ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಚಿಕ್ಕಬಳ್ಳಾಪುರದಲ್ಲಿ ಬೆಟ್ಟ ಅಗೆದು ಇಲಿ ಹಿಡಿದಂತಾದ ಬಿ-ಖಾತಾ ಅಭಿಯಾನ

ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ 90೦ ದಿನಗಳ ಅವಧಿ ನಿಗದಿಪಡಿಸಿ ಒನ್‌ಟೈಮ್ ಸೆಟಲ್‌ಮೆಂಟ್ ಎಂಬಂತೆ ಬಿಖಾತಾ ಆಂದೋ ಲನಕ್ಕೆ ಫೆ 20ರಂದು ಚಾಲನೆ ನೀಡಿದೆ.ಮುಖ್ಯಮಂತ್ರಿಗಳೇ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ನಗರಸಭೆ ಪುರಸಭೆ ಪಟ್ಟಣಸಭೆ ಆಯುಕ್ತರಿಗೆ ಈ ಸಂಬಂಧ ಖಡಕ್ ಸೂಚನೆ ನೀಡಿದ್ದು ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಅಭಿಯಾನ ಯಶಸ್ವಿ ಗೊಳಿಸಲು ಸೂಚಿಸಿದ್ದರು

ಮೂರು ದಿನದ ಅಭಿಯಾನದಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 2418

ಬಿಖಾತಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶಾಸಕ ಪ್ರದೀಪ್ ಈಶ್ವರ್

Profile Ashok Nayak Feb 23, 2025 11:14 PM

ಮುನಿರಾಜು ಎಂ ಅರಿಕೆರೆ

ಅನಧಿಕೃತ ಆಸ್ತಿಗಳ ಮಾಲಿಕರಿಗೆ ಮತ್ತೆ ಎರಡು ದಿನ ವಿಸ್ತರಣೆ ಭಾಗ್ಯ ನೀಡಿದ ನಗರಸಭೆ

ಚಿಕ್ಕಬಳ್ಳಾಪುರ : ಅನಧಿಕೃತ ರೆವಿನ್ಯೂ ಬಡಾವಣೆ, ಮನೆ, ನಿವೇಶನ ಇತ್ಯಾದಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಅಧಿಕೃತವಾಗಿ ಆಸ್ತಿಯ ಹಕ್ಕು ನೀಡಲು ಉದ್ಧೇಶಿಸಿರುವ ಬಿ-ಖಾತಾ ಅಭಿಯಾನದ ಪ್ರಗತಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ನಿರೀಕ್ಷಿತ ಗುರಿಮುಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಇದೊಂತರ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ಹೌದು ರಾಜ್ಯದಲ್ಲಿ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ 90೦ ದಿನಗಳ ಅವಧಿ ನಿಗದಿಪಡಿಸಿ ಒನ್‌ಟೈಮ್ ಸೆಟಲ್‌ಮೆಂಟ್ ಎಂಬಂತೆ ಬಿಖಾತಾ ಆಂದೋಲನಕ್ಕೆ ಫೆ 20ರಂದು ಚಾಲನೆ ನೀಡಿದೆ.

ಇದನ್ನೂ ಓದಿ: Chikkaballapur News: ಚಿಕ್ಕಬಳ್ಳಾಪುರದಲ್ಲಿ ಬೆಟ್ಟ ಅಗೆದು ಇಲಿ ಹಿಡಿದಂತಾದ ಬಿ-ಖಾತಾ ಅಭಿಯಾನ!

ಮುಖ್ಯಮಂತ್ರಿಗಳೇ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ನಗರಸಭೆ ಪುರಸಭೆ ಪಟ್ಟಣಸಭೆ ಆಯುಕ್ತರಿಗೆ ಈ ಸಂಬAಧ ಖಡಕ್ ಸೂಚನೆ ನೀಡಿದ್ದು ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಅಭಿಯಾನ ಯಶಸ್ವಿಗೊಳಿಸಲು ಸೂಚಿಸಿದ್ದರು.

ಮುಖ್ಯಮಂತ್ರಿಗಳ ಆದೇಶವನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕ ಪ್ರದೀಪ್ ಈಶ್ವರ್ ಫೆ.18 ರಿಂದಲೇ ಕ್ಷೇತ್ರದಲ್ಲಿ ಬೀಡುಬಿಟ್ಟು ನಗರವಾಸಿಗಳಿಗೆ ಬಿ-ಖಾತೆ ಮಾಡಿಸಿಕೊಳ್ಳುವಂತೆ ಮನವರಿಕೆ ಮಾಡುತ್ತಾ ವ್ಯಾಪಕವಾದ ಪ್ರಚಾರ ನೀಡಿದ್ದರು.ತಾವು ಹೋದಲ್ಲಿ ಬಂದಲ್ಲಿ ಬಿ-ಖಾತಾ ಬಗ್ಗೆಯೇ ತಿಳುವಳಿಕೆ ಮೂಡಿಸುತ್ತಾ, ಮಾಧ್ಯಮದ ಮೂಲಕವೂ ಸಾಕಷ್ಟು ಪ್ರಚಾರ ನೀಡಿದ್ದರು.೨೮ನೇ ವಾರ್ಡಿನಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮವನ್ನೂ ಹಾಕಿಕೊಂಡು ಆಮೂಲಕವೂ ನಗರವಾಸಿಗಳ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿ ದ್ದರು. ಆದರೂ ಜನತೆ ಎಚ್ಚೆತ್ತುಕೊಂಡು ಖಾತೆ ಮಾಡಿಸಿಕೊಳ್ಳಲು ಮುಂದೆ ಬಾರದಿರು ವುದು ಅಚ್ಚರಿಗೆ ಕಾರಣವಾಗಿದೆ.
ಮೂರುದಿನ-೨೪೧೮ ಅರ್ಜಿ
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಬಾಕಿಯಿರುವ ಒಟ್ಟು ಖಾತೆಗಳ ಸಂಖ್ಯೆ- ೧೪೬೪೮.ಈ ಅಭಿಯಾನ ಪ್ರಾರಂಭವಾದ ಫೆ.೨೦ರಿಂದ ೨೩ರ ಶನಿವಾರದವರೆಗೆ ಕ್ರಮವಾಗಿ ಮೊದಲದಿ೭೧೬, ಎರಡನೇ ದಿನ-೮೭೧, ಮೂರನೇ ದಿನ-೮೩೧ ಒಟ್ಟು ೨೪೧೮ ಮಂದಿ ಯಷ್ಟೇ ಬಿ-ಖಾತೆಗೆ ನಿಗಧಿಪಡಿಸಿರುವ ಎಲ್ಲಾ ದಾಖಲೆಗಳೊಂದಿಗೆ ೩೧ ವಾರ್ಡುಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ.
11  ಸ್ಲಂಗಳಿಗೆ ಖಾತಾ ಭಾಗ್ಯವಿಲ್ಲ
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಹತ್ತಾರು ವರ್ಷಗಳಿಂದ ಅಕ್ರಮವಾಗಿ ತಲೆಯೆತ್ತಿ ರುವ ಕೊಳಚೆ ಪ್ರದೇಶಗಳ ಸಂಖ್ಯೆ ೧೧ ಇವೆ.ಈ ಪೈಕಿ ಕೆಲವೆಡೆ ಸರಕಾರವೇ ಇವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದೆ.ಉಳಿದವರು ಅವರೇ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಆದರೆ ಸರಕಾರ ಕೊಟ್ಟಿರುವ ಮನೆಗಳಿಗೂ ಕೂಡ ಈವರೆಗೆ ಹಕ್ಕುಪತ್ರ ನೀಡಿಲ್ಲ.ಇವರು ಏನು ಮಾಡಬೇಕು,ಹಕ್ಕುಪತ್ರವನ್ನು ತೋರಿಸಿ ಎ ಖಾತೆ ಪಡೆಯಬಹುದು.ಇವರ ಬಳಿ ಯಾವ ದಾಖಲೆಯೂ ಇಲ್ಲದ ಕಾರಣ ಸಾವಿರಾರು ಮಂದಿ ಬಿಖಾತಾ ಅಭಿಯಾನದಿಂದ ದೂರುಉಳಿಯುವಂತಾಗಿದೆ.ನಮ್ಮ ಶಾಸಕರು ೯೦ ದಿನಗಳ ಒಳಗೆ ಕನಿಷ್ಟ ಬಿಖಾತೆ ಮಾಡಿಸಿಕೊಡಲು ಏನಾದರೂ ಯೋಜನೆ ರೂಪಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಇವರಿದ್ದಾರೆ.
ಗೊಂದಲ ಮುಗಿದಿಲ್ಲ
ಈ ಅಭಿಯಾನದಲ್ಲಿಯೇ ಒಂದು ವೇಳೆ ಅರ್ಜಿ ಸಲ್ಲಿಸಿ ಅನಧಿಕೃತ ರೆವಿನ್ಯೂ ಬಡಾವಣೆ, ಮನೆ, ನಿವೇಶನ ಇತ್ಯಾದಿ ಆಸ್ತಿಗಳಿಗೆ ಬಿ ಖಾತಾ ಮಾಡಿಸಿಕೊಂಡರೆ ಭವಿಷ್ಯದಲ್ಲಿ ಅವರಿಗೆ ಎ ಖಾತಾ ದೊರೆಯುವುದೇ ಇಲ್ಲ ಎಂಬ ಸುದ್ದಿ ಕ್ಷೇತ್ರದಾಧ್ಯಂತ ಕಾಡ್ಗಿಚ್ಚಿನಂತೆ ಹರಡಿರು ವುದು ಕೂಡ ಸ್ಪಂದನೆ ಕಡಿಮೆಯಾಗಲು ಕಾರಣವಾಗಿದೆ. ಜತೆಗೆ ಗೊಂದಲ ದೂರ ಮಾಡಲು ಮುಂದಾಗದಿರುವುದು, ನಗರಸಭೆ ಆಡಳಿತ ಮತ್ತು ಶಾಸಕರ ನಡುವೆ ಶೀತಲ ಸಮರ, ಒಣಪ್ರತಿಷ್ಟೆಗಳು ಕೂಡ ಕಾರಣವಾಗಿವೆ.ಇದನ್ನು ಹೀಗೇ ಬಿಟ್ಟರೆ ಚಿಕ್ಕಬಳ್ಳಾ ಪುರದಲ್ಲಿ ಶಾಸಕರು ನಿರೀಕ್ಷೆ ಮಾಡಿದಷ್ಟು ಯಶಸ್ಸು ದೊರೆಯುವುದಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ.

*
ಮೂರು ದಿನಗಳ ಬಿ-ಖಾತಾ ಅಭಿಯಾನ ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರು ಫೆ ೨೩,೨೪ ಎರಡು ದಿನಗಳ ಕಾಲ ಅಭಿಯಾನವನ್ನು ವಿಸ್ತರಣೆ ಮಾಡಿ ಶನಿವಾರ ಸಂಜೆ ಆದೇಶ ಹೊರಡಿಸಿದ್ದಾರೆ.ಈಗಲಾದರೂ ಜನತೆ ಯಾವುದೇ ಗೊಂದಲ ಗಳಿಗೆ ಆಸ್ಪದ ನೀಡದೆ ಸರಕಾರ ನೀಡಿರುವ ಸುವರ್ಣಾವಕಾಶದ ಸದುಪಯೋಗಕ್ಕೆ ಮುಂದಾಗುವುದು ಒಳಿತು. ಶಾಸಕರು ಕೂಡ ಶ್ರೀಮಂತ ಬಡಾವಣೆಯಾದ ಡಿವೈನ್‌ಸಿಟಿ ನಿವಾಸಿಗಳ ಖಾತಾ ಸಮಸ್ಯೆಗೆ ಪರಿಹಾರ ತೋರಿದಂತೆ, ಬಡ ಶ್ರಮಿಕವರ್ಗವೇ ವಾಸವಿರುವ 11 ಸ್ಲಂ ನಿವಾಸಿಗಳಿಗೂ ಖಾತೆ ಮಾಡಿಸಿ ಕೊಡುವ ದೊಡ್ಡ ಮನಸ್ಸು ಮಾಡಬೇಕು. ಆಗ ಮಾತ್ರವೇ ಈ ಅಭಿಯಾನಕ್ಕೆ ಕೀರ್ತಿ ಬರಲಿದೆ ಎನ್ನುವುದು ಕೊಳಗೇರಿ ಜನರ ಆಭಿಪ್ರಾಯ ವಾಗಿದೆ.

ಒಟ್ಟಾರೆ ಬಿಖಾತಾ ಅಭಿಯಾನವನ್ನು 90 ದಿನಗಳ ನಂತರ ಯಾವುದೇ ಕಾರಣಕ್ಕೂ ಮುಂದುವರೆಸುವುದಿಲ್ಲ ಎಂಬುದನ್ನು ಸರಕಾರ ಸ್ಪಷ್ಟವಾಗಿ ಹೇಳಿದ್ದರೂ ಕೂಡ ನಗರವಾಸಿಗಳಿಗೆ ಇದರ ಮಹತ್ವ ಅರಿವಾಗದಿರುವುದು ವಿಚಿತ್ರವಾದರೂ ಸತ್ಯ.ಸರಕಾರವೇ ನೀಡಿರುವ ಅವಕಾಶವನ್ನು ಪಡೆದುಕೊಂಡವರು ಜಾಣರಾದರೆ ಕಳೆದುಕೊಂಡವರು ಪರಿತಪಿಸುವುದಂತೂ ಖಚಿತ.