ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ರೈತ ಸಂಘ ಸದಸ್ಯತ್ವ ಅಭಿಯಾನ ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಸರ್ಕಾರ ವಿಫಲ : ಜಿಲ್ಲಾ ಸಂಚಾಲಕ ಚನ್ನರಾಯಪ್ಪ

ಎಲ್ಲಂಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುರಾಲುದಿನ್ನೆ ಹಾಗೂ ನೀರಿಗಟ್ಟಿಪಲ್ಲಿ ಗ್ರಾಮದ ರೈತರ ಹೊಲಗಳಿಗೆ ಬಳಿ ಹೋಗಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ  ಸಂಘಸ ಸದಸ್ಯತ್ವ ಅಭಿಯಾ ನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶವನ್ನು ಕಾಯುವ ಸೈನಿಕರು ಎಷ್ಟು ಪ್ರಧಾನವೋ ದೇಶಕ್ಕೆ ರೈತ ಬಾಂಧವರ ಶ್ರಮ ಅಷ್ಟೇ ಮುಖ್ಯವಾಗಿದೆ

ಸೈನಿಕರು ಎಷ್ಟು ಪ್ರಧಾನವೋ ದೇಶಕ್ಕೆ ರೈತ ಬಾಂಧವರ ಶ್ರಮ ಅಷ್ಟೇ ಮುಖ್ಯ

Profile Ashok Nayak Mar 23, 2025 10:27 PM

ಬಾಗೇಪಲ್ಲಿ: ದೇಶದ ಬೆನ್ನೆಲುಬು ರೈತಾಪಿ ವರ್ಗವು ತನ್ನ ಹೊಲದಲ್ಲಿ ಶ್ರಮವನ್ನು ಭೂತಾಯಿಗೆ ಅರ್ಪಿಸಿ ಬೆಳೆಯನ್ನು ಪಡೆಯುತ್ತಾರೆ. ಆದರೆ ರೈತರಿಗೆ ಬೆಂಬಲ ಬೆಲೆ ನೀಡಲು ಸರ್ಕಾರ ವಿಫಲ ವಾಗಿರುವುದರಿಂದ ಹೋರಾಟದ ಹಾದಿ ಹಿಡಿಯಬೇಕಾ ಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಚನ್ನರಾಯಪ್ಪ ಹೇಳಿದರು.

ಇದನ್ನೂ ಓದಿ: Chitradurga Accident: ಭೀಕರ ಅಪಘಾತ; KSRTC ಬಸ್‌ ಡಿಕ್ಕಿಯಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಬಲಿ

ಎಲ್ಲಂಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುರಾಲುದಿನ್ನೆ ಹಾಗೂ ನೀರಿಗಟ್ಟಿಪಲ್ಲಿ ಗ್ರಾಮದ ರೈತರ ಹೊಲಗಳಿಗೆ ಬಳಿ ಹೋಗಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ  ಸಂಘಸ ಸದಸ್ಯತ್ವ ಅಭಿಯಾ ನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶವನ್ನು ಕಾಯುವ ಸೈನಿಕರು ಎಷ್ಟು ಪ್ರಧಾನವೋ ದೇಶಕ್ಕೆ ರೈತ ಬಾಂಧವರ ಶ್ರಮ ಅಷ್ಟೇ ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲ ವಾಗಿವೆ.  ರೈತರ ಸಮಸ್ಯೆಗಳು ಹಾಗೂ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡುವಂತೆ ಹಲವು ಬಾರಿ ಹೋರಾಟ ನಡೆಸಿದರೂ ಸರ್ಕಾರ ವಿಫಲವಾಗಿದೆ. ಮುಂದಿನ ದಿನದಲ್ಲಿ ರೈತರುಗಳೆಲ್ಲ ಸಂಘಟಿತರಾಗಿ ಬೇಡಿಕೆಗಳನ್ನು ಈಡೇರಿಸು ವಂತೆ ಸರ್ಕಾರ ವನ್ನು ಒತ್ತಾಯಿಸುವುದಾಗಿ ಹೇಳಿದರು.

ಬಾಗೇಪಲ್ಲಿ ತಾಲ್ಲೂಕಿನ ರೈತರು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಭೂಮಿ ಪ್ರಶ್ನೆ, ಭೂಮಿ ಭದ್ರತೆ, ಸಾಗುವಳಿ ಚೀಟಿ, ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ,  53, ಹಾಗೂ 57 ಅಡಿಯಲ್ಲಿ ಭೂಮಿಗೆ ಅರ್ಜಿ ಹಾಕಿರವವರಿಗೆ ಭೂಮಿ, ಕಾರ್ಪೊರೇಟ್ ಕಂಪನಿಗಳು ಹಾಗೂ ಕೈಗಾರಿಕಾ ಅಭಿ ವೃದ್ಧಿ ಹೆಸರಿನಲ್ಲಿ ಭೂ ಸ್ವಾಧೀನ ಹೀಗೆ ಹಲವಾರು ಸಮಸ್ಯೆಗಳಿದ್ದು, ರೈತ ಸಂಘದ ಬಲವರ್ಧನೆ ಗಾಗಿ ತಾಲೂಕಿನಾದ್ಯಂತ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಸುತ್ತಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಾಲಕರಾದ ಡಿ.ಟಿ ಮುನಿಸ್ವಾಮಿ .ಜಿಲ್ಲಾ ಸಮಿತಿ ಸದಸ್ಯರಾದ ಆಗಿಟಿ ಮಾಡಕ ಕೃಷ್ಣಪ್ಪ ,ಗುರುರಾಲದಿನ್ನಿ ಮದ್ದಿರೆಡ್ಡಿ  ಕೊಂಡಾ ರೆಡ್ಡಿ, ಆಚೆಪಲ್ಲಿ ಲಕ್ಷ್ಮಣ್ಣ ನೀರಗಟ್ಟಿ ಪಲ್ಲಿ ವೆಂಕಟ ರಾಮರೆಡ್ಡಿ ರೈತ ಮಹಿಳೆ ಮಂಜುಳಾ ವೆಂಕಟ ರಾಮಪ್ಪ ಸುಮಿತ್ರಮ್ಮ ರಾಮಕೃಷ್ಣ ಹಾಗೂ ಪದಾಧಿಕಾರಿಗಳು ಹಾಜರಿದ್ದರು.