ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Chikkaballapur News: ಜನನ ಮತ್ತು ಮರಣ ಪತ್ರದ ಹಿಂಬರಹ ನೀಡಲು ವಿಳಂಬ: ವಕೀಲರಿಂದ ತಹಶೀಲ್ದಾರ್‌ಗೆ ದೂರು

ನ್ಯಾಯಾಲಯದಲ್ಲಿ ಜನನ ಮತ್ತು ಮರಣ ಪತ್ರ ಪಡೆಯಲು ತಾಲೂಕು ಕಚೇರಿಯಿಂದ ಹಿಂಬ ರಹ ಅತ್ಯಂತ ಅವಶ್ಯಕವಾಗಿದೆ. ಆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜನನ ಮತ್ತು ಮರಣ ಪತ್ರದ ಹಿಂಬರಹ ನೀಡಲು ಜನರಿಗೆ ಸತಾಯಿಸುತ್ತಿದ್ದಾರೆ.ಈ ಕೂಡಲೇ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು

ತಾಲೂಕು ಕಚೇರಿಯಿಂದ ಹಿಂಬರಹ ಅತ್ಯಂತ ಅವಶ್ಯಕ

ತಾಲ್ಲೂಕು ಕಚೇರಿಯಲ್ಲಿ ಜನನ ಮತ್ತು ಮರಣ ಪತ್ರದ ಹಿಂಬರಹ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವ ಕಾರಣ ವಕೀಲರು ಎಂದು ತಾಲ್ಲೂಕು ಕಚೇರಿಗೆ ಬಂದು ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಅವರಿಗೆ ದೂರು ನೀಡಿದರು.

Profile Ashok Nayak Mar 4, 2025 10:49 PM

ಚಿಂತಾಮಣಿ : ತಾಲ್ಲೂಕು ಕಚೇರಿಯಲ್ಲಿ ಜನನ ಮತ್ತು ಮರಣ ಪತ್ರದ ಹಿಂಬರಹ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವ ಕಾರಣ ವಕೀಲರು ಎಂದು ತಾಲ್ಲೂಕು ಕಚೇರಿಗೆ ಬಂದು ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಅವರಿಗೆ ದೂರು ನೀಡಿದರು. ತಾಲ್ಲೂಕು ಕಚೇರಿಯಲ್ಲಿರುವ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರಿ ಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ, ಜನನ ಮತ್ತು ಮರಣ ಪತ್ರದ ಹಿಂಬರಹ ಕೊಡಲು ಜನರಿಗೆ ಪದೇ ಪದೇ ಅಲೆದಾಡಿಸುತ್ತಿರುತ್ತಾರೆ.

ಇದನ್ನೂ ಓದಿ: Chikkaballapur News: ಸರಕಾರ ವಿಶ್ವವಿದ್ಯಾಲಯ ಮುಚ್ಚುವುದರಲ್ಲಿ ನನಗೆ ಆಶ್ಚರ್ಯ ಕಾಣುತ್ತಿಲ್ಲ: ಆರ್ಥಿಕವಾಗಿ ಈ ಸರಕಾರ ದಿವಾಳಿಯಾಗಿದೆ

ವರ್ಷ ತುಂಬಿದ ಬಳಿಕ ಆಯಾ ಕಚೇರಿ ವ್ಯಾಪ್ತಿಯಲ್ಲಿ ಜನನ ಮತ್ತು ಮರಣ ಪತ್ರ ಸಿಗುವು ದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನಿಸಿದ್ದರೆ ತಹಶೀಲ್ದಾರ್ ಬಳಿ ಹಾಗೂ ನಗರ ವ್ಯಾಪ್ತಿಯಲ್ಲಿ ಜನಿಸಿದ್ದರೆ ನಗರ ಸಭೆಯ ಮೂಲಕ 'ಹಿಂಬರಹ' ಪಡೆದುಕೊಂಡು ಪಾಲಕರು ನ್ಯಾಯಾಲ ಯಕ್ಕೆ ತೆರಳಬೇಕು.

ನ್ಯಾಯಾಲಯದಲ್ಲಿ ಜನನ ಮತ್ತು ಮರಣ ಪತ್ರ ಪಡೆಯಲು ತಾಲೂಕು ಕಚೇರಿಯಿಂದ ಹಿಂಬರಹ ಅತ್ಯಂತ ಅವಶ್ಯಕವಾಗಿದೆ. ಆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜನನ ಮತ್ತು ಮರಣ ಪತ್ರದ ಹಿಂಬರಹ ನೀಡಲು ಜನರಿಗೆ ಸತಾಯಿಸುತ್ತಿದ್ದಾರೆ.ಈ ಕೂಡಲೇ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

ತಾಲ್ಲೂಕು ದಂಡಾಧಿಕಾರಿಗಳು ತಕ್ಷಣವೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಜನನ ಮತ್ತು ಮರಣ ಪತ್ರದ ಹಿಂಬರಹ ನೀಡಲು ಜನರಿಗೆ ಸತಾಯಿಸಬೇಡಿ. ಕಚೇರಿಗೆ ಬಂದ ಅರ್ಜಿಗಳು ದಾಖಲೆಗಳು ಪರಿಶೀಲನೆ ಮಾಡಲಿ ಕೂಡಲೇ ಅವರಿಗೆ ಹಿಂಬರಹ ನೀಡಿ ಎಂದು ತಾಕಿತು ಮಾಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.