚಾಟನೆಯಾಗಿದ್ದರಿಂದ ಅವರ ಬಣದ ನಾಯಕರಲ್ಲಿ ಆತಂಕ ಮೂಡಿದೆ.