IND vs PAK: ಭಾರತಕ್ಕೆ ಸ್ಪರ್ಧಾತ್ಮಕ ಮೊತ್ತದ ಗೆಲುವಿನ ಗುರಿ ನೀಡಿದ ಪಾಕ್
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಕಮಾಲ್ ಮಾಡುವಲ್ಲಿ ವಿಫಲರಾದರು. 8 ಓವರ್ ಎಸೆದು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮಿಂಚಿದ್ದು ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮಾತ್ರ. 40 ರನ್‌ಗೆ 3 ವಿಕೆಟ್ ಕಿತ್ತರು. ಉಳಿದಂತೆ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರೆ, ಹರ್ಷಿತ್ ರಾಣ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.


ದುಬೈ: ಸಂಘಟಿತ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ(IND vs PAK) ತಂಡ ಭಾನುವಾರದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಪರ್ಧಾತ್ಮಕ 241 ರನ್ ಬಾರಿಸಿ ಭಾರತಕ್ಕೆ ಸವೋಲೊಡ್ಡಿದೆ. ರೋಹಿತ್ ಶರ್ಮ ಪಡೆ ಗೆಲುವಿಗೆ 242 ರನ್ ಬಾರಿಸಬೇಕಿದೆ. ಪಾಕಿಸ್ತಾನ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಸೌದ್ ಶಕೀಲ್(62) ಬಾರಿಸಿದ ಅರ್ಧಶತಕ ಮತ್ತು ಭಾರತ ಪರ ಕುಲ್‌ದೀಪ್ ಯಾದವ್ 3 ವಿಕೆಟ್ ಉರುಳಿಸಿದ್ದು ಮೊದಲ ಇನಿಂಗ್ಸ್‌ನ ಹೈಲೈಟ್ ಆಗಿತ್ತು.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಿಜ್ವಾನ್ ಮತ್ತು ಸೌದ್ ಶಕೀಲ್ ಅವರ ಸಣ್ಣ ಬ್ಯಾಟಿಂಗ್ ಹೋರಾಟದ ನೆರವಿನಿಂದ 49.4 ಓವರ್‌ಗಳಲ್ಲಿ 241 ರನ್‌ಗೆ ಸರ್ವಪತನ ಕಂಡಿತು.
ಇನಿಂಗ್ಸ್‌ನ ಮೊದಲ ಓವರ್ ಎಸೆದ ಶಮಿ 5 ವೈಡ್ ಎಸೆದರು. ಕಳೆದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದ ಮಾಜಿ ನಾಯಕ ಬಾಬರ್ ಅಜಂ ಈ ಪಂದ್ಯದಲ್ಲಿ ಕೊಂಚ ಬಿರುಸಿನ ಬ್ಯಾಟಿಂಗ್ ನಡೆಸಿ 23 ರನ್ ಬಾರಿಸಿದರು. ಇವರ ವಿಕೆಟ್ ಪಾಂಡ್ಯ ಪಾಲಾಯಿತು. ಫಖರ್ ಜಮಾನ್ ಬದಲು ಆಡಲಿಳಿದ ಇಮಾಮ್ ಕ್ವಿಕ್ ರನ್ ಕದಿಯುವ ಯತ್ನದಲ್ಲಿ ಅಕ್ಷರ್ ಪಟೇಲ್ ನೇರವಾಗಿ ಚೆಂಡನ್ನು ವಿಕೆಟ್‌ಗೆ ಎಸೆದು ರನೌಟ್ ಮಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 41 ರನ್ ಒಟ್ಟುಗೂಡಿಸಿತು.
ರಿಜ್ವಾನ್-ಶಕೀಲ್ ಆಸರೆ
ಆರಂಭಿಕರಿಬ್ಬರ ವಿಕೆಟ್ ಪತನದ ಬಳಿಕ ಜತೆಯಾದ ನಾಯಕ ರಿಜ್ವಾನ್ ಮತ್ತು ಶಕೀಲ್ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಕೆಲ ಕಾಲ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ರನ್ ಕಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೆ ಅಕ್ಷರ್ ಪಟೇಲ್ ಬೇರ್ಪಡಿಸಿದರು. 46 ರನ್ ಗಳಿಸಿದ್ದ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ರಿಕ್ವಾನ್ ವಿಕೆಟ್ ಪತನಗೊಂಡು 8 ರನ್ ಅಂತರದಲ್ಲಿ ಶಕೀಲ್ ವಿಕೆಟ್ ಕೂಡ ಬಿತ್ತು. ಮೂರನೇ ವಿಕೆಟ್‌ಗೆ ಶಕೀಲ್ ಮತ್ತು ರಿಜ್ವಾನ್ 104 ರನ್ ರಾಶಿ ಹಾಕಿದರು. ಶಕೀಲ್ 5 ಬೌಂಡರಿ ನೆರವಿನಿಂದ 62 ರನ್ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು.
ಇದನ್ನೂ ಓದಿ IND vs PAK: ಟಾಸ್ ಸೋತು ಕೆಟ್ಟ ದಾಖಲೆ ಬರೆದ ಭಾರತ
ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಪಾಕ್ ಮತ್ತೆ ನಾಟಕೀಯ ಕುಸಿತ ಕಂಡಿತು. ಅಂತಿಮವಾಗಿ ಖುಷ್ದಿಲ್ ಶಾ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 38 ರನ್ ಚಚ್ಚಿದರು. ಅಂತಿಮ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಲಾಂಗ್ ಆನ್‌ನಲ್ಲಿ ನಿಂತಿದ್ದ ಕೊಹ್ಲಿಗೆ ಸುಲಭ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇವರ ವಿಕೆಟ್ ಬೀಳುತ್ತಿದ್ದಂತೆ ಪಾಕ್ ಆಲೌಟ್ ಆಯಿತು.
Innings Break!
— BCCI (@BCCI) February 23, 2025
A fine bowling display from #TeamIndia and Pakistan are all out for 2⃣4⃣1⃣
3⃣ wickets for Kuldeep Yadav
2⃣ wickets for Hardik Pandya
A wicket each for Axar Patel & Ravindra Jadeja
Over to our batters 🙌
Scorecard ▶️ https://t.co/llR6bWyvZN#PAKvIND |… pic.twitter.com/Xo9DGpaIrX
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಕಮಾಲ್ ಮಾಡುವಲ್ಲಿ ವಿಫಲರಾದರು. 8 ಓವರ್ ಎಸೆದು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಮಿಂಚಿದ್ದು ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಮಾತ್ರ. 40 ರನ್‌ಗೆ 3 ವಿಕೆಟ್ ಕಿತ್ತರು. ಉಳಿದಂತೆ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರೆ, ಹರ್ಷಿತ್ ರಾಣ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.