ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಎಂಎಸ್‌ ಧೋನಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದರೆ ಸಿಎಸ್‌ಕೆ ಗೆಲ್ಲುತ್ತಿತ್ತೆಂದ ಶೇನ್‌ ವ್ಯಾಟ್ಸನ್‌!

Shane Watson on MS Dhoni: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಂಟನೇ ಪಂದ್ಯದಲ್ಲಿ ಎಂಎಸ್‌ ಧೋನಿ ಸ್ವಲ್ಪ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲ್ಲುತ್ತಿತ್ತು ಎಂದು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಂಎಸ್‌ ಧೋನಿ ಮೇಲಿನ ಕ್ರಮಾಂಕದಲ್ಲಿ ಆಡಬೇಕಿತ್ತು: ಶೇನ್‌ ವ್ಯಾಟ್ಸನ್‌!

ಎಂಎಸ್‌ ಧೋನಿ-ಶೇನ್‌ ವ್ಯಾಟ್ಸನ್‌

Profile Ramesh Kote Mar 29, 2025 6:13 PM

ಚೆನ್ನೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಎಂಟನೇ ಪಂದ್ಯದಲ್ಲಿ ಎಂಎಸ್‌ ಧೋನಿ (MS Dhoni) ಸ್ವಲ್ಪ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗೆಲ್ಲುತ್ತಿತ್ತು ಎಂದು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಪಂದ್ಯದಲ್ಲಿ ಸಿಎಸ್‌ಕೆ ಎದುರು ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ತಂಡ 50 ರನ್‌ಗಳಿಂದ ಗೆಲುವು ಪಡೆದಿತ್ತು. 17 ವರ್ಷಗಳ ಬಳಿಕ ಇದೇ ಮೊದಲ ಬಾರಿ ಬೆಂಗಳೂರು ತಂಡ ಚೆಪಾಕ್‌ನಲ್ಲಿ ಸಿಎಸ್‌ಕೆಯನ್ನು ಮಣಿಸಿದೆ.

ಶುಕ್ರವಾರ ನಡೆದಿದ್ದ ಈ ಹೈವೋಲ್ಟೇಜ್‌ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 197 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ ತಂಡದ ಪರ ರಚಿನ್‌ ರವೀಂದ್ರ ಬಿಟ್ಟರೆ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಹಾಗಾಗಿ ಎಂಎಸ್‌ ಧೋನಿ ಅವರು ಆರ್‌ ಅಶ್ವಿನ್‌ಗೂ ಮುನ್ನ ಕ್ರೀಸ್‌ಗೆ ಬರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಶ್ವಿನ್‌ ಬಳಿಕ ಒಂಬತ್ತನೇ ಕ್ರಮಾಂಕದಲ್ಲಿ ಎಂಎಸ್‌ ಧೋನಿ ಕ್ರೀಸ್‌ಗೆ ಬಂದಿದ್ದರು. ಅವರು ಕೊನೆಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ ಕೇವಲ 16 ಎಸೆತಗಳಲ್ಲಿ ಅಜೇಯ 30 ರನ್‌ ಸಿಡಿಸಿದ್ದರು. ಆದರೂ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸಿಎಸ್‌ಕೆ 50 ರನ್‌ಗಳ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

RCB vs CSK: ʻಸಿಲ್ಲಿ ಪ್ರಶ್ನೆ ಕೇಳಬೇಡಿʼ-ಪತ್ರಕರ್ತನಿಗೆ ಬೆವರಿಳಿಸಿದ ಸ್ಟೀಫನ್‌ ಫ್ಲೆಮಿಂಗ್‌!

ಎಂಎಸ್‌ ಧೋನಿ ಅವರ ವಿಕೆಟ್‌ ಕೀಪಿಂಗ್‌ ಕೌಶಲ ಹಾಗೂ ಅವರ ಬ್ಯಾಟಿಂಗ್‌ ಪ್ರದರ್ಶನವನ್ನು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಗುಣಗಾನ ಮಾಡಿದ್ದಾರೆ. 43ರ ವಯಸ್ಸಿನ ಶೇನ್‌ ವ್ಯಾಟ್ಸನ್‌ ಅವರು ಈಗಲೂ ಅತ್ಯುತ್ತಮ ಲಯದಲ್ಲಿದ್ದಾರೆಂದು ತಿಳಿಸಿದ್ದಾರೆ.

"ಎಂಎಸ್‌ ಧೋನಿ ಅವರು 16 ಎಸೆತಗಳಿಂದ 30 ರನ್‌ ಸಿಡಿಸಿದ ಆಟವನ್ನು ನೋಡಲು ಸಿಎಸ್‌ಕೆ ಅಭಿಮಾನಿಗಳು ಎದುರು ನೋಡುತ್ತಾರೆ. ಅಂದ ಹಾಗೆ ಎಂಎಸ್‌ ಧೋನಿ ಅವರು ಮೇಲಿನ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ನನ್ನ ಪ್ರಕಾರ ಆರ್‌ ಅಶ್ವಿನ್‌ ಅವರಿಗಿಂತ ಮೇಲಿನ ಕ್ರಮಾಂಕದಲ್ಲಿ ಎಂಎಸ್‌ ಧೋನಿ ಕ್ರೀಸ್‌ಗೆ ಬರಬೇಕಿತ್ತು. ಪಂದ್ಯದ ಸನ್ನಿವೇಶ ನೋಡಿದಾಗ ಎಂಎಸ್‌ ಧೋನಿ ಅವರು ಇನ್ನೂ ಹೆಚ್ಚುವರಿ 15 ಎಸೆತಗಳನ್ನು ಆಡಬೇಕಾಗಿತ್ತು," ಎಂದು ಶೇನ್‌ ವ್ಯಾಟ್ಸನ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

RCB vs CSK: 9ನೇ ಕ್ರಮಾಂಕದಲ್ಲಿ ಆಡಿದ ಧೋನಿ ವಿರುದ್ಧ ಭಾರೀ ಟೀಕೆ

"ಎಂಎಸ್‌ ಧೋನಿ ಅವರು ಒಳ್ಳೆಯ ಲಯದಲ್ಲಿದ್ದಾರೆಂದು ಈ ಪ್ರದರ್ಶನವೇ ಸಾಕ್ಷಿ. ಅವರು ಟೂರ್ನಿಗೆ ಸಾಧ್ಯವಾದಷ್ಟು ತಯಾರಿಯನ್ನು ನಡೆಸಿದ್ದಾರೆ. ಸಿಎಸ್‌ಕೆ ತಂಡ ಒಂದು ವೇಳೆ ಬೇಗ ಎಂಎಸ್‌ ಧೋನಿಯನ್ನು ಕಳುಹಿಸಿದ್ದರೆ, ಈ ಪಂದ್ಯದಲ್ಲಿ ಸಿಎಸ್‌ಕೆ ಗೆಲ್ಲುವ ಸಾಧ್ಯವಾಗುತ್ತಿತ್ತು. ಇಂದಿನ (ಮಾರ್ಚ್‌ 28) ರಾತ್ರಿ ಎಂಎಸ್‌ ಧೋನಿ ಮಾಡಿರುವುದನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಎಂಎಸ್‌ ಧೋನಿ ಸ್ವಲ್ಪ ಬೇಗ ಕ್ರೀಸ್‌ಗೆ ಬಂದಿದ್ದರೆ ಸಿಎಸ್‌ಕೆ ಈ ಪಂದ್ಯದಲ್ಲಿ ಗೆಲ್ಲಬಹುದಿತ್ತು," ಎಂದು ಸಿಎಸ್‌ಕೆ ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಎಚ್ಚರಿಕೆ ನೀಡಿದ ವ್ಯಾಟ್ಸನ್‌

ಕಳೆದ ಎರಡೂ ಪಂದ್ಯಗಳಲ್ಲಿ ಸಿಎಸ್‌ಕೆ ಪರ ಇನಿಂಗ್ಸ್‌ ಆರಂಭಿಸಿದ್ದ ರಾಹುಲ್‌ ತ್ರಿಪಾಠಿ ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ದೀಪಕ್‌ ಹೂಡ ಅವರು ಕೂಡ ನಿರಾಶೆ ಮೂಡಿಸಿದ್ದಾರೆ. ಆದರೆ, ಸಿಎಸ್‌ಕೆ ತಂಡ ತನ್ನ ಬ್ಯಾಟಿಂಗ್‌ ಲೈನ್‌ ಅಪ್‌ ಅನ್ನು ಬದಲಾಯಿಸಿಕೊಳ್ಳಬೇಕು ಎಂದು ಶೇನ್‌ ವ್ಯಾಟ್ಸನ್‌ ಸೂಚನೆ ನೀಡಿದ್ದಾರೆ.

RCB vs CSK: 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!

"ರಾಹುಲ್‌ ತ್ರಿಪಾಠಿಗೆ ಓಪನಿಂಗ್‌ ನೀಡಿರುವುದು ಸೇರಿದಂತೆ ಸಿಎಸ್‌ಕೆ ತೆಗೆದುಕೊಂಡಿರುವ ಕೆಲ ನಿರ್ಧಾರಗಳು ತುಂಬಾ ನಿರಾಶೆ ಮೂಡಿಸಿದೆ. ಋತುರಾಜ್‌ ಗಾಯಕ್ವಾಡ್‌ ಅವರು ಗುಣಮಟ್ಟದ ಬ್ಯಾಟ್ಸ್‌ಮನ್‌, ಆದರೆ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದಾರೆ. ಜಾಶ್‌ ಹೇಝಲ್‌ವುಡ್‌ ಅವರ ಎಸೆತದಲ್ಲಿ ಋತುರಾಜ್‌ ಗಾಯಕ್ವಾಡ್‌ ವಿಶಿಷ್ಠ ಶಾಟ್‌ಗೆ ಕೈ ಹಾಕಿ ಔಟ್‌ ಆಗಿದ್ದರು," ಎಂದು ಆಸೀಸ್‌ ಮಾಜಿ ನಾಯಕ ತಿಳಿಸಿದ್ದಾರೆ.