ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs GT: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್‌!

MI vs GT: ಅಹಮದಾಬಾದ್‌ನ ನರೇಂದ್ರ ಮೋದಿ ಕಿಕೆಟ್‌ ಕ್ರೀಡಾಂಗಣದಲ್ಲಿ ಇದಿಗ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 9ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

MI vs GT: ಟಾಸ್‌ ಸೋತ ಗುಜರಾತ್‌ ಟೈಟನ್ಸ್‌ ಮೊದಲ ಬ್ಯಾಟಿಂಗ್‌!

ಮುಂಬೈ ಇಂಡಿಯನ್ಸ್‌ vs ಗುಜರಾತ್‌ ಟೈಟನ್ಸ್‌

Profile Ramesh Kote Mar 29, 2025 7:35 PM

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2-2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (MI) ಹಾಗೂ ಗುಜರಾತ್‌ ಟೈಟನ್ಸ್‌ (GT) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 243 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಗುಜರಾತ್‌ ಟೈಟನ್ಸ್‌ ಕಠಿಣ ಹೋರಾಟ ನಡೆಸಿದ್ದದ ಹೊರತಾಗಿಯೂ 232 ರನ್‌ಗಳಿಗೆ ಸೀಮಿತವಾಗಿತ್ತು. ಆ ಮೂಲಕ 11 ರನ್‌ಗಳಿಂದ ಗುಜರಾತ್‌ ತವರು ಅಂಗಣದಲ್ಲಿ ಸೋತಿತ್ತು. ಇದೀಗ ತವರು ಅಂಗಣದಲ್ಲಿ ಎರಡನೇ ಪಂದ್ಯವನ್ನು ಆಡುತ್ತಿರುವ ಶುಭಮನ್‌ ಗಿಲ್‌ ಪಡೆ ಗೆಲುವಿನ ನಿರೀಕ್ಷಿಯಲ್ಲಿದೆ.

IPL 2025: ಮುಂಬೈ ಇಂಡಿಯನ್ಸ್‌ಗೆ ಜಸ್‌ಪ್ರೀತ್‌ ಬುಮ್ರಾ ಸೇರ್ಪಡೆ ಯಾವಾಗ? ಹೆಡ್‌ ಕೋಚ್‌ ಹೇಳಿದ್ದಿದು!

ಇನ್ನು ಮುಂಬೈ ಇಂಡಿಯನ್ಸ್‌ ತಂಡ ಕೂಡ ತನ್ನ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಲು ಅನುಭವಿಸಿತ್ತು. ಹಾಗಾಗಿ ಮುಂಬೈ ತಂಡ ಕೂಡ ಈ ಟೂರ್ನಿಯಲ್ಲಿ ಖಾತೆ ತೆರೆಯಲು ಎದುರು ನೋಡುತ್ತಿದೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಚೆನ್ನೈ, 20ನೇ ಓವರ್‌ನಲ್ಲಿ 158 ರನ್‌ ಗಳಿಸಿ 4 ವಿಕೆಟ್‌ ಗೆಲುವು ಪಡೆದಿತ್ತು.



ಇತ್ತಂಡಗಳ ಪ್ಲೇಯಿಂಗ್‌ XI

ಗುಜರಾತ್‌ ಟೈಟನ್ಸ್‌: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್(ವಿ.ಕೀ), ಶೆರ್ಫೇನ್ ಋದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ



ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿ.ಕೀ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಮುಜೀಬ್ ಉರ್ ರೆಹಮಾನ್, ಸತ್ಯನಾರಾಯಣ ರಾಜು



ತಂಡಗಳು

ಗುಜರಾತ್‌ ಟೈಟನ್ಸ್‌: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್(ವಿ.ಕೀ), ಶೆರ್ಫೇನ್ ಋದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ, ವಾಷಿಂಗ್ಟನ್‌ ಸುಂದರ್‌, ಗ್ಲಿನ್‌ ಫಿಲಿಪ್ಸ್‌, ಇಶಾಂತ್‌ ಶರ್ಮಾ, ಅನುಜ್‌ ರಾವತ್‌, ಮಹಿಪಾಲ್‌ ಲೊಮ್ರೊರ್‌, ಅರ್ಷದ್‌ ಖಾನ್‌, ಜಯಂತ್‌ ಯಾದವ್‌, ನಿಶಾಂತ್‌ ಸಿಂಧು, ಕುಲ್ವಂತ್‌ ಖೆಜ್ರೋಲಿಯಾ, ಕರಿಮ್‌ ಜನತ್‌, ಜೆರಾಲ್ಡ್‌ ಕೊಯೆಡ್ಜಿ,ಮಾನವ್‌ ಸುತಾರ್‌, ಕುಮಾರ್‌ ಕುಶಾಗ್ರ, ಗುರ್ನೂರ್‌ ಬ್ರಾರ್‌

ಮುಂಬೈ ಇಂಡಿಯನ್ಸ್:‌ ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿ.ಕೀ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಮುಜೀಬ್ ಉರ್ ರೆಹಮಾನ್, ಸತ್ಯನಾರಾಯಣ ರಾಜು, ರಾಬಿನ್‌ ಮಿಂಝ್‌, ಅಶ್ವಿನ್‌ ಕುಮಾರ್‌, ರಾಜ್‌ ಭಾವ, ಕಾರ್ಬಿನ್‌ ಬಾಷ್‌, ವಿಲ್‌ ಜ್ಯಾಕ್ಸ್‌, ವಿಘ್ನೇಶ್‌ ಪುತ್ತೂರು, ಕರಣ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ, ರೀಸ್‌ ಟಾಪ್ಲೀ, ಬೆವ್‌ ಜಾಕೋಬ್ಸ್‌, ಅರ್ಜುನ್‌ ತೆಂಡೂಲ್ಕರ್‌, ಕೆ ಶ್ರೀಜಿತ್‌