#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Farooq Abdullah: "ತುನೆ ಮುಜೆ ಬುಲಾಯ ಶೆರಾವಾಲಿಯೇ" ಭಜನೆ ಹಾಡಿದ ಫಾರೂಕ್‌ ಅಬ್ದುಲ್ಲಾ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್‌ ಅಬ್ದುಲ್ಲಾ ಅವರು ಕತ್ರಾದಲ್ಲಿ ನಡೆದ ವೈಷ್ಣೋದೇವಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ತುನೆ ಮುಜೆ ಬುಲಾಯ ಶೆರಾವಾಲಿಯೇ ಭಜನೆಯನ್ನು ಹಾಡಿದ್ದಾರೆ. ಸದ್ಯ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವೈಷ್ಣೋದೇವಿ ತೀರ್ಥೋದ್ಭವ ವೇಳೆ ಫಾರೂಕ್ ಅಬ್ದುಲ್ಲಾ ಭಜನೆ; ವಿಡಿಯೋ ವೈರಲ್‌

Farooq Abdullah

Profile Vishakha Bhat Jan 24, 2025 12:21 PM

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ (NC) ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ (Jammu & Kashmir) ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ (Farooq Abdullah) ಅವರು ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಭಜನೆಯೊಂದನ್ನು ಹಾಡಿದ್ದಾರೆ. ಮಾತಾ ವೈಷ್ಣೋದೇವಿ ತೀರ್ಥೋದ್ಭವಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಅಲ್ಲಿ ಅವರು 'ತುನೆ ಮುಜೆ ಬುಲಾಯ ಶೆರಾವಾಲಿಯೇ' ಭಜನೆಯನ್ನು ಹಾಡಿದ್ದಾರೆ.



87 ವರ್ಷದ ಅಬ್ದುಲ್ಲಾ ಗುರುವಾರ ರಿಯಾಸಿ ಜಿಲ್ಲೆಯ ಕತ್ರಾಗೆ ಭೇಟಿ ನೀಡಿದ್ದರು. ಆಶ್ರಮದೊಳಗೆ, ಜನಪ್ರಿಯ ಭಜನೆಯನ್ನು ವ್ಯಕ್ತಿಯೊಬ್ಬರು 'ತುನೆ ಮುಜೆ ಬುಲಾಯ ಶೆರಾವಾಲಿಯೇ' ಹಾಡುತ್ತಿದ್ದರು. ನಂತರ ಫಾರುಕ್‌ ಅಬ್ದುಲ್ಲಾ ಅವರು ಮೈಕ್‌ ತೆಗೆದುಕೊಂಡು ಹಾಡನ್ನು ಹೇಳಿದ್ದಾರೆ. ಅವರು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಹಾಡು ಹೇಳಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವರ ಹಾಡಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಬ್ದುಲ್ಲಾ ಭಜನೆ ಹೇಳುತ್ತಿರುವುದು ಇದೇ ಮೊದಲೇನಲ್ಲಾ, ಈ ಹಿಂದೆ ಏಪ್ರಿಲ್ 2024 ರಲ್ಲಿ, ರಾಮ್‌ಧುನ್‌ಗೆ ಸಂಬಂಧಿಸಿದ ಅವರ ವೀಡಿಯೊವೊಂದು ವೈರಲ್ ಆಗಿತ್ತು.

ಈ ಸುದ್ದಿಯನ್ನೂ ಓದಿ: Saif Ali Khan: ಸೈಫ್‌ ಕೇಸ್‌- ಸಿಸಿಟಿವಿ ದೃಶ್ಯದಲ್ಲಿರುವುದು ನನ್ನ ಮಗನಲ್ಲ... ಆರೋಪಿಯ ತಂದೆಯಿಂದ ಶಾಕಿಂಗ್‌ ಹೇಳಿಕೆ

ರೋಪ್ ವೇ ವಿಚಾರ ಪ್ರಸ್ತಾಪ

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೋಪ್‌ವೇ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕತ್ರಾ ನಿವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದರು. ನಗರದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ರೋಪ್‌ವೇ ಯೋಜನೆ ಆರಂಭಿಸಲಾಗಿದೆ. “ನೀವು ಧೈರ್ಯ ತೋರಿಸಿದ್ದೀರಿ ಮತ್ತು ಅದನ್ನು ತಡೆಯಲು ವೀರಾವೇಶದಿಂದ ಹೋರಾಡಿದ್ದೀರಿ. ಅಧಿಕಾರವು ಜನರ ಬಳಿ ಇದೆಯೇ ಹೊರತು ಸರ್ಕಾರದ ಬಳಿ ಅಲ್ಲ ಎಂದು ಹೇಳಿದ್ದಾರೆ. ಈ ಬೆಟ್ಟಗಳಲ್ಲಿ ವಾಸಿಸುವ ಜನರು ತಮ್ಮ ಜೀವನೋಪಾಯಕ್ಕಾಗಿ ಮಾತೆಯ ಆಶೀರ್ವಾದವನ್ನು ಅವಲಂಬಿಸಿದ್ದಾರೆ. ಆದರೆ ಅವರನ್ನು ಕಡೆಗಣಿಸಲಾಗಿದೆ. ಅಧಿಕಾರದಲ್ಲಿರುವವರು ತಾವು ಅಜೇಯ ಎಂದು ನಂಬುತ್ತಾರೆ, ಆದರೆ ಅವರು ಅಲ್ಲ. ದೈವಿಕ ಶಕ್ತಿ ಮೇಲುಗೈ ಸಾಧಿಸಿದಾಗ, ಉಳಿದೆಲ್ಲವೂ ಕಡಿಮೆಯಾಗುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ಎಂದು ಅವರು ಹೇಳಿದ್ದಾರೆ.