ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Chikkaballapur Crime: ಐದು ಜನ ಕಳ್ಳರನ್ನು ಬಂಧಿಸಿದ ಕೆಂಚಾರ್ಲಹಳ್ಳಿ ಪೊಲೀಸರು

ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕುರಿಗಳು ಕಳ್ಳತನವಾಗಿರುವ ಪ್ರಕರಣಗಳು ದಾಖಲಾಗಿದ್ದು ಪೊಲೀಸರು ಕುರಿ ಕಳ್ಳರನ್ನು ಸೆರೆಹಿಡಿಯಲು ಜಿಲ್ಲಾ ರಕ್ಷಣಾಧಿಕಾರಿಗಳಾದ ಕುಶಾಲ್ ಚೌಕ್ಸೆ,ಅಪರ ಪೊಲೀಸ್ ಅಧೀಕ್ಷಕರಾದ ರಾಜಾ ಇಮಾಮ್ ಖಾಸೀಂ, ಚಿಂತಾಮಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮುರಳಿಧರ,ನೇತೃತ್ವದ ತಂಡ ಪ್ಲಾನ್ ಹಾಕಿದ್ದರು

ಕುರಿಗಳ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಕುರಿಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಒಂದು ಚಿಂತಾಮಣಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Profile Ashok Nayak Mar 4, 2025 10:24 PM

ಚಿಂತಾಮಣಿ: ಕುರಿಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಒಂದು ಚಿಂತಾಮಣಿ ಪೊಲೀ ಸರ ಬಲೆಗೆ ಬಿದ್ದಿದ್ದಾರೆ. ಕೆಂಚಾರಹಳ್ಳಿ,ಬಟ್ಲಹಳ್ಳಿ, ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕುರಿಗಳು ಕಳ್ಳತನವಾಗಿರುವ ಪ್ರಕರಣಗಳು ದಾಖಲಾಗಿದ್ದು ಪೊಲೀಸರು ಕುರಿ ಕಳ್ಳರನ್ನು ಸೆರೆಹಿಡಿಯಲು ಜಿಲ್ಲಾ ರಕ್ಷಣಾಧಿಕಾರಿಗಳಾದ ಕುಶಾಲ್ ಚೌಕ್ಸೆ,ಅಪರ ಪೊಲೀಸ್ ಅಧೀಕ್ಷಕರಾದ ರಾಜಾ ಇಮಾಮ್ ಖಾಸೀಂ, ಚಿಂತಾಮಣಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮುರಳಿಧರ,ನೇತೃತ್ವದ ತಂಡ ಪ್ಲಾನ್ ಹಾಕಿದ್ದರು.

ಇದನ್ನೂ ಓದಿ: Crime News: ಮಲ್ಪೆ ಸಮುದ್ರದಲ್ಲಿ ವಿದೇಶಿ ಬೋಟ್‌ ಪತ್ತೆ, ಕೋಸ್ಟ್‌ ಗಾರ್ಡ್‌ನಿಂದ ಸೆರೆ

ಅದರಂತೆ ಪೊಲೀಸರು ಕುರಿಗಳು ಕಳ್ಳತನ ಮಾಡುತ್ತಿದ್ದ ಇರ್ಪಾನ್ ಪಾಷ ಬಿನ್ ಅಮೀರ್ ಜಾನ್ ೩೦ ವರ್ಷ, ಹೊಸ ಗುರಪ್ಪನ ಪಾಳ್ಯ ಬಿ.ಟಿ.ಎಂ ಲೇಔಟ್ ಬೆಂಗಳೂರು,ಸೈಯದ್ ನವೀದ್ ಬಿನ್ ಲೇಟ್ ಸಯ್ಯದ್ ಹಮೀದ್ ೨೫ ವರ್ಷ,೨ ನೇ ಕ್ರಾಸ್ ಬೊಮ್ಮನಹಳ್ಳಿ ಬೆಂಗಳೂರು,ಸಯ್ಯದ್ ಮಾಷನ್ ಬಿನ್ ಸಯ್ಯದ್ ದಸ್ತಗೀರ್, ೨೫ ವರ್ಷ,ಜೆ.ಪಿ.ನಗರ, ಬೆಂಗಳೂರು,ಸಯ್ಯದ್ ವಸೀಂ ಬಿನ್ ಸಯ್ಯದ್ ಯುನೀಸ್,೨೫ ವರ್ಷ, ಶಿಕಾರಿ ಪಾಳ್ಯ, ಬೆಂಗಳೂರು,ಸಯ್ಯದ್ ವಸೀಂ ಬಿನ್ ಸಯ್ಯದ್ ಯುನೀಸ್, ೨೩ ವರ್ಷ, ಶಿಕಾರಿಪಾಳ್ಯ ಬೆಂಗಳೂರು, ಇವರುಗಳನ್ನು ಬಂಧಿಸಿ ಅವರಿಂದ ೨.೫೦,೦೦೦ ಹಣ,ವೋಕ್ಸ್ ವ್ಯಾಗನ್ ವೆಂಟೋ ಕಾರ್ ಹಾಗೂ ೫ ಮೊಬೈಲ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರು, ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಶ್ಲಾಘನೆ ಮಾಡಿದ್ದಾರೆ.