ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

IND vs AUS: ರೋಹಿತ್‌ ಶರ್ಮಾ ಔಟಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ರಿತಿಕಾ ಸಾಜ್ದೇ!

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಕಂಡರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸ್ಪಿನ್ನರ್‌ ಎದುರು ಸ್ವೀಪ್‌ ಶಾಟ್‌ ಹೊಡೆಯಲು ಹೋಗಿ ಅವರು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ರೋಹಿತ್ ವಿಕೆಟ್ ಪತನದ ನಂತರ, ಅವರ ಪತ್ನಿ ರಿತಿಕಾ ಅವರ ಪ್ರತಿಕ್ರಿಯೆ ವೈರಲ್ ಆಗಿದೆ.

ರೋಹಿತ್‌ ಔಟಾಗಿದ್ದಕ್ಕೆ ಸಪ್ಪೆ ಮುಖ ಮಾಡಿಕೊಂಡ ರಿತಿಕಾ!

ರೋಹಿತ್‌ ಶರ್ಮಾಹಾಗೂ ರಿತಿಕಾ ಸಾಜ್ದೇ

Profile Ramesh Kote Mar 4, 2025 8:50 PM

ದುಬೈ: ಆಸ್ಟ್ರೇಲಿಯಾ ವಿರುದ್ಧದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಿದ ಬಳಿಕ ಅವರ ಪತ್ನಿ ರಿತಿಕಾ ಸಾಜ್ದೇ ಅವರ ಬೇಸರ ವ್ಯಕ್ತಪಡಿಸಿದರು. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶುಭಮನ್‌ ಗಿಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ 28 ರನ್‌ ಗಳಿಸಿ ಕೂಪರ್‌ಗೆ ವಿಕೆಟ್‌ ಒಪ್ಪಿಸಿದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ ಪಂದ್ಯ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಿತು. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ ಭಾರತಕ್ಕೆ 265 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ ಪರ ನಾಯಕ 29 ಎಸೆತಗಳಲ್ಲಿ 28 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್‌ ಆಡುವ ಮನ್ಸೂಚನೆಯನ್ನು ನೀಡಿದ್ದರು.

IND vs AUS: ರಾಹುಲ್‌ ದ್ರಾವಿಡ್‌ರ ದೀರ್ಘಾವಧಿ ಕ್ಯಾಚ್‌ಗಳ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ರೋಹಿತ್‌ ಶರ್ಮಾ ಅವರ ಇನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿದ್ದವು. ಆದರೆ 8ನೇ ಓವರ್ ಬೌಲ್‌ ಮಾಡಲು ಬಂದ ಸ್ಪಿನ್ನರ್ ಕೂಪರ್ ಕಾನ್ಲಿ, ಟೀಮ್‌ ಇಂಡಿಯಾ ನಾಯಕನನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಕೂಪರ್‌ ಅವರ ಎಸೆತದಲ್ಲಿ ಸ್ವೀಪ್‌ ಮಾಡಲು ಪ್ರಯತ್ನಿಸಿದ ರೋಹಿತ್‌ ಶರ್ಮಾ ಚೆಂಡಿನ ಗತಿಯನ್ನು ಅರಿಯುವಲ್ಲಿ ವಿಫಲರಾಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆ ಮೂಲಕ ಭರ್ಜರಿ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು.



ರೋಹಿತ್‌ ವಿಕೆಟ್‌ ಒಪ್ಪಿಸಿದ ಬಳಿಕ ಬೇಸರಗೊಂಡ ರಿತಿಕಾ

ರೋಹಿತ್ ಶರ್ಮಾ ಔಟಾದ ನಂತರ ರಿತಿಕಾ ಸಾಜ್ದೇ ಅವರು ತುಂಬಾ ನಿರಾಶೆಗೊಂಡರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ರಿತಿಕಾ ಕ್ರೀಡಾಂಗಣಕ್ಕೆ ಬಂದಿದ್ದರು. ರೋಹಿತ್ ಶರ್ಮಾ ಬ್ಯಾಟ್‌ ಮಾಡುತ್ತಿದ್ದ ರೀತಿಯನ್ನು ನೋಡಿದಾಗ, ಅವರು ದೊಡ್ಡ ಇನಿಂಗ್ಸ್ ಆಡುತ್ತಾರೆ ಎಂದು ಅನಿಸಿತ್ತು. ಆದರೆ ಅವರು ಔಟಾದ ತಕ್ಷಣ ರಿತಿಕಾ ಮುಖ ದುಖಃದಿಂದ ಕಾಣುತ್ತಿತ್ತು. ಅವರ ಈ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ.



264 ರನ್‌ ಕಲೆ ಹಾಕಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟ್‌ ಮಾಡಿದ್ದ ಕಾಂಗರೂ ಪಡೆ 49.3 ಓವರ್‌ಗಳಲ್ಲಿ 264 ರನ್‌ಗಳನ್ನು ಕಲೆ ಹಾಕಿತು. ಆಸ್ಟ್ರೇಲಿಯಾ ತಂಡದ ಪರ ನಾಯಕ ಸ್ಟೀವ್ ಸ್ಮಿತ್ ಅದ್ಭುತವಾಗಿ ಬ್ಯಾಟ್‌ ಮಾಡಿದರು. ಸ್ಮಿತ್ 96 ಎಸೆತಗಳಲ್ಲಿ 73 ರನ್ ಗಳಿಸಿದರೆ, ಅಲೆಕ್ಸ್ ಕೇರಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿ 57 ಎಸೆತಗಳಲ್ಲಿ 61 ರನ್ ಗಳಿಸಿದರು.