ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಚಿಂತಾಮಣಿ ಕ್ಷೇತ್ರದಲ್ಲಿ ಎಂಟು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ

ಜಿಲ್ಲಾ ಕೇಂದ್ರದಲ್ಲಿನ ಕನ್ನಡಭವನವನ್ನು ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡುವ ಮೂಲಕ ಜನಬಳಕೆಗೆ ನೀಡಲಾಗುವುದು. ಮೊದಲ ಕಾರ್ಯಕ್ರಮವಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಇಲ್ಲಿಯೇ ಆಯೋಜಿಸಿ ಯಶಸ್ವಿಗೊಳಿಸುವ ಯೋಜನೆ ಹಾಕಿಕೊಳ್ಳ ಲಾಗಿದೆ. ಈ ಕಟ್ಟಡಕ್ಕೆ ಈಗಾ ಗಲೇ ಜಿಲ್ಲಾ ಕನ್ನಡ ಭವನ ಎಂದು ನಾಮಕರಣ ಮಾಡಲಾ ಗಿದ್ದು ಹೆಸರನ್ನು ಕೂಡ ಬರೆಸಲಾಗಿದೆ. ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೂ ಕೂಡ ಯೋಜನೆ ರೂಪಿಸಲಾಗಿದೆ

ಬಡವರ ಪರವಾದ ಯೋಜನೆಗಳನ್ನು ನಿಲ್ಲಿಸುವ ಮಾತೇಯಿಲ್ಲ

ಚಿಂತಾಮಣಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Profile Ashok Nayak Feb 23, 2025 11:08 PM

ಚಿಂತಾಮಣಿ : ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನಪರವಾದ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಕಟಿಬದ್ಧವಾಗಿದ್ದು ಯಾವುದೇ ಕಾರಣಕ್ಕೂ ಜನಪರ ಯೋಜನೆಗಳನ್ನು ನಿಲ್ಲಿ ಸುವ ಮಾತೇಯಿಲ್ಲ. ಈಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ದಿಗೆ ಅನುದಾನ ಕೇಳಲಾಗಿದೆ ಎಂದು ಉನ್ನತಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ತಾಲ್ಲೂಕಿನ ಮಿಂಡಿಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸುಮಾರು 20 ಲಕ್ಷ ವೆಚ್ಚದ ಗ್ರಾಮ ಪಂಚಾಯಿತಿ ಕಟ್ಟಡ ಲೋಕಾರ್ಪಣೆ ಮಾಡ ಅವರು ಮಾತನಾಡಿದರು.

ಇದನ್ನೂ ಓದಿ: Chikkaballapur News: ರೈತರಿಗೆ ಸದಸ್ಯತ್ವ ನೀಡದೆ ಏಕಪಕ್ಷ ಧೋರಣೆ

ಜಿಲ್ಲಾ ಕೇಂದ್ರದಲ್ಲಿನ ಕನ್ನಡಭವನವನ್ನು ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡುವ ಮೂಲಕ ಜನಬಳಕೆಗೆ ನೀಡಲಾಗುವುದು. ಮೊದಲ ಕಾರ್ಯಕ್ರಮವಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಇಲ್ಲಿಯೇ ಆಯೋಜಿಸಿ ಯಶಸ್ವಿಗೊಳಿಸುವ ಯೋಜನೆ ಹಾಕಿಕೊಳ್ಳ ಲಾಗಿದೆ. ಈ ಕಟ್ಟಡಕ್ಕೆ ಈಗಾಗಲೇ ಜಿಲ್ಲಾ ಕನ್ನಡ ಭವನ ಎಂದು ನಾಮಕರಣ ಮಾಡಲಾ ಗಿದ್ದು ಹೆಸರನ್ನು ಕೂಡ ಬರೆಸಲಾಗಿದೆ. ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೂ ಕೂಡ ಯೋಜನೆ ರೂಪಿಸಲಾಗಿದೆ.ನಂದಿ ಬೆಟ್ಟದ ರೋಪ್‌ವೇ,ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ, ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಸುಸಜ್ಜಿತವಾದ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೂ ಅನುದಾನ ಮೀಸಲಿಟ್ಟು ಅಡಿಗಲ್ಲು ಹಾಕಲಾಗು ವುದು ಎಂದರು.

ಜಿಲ್ಲೆಯ ಪ್ರಗತಿಯ ಜತೆಗೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ.ಈ ನಿಟ್ಟಿನಲ್ಲಿ ಚಿಂತಾಮಣಿ ತಾಲೂಕಿನಲ್ಲಿ ಹತ್ತು ಹಲವು ಅಭಿವೃದ್ದಿ ಕೆಲಸಗಳು ಪ್ರಗತಿಯಲ್ಲಿವೆ. ನಲ್ಲಗುಟ್ಟಹಳ್ಳಿಯಿಂದ ವೇಗಲಹಳ್ಳಿ ಕ್ರಾಸ್‌ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ,ಜುಂಜನಹಳ್ಳಿ ಹಾಗೂ ಕಾಪ್ಪಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಯೋಜಿಸಿರುವ ಶುದ್ಧ ಕುಡಿಯುವ ನೀರಿನ ಘಟಕ,ಬೊಮ್ಮಾಲಟಪುರ ಹತ್ತಿರ ನೂತನವಾಗಿ ನಿರ್ಮಿಸಲು ಯೋಜಿಸಿರುವ ಚೆಕ್ ಡ್ಯಾಂನ ಕಾಮಗಾರಿಗಳ ಭೂಮಿಪೂಜೆ ಸೇರಿದಂತೆ ಸುಮಾರು ಎಂಟು ಕೋಟಿ ವೆಚ್ಚದ ವಿವಿಧ ಗ್ರಾಮಗಳಲ್ಲಿ ರಸ್ತೆ ಹಾಗೂ ಅಭಿ ವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಸ್ಕೂಲ್ ಸುಬ್ಬಾರೆಡ್ಡಿ, ಮಾದ ಮಂಗಳ ಚಂದ್ರಪ್ಪ,ರಘುನಾಥ ರೆಡ್ಡಿ,ಬೈರೆಡ್ಡಿ,ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರಾಧ್ಯಕ್ಷರಾದ ಮಾಡಿಕೆರೆ ಮಣಿಕಂಠ ಸೇರಿದಂತೆ ಮತ್ತಿತರರು ಹಾಜರಿದ್ದರು.