ಜಮೀನು ದೇವಾಲಯಕ್ಕೆ ಸಂಬಂಧಿಸಿದ್ದು ಬಿಟ್ಟುಕೊಡಲು ಮನವಿ ಮಾಡಿದರೆ ಉಡಾಫೆ ಉತ್ತರ ನೀಡಿದ ವಕೀಲ ನವೀನ್ ಹೊನ್ನಶೆಟ್ಟಿಹಳ್ಳಿ
ನರೇಗಾ ಯೋಜನೆ ರಸ್ತೆ ಕೂಡ ಮಾಡಲಾಗಿದೆ. ಇಡೀ ಗ್ರಾಮವನ್ನೇ ಎದುರು ಮಾಡಿಕೊಂಡು ಕಾನೂನು ಕಟ್ಟಳೆ ಬಗ್ಗೆ ಮಾತನಾಡಿದ ವಕೀಲ ನವೀನ್ ಕುಮಾರ್ ದೇವಸ್ಥಾನಕ್ಕೆ ಸಂಬಂಧಿಸಿದ ಕೊಡಗಿ ಜಮೀನು ಬರೆಸಿಕೊಂಡಿರುವುದು ಇಡೀ ಗ್ರಾಮಕ್ಕೆ ಬೇಸರ ತಂದಿದೆ. ಈ ನಿಟ್ಟಿನಲ್ಲಿ ಅನುತನು ರಸ್ತೆಯನ್ನು ಮುಚ್ಚಿ ದ್ದೇವೆ ಎಂದು ಸಮರ್ಥಿಸಿಕೊಂಡರು


ಗುಬ್ಬಿ: ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಖರಾಬು ರಸ್ತೆ ಬಿಡಿಸಿ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿರುವ ವಕೀಲ ನವೀನ್ ಕುಮಾರ್ ಅವರ ಅರ್ಜಿಯಂತೆ ಮೂಲ ನಕಾಶೆಯಲ್ಲಿರುವ ಖರಾಬು ಜಾಗವನ್ನು ಗುರುತು ಮಾಡಿ ಸಾರ್ವಜನಿಕ ರಸ್ತೆ ನಿರ್ಮಿಸಬೇಕು ಎಂದು ಮಾಜಿ ಗ್ರಾಪಂ ಅಧ್ಯಕ್ಷ ಎಚ್.ಎನ್.ಧರ್ಮೇಗೌಡ ಒತ್ತಾಯಿಸಿದರು. ತಾಲ್ಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರ್ವೇ ನಂಬರ್ 47 ರಲ್ಲಿ ವಕೀಲ ಮನೆ ನಿರ್ಮಾಣ ಮಾಡಿದ್ದು ಅಲ್ಲಿಗೆ ಓಡಾಡಲು ಈವರೆಗೂ ಇದ್ದ ರಸ್ತೆ ನನ್ನ ಸ್ವಂತ ಜಮೀನು ಆಗಿದೆ. ಅನು ತನು ಮೇಲೆ ಬಿಟ್ಟ ಜಾಗ ಈಗ ಸಿಸಿರಸ್ತೆ ಮಾಡಲು ಜಲ್ಲಿ ತಂದು ಸುರಿದಿದ್ದೇನೆ.
ನರೇಗಾ ಯೋಜನೆ ರಸ್ತೆ ಕೂಡ ಮಾಡಲಾಗಿದೆ. ಇಡೀ ಗ್ರಾಮವನ್ನೇ ಎದುರು ಮಾಡಿಕೊಂಡು ಕಾನೂನು ಕಟ್ಟಳೆ ಬಗ್ಗೆ ಮಾತನಾಡಿದ ವಕೀಲ ನವೀನ್ ಕುಮಾರ್ ದೇವಸ್ಥಾನಕ್ಕೆ ಸಂಬಂಧಿಸಿದ ಕೊಡಗಿ ಜಮೀನು ಬರೆಸಿಕೊಂಡಿರುವುದು ಇಡೀ ಗ್ರಾಮಕ್ಕೆ ಬೇಸರ ತಂದಿದೆ. ಈ ನಿಟ್ಟಿನಲ್ಲಿ ಅನುತನು ರಸ್ತೆಯನ್ನು ಮುಚ್ಚಿದ್ದೇವೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: Tumul Election: ತುಮುಲ್ ಅಧ್ಯಕ್ಷ ಸ್ಥಾನ ದಲಿತರಿಗೆ ಕೊಟ್ಟಿದ್ದಕ್ಕೆ ಕೋಪವೇಕೆ?: ಎಂಎಲ್‌ಸಿ ರಾಜೇಂದ್ರ ಆಕ್ರೋಶ
ಕೂಡಗಿ ಜಮೀನು ದೇವಾಲಯಕ್ಕೆ ಸಂಬಂಧಿಸಿದ್ದು ಬಿಟ್ಟುಕೊಡಲು ಮನವಿ ಮಾಡಿದರೆ ವಕೀಲ ನವೀನ್ ಹೊನ್ನಶೆಟ್ಟಿಹಳ್ಳಿ ಸುಪ್ರೀಂ ಕೋರ್ಟ್ ಆಗಿದೆಯೇ ಅಥವಾ ವಿಧಾನಸೌಧವೇ ಎಂದು ಉಡಾ ಫೆ ಉತ್ತರ ನೀಡಿದ್ದಾರೆ. ಗ್ರಾಮಕ್ಕೆ ಅಪಮಾನ ಮಾಡಿದ ವಕೀಲರು ಕಾನೂನು ಕಟ್ಟಳೆ ಮೂಲಕವೇ ಖಾರಬು ರಸ್ತೆ ನಿರ್ಮಿಸಿಕೊಳ್ಳಲಿ. ಮೂಲ ನಕಾಶೆಯಂತೇ ಖರಾಬು ಜಾಗ ತಾಲ್ಲೂಕು ಆಡಳಿತ ಗುರುತಿಸಿಕೊಡಲಿ ಎಂದು ಒತ್ತಾಯಿಸಿದ ಅವರು ಊರಿನ ಪಟೇಲ್ ವಂಶಸ್ಥರಾದ ಲಾಯರ್ ನವೀನ್ ತಾಲ್ಲೂಕು ಕಚೇರಿ ಮುಂದೆ ಧರಣಿ ಮಾಡುವುದಾಗಿ ಮಾಧ್ಯಮ ಮೂಲಕ ತಿಳಿಸಿದ್ದಾರೆ. ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಮೂಲ ನಕಾಶೆಯಂತೆ ಖರಾಬು ಗುರುತಿಸಲಿ. ಇಡೀ ಊರು ಒಂದಾಗಿ ದೇವಸ್ಥಾನದ ಜಮೀನು ಬಿಟ್ಟು ಕೊಡಲು ಮನವಿ ಮಾಡಿದ್ದೇವೆ. ಮರಳಿ ನರಸಿಂಹಯ್ಯ ಅವರಿಗೆ ಬಿಟ್ಟಲ್ಲಿ ಅದನ್ನು ಗ್ರಾಮವೇ ದೇವಾಲಯಕ್ಕೆ ಬರೆದುಕೊಡಲಿದೆ ಎಂದು ತಿಳಿಸಿದರು.
ಸ್ಥಳೀಯ ಮುಖಂಡ ಹರೀಶ್ ಮಾತನಾಡಿ ಕೊಡಗೀ ಜಮೀನು ಬರೆಸಿಕೊಂಡಿರುವ ವಕೀಲ ನವೀನ್ ಇಲ್ಲಸಲ್ಲದ ಆರೋಪ ಮಾಡಿ ಎಂಟು ಜನರ ಮೇಲೆ ಪೊಲೀಸ್ ದೂರು ನೀಡಿದ್ದಾರೆ. ಊರಿನ ಸ್ವಾಸ್ಥ್ಯ ಹಾಳು ಮಾಡುವುದು ಹಾಗೂ ಗ್ರಾಮದಲ್ಲಿ ಸಂಘರ್ಷಕ್ಕೆ ದಾರಿ ಮಾಡುವುದು ಹಾಗೂ ನಮ್ಮಲ್ಲೇ ಎತ್ತಿಕಟ್ಟಿ ಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆ. ಅರ್ಚಕ ನರಸಿಂಹಯ್ಯ ವಯೋ ವೃದ್ದರಾಗಿದ್ದು ಅವರನ್ನು ನಾಪತ್ತೆ ಮಾಡಿ ಜಮೀನು ಬರೆಸಿಕೊಂಡಿದ್ದಾರೆ. ಈ ಹಿಂದೆ ನರಸಿಂಹ ಯ್ಯ ಅವರಿಂದ ಅವರ ಸಂಬಂಧಿ ಶೇಷಗಿರಿ ಎಂಬುವವರು ಜಮೀನು ದಾನ ಮೂಲಕ ಬರೆಸಿ ಕೊಂಡಿದ್ದರು. ಆದರೆ ದೂರದ ಸಂಬಂಧಿಗೆ ದಾನ ನೀಡಲು ಕಾನೂನು ತೊಡಕು ಬಂತು. ಆಗ ಉಪ ವಿಭಾಗಾಧಿಕಾರಿ ಕೋರ್ಟ್ ಮೂಲಕ ಮರಳಿ ನರಸಿಂಹಯ್ಯ ಅವರಿಗೆ ಜಮೀನು ಬಂತು.
ಆದರೆ ವಿಚಾರ ತಿಳಿದ ವಕೀಲ ನವೀನ್ ಹಾಗೂ ಶೇಷಗಿರಿ ಇಬ್ಬರು ಸೇರಿ ನರಸಿಂಹಯ್ಯ ಅವರನ್ನು ಕಿಡ್ನಾಪ್ ಮಾಡಿ ವಕೀಲರ ಹೆಸರಿಗೆ ಕ್ರಯ ಮಾಡಿಸಲಾಗಿದೆ. ಈ ಕಿಡ್ನಾಪ್ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲಿಸರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಇಂದಿಗೂ ನರಸಿಂಹಯ್ಯ ಎಲ್ಲಿದ್ದಾರೆ ಯಾರಿಗೂ ತಿಳಿದಿಲ್ಲ. ಕೊಡಗಿ ಜಮೀನು ಖರೀದಿ ನಂತರ ಮತ್ತೊಂದು ಭಾಗದಲ್ಲಿ ಜಮೀನು ಖರೀದಿಸಿ ಮನೆ ನಿರ್ಮಾಣ ಮಾಡಿದ್ದು ಅಲ್ಲಿ ರಸ್ತೆಗೆ ತಕರಾರು ತೆಗೆದಿದ್ದಾರೆ. ಸುಳ್ಳು ದೂರು ದಾಖಲಿಸಿ ಊರಿನಲ್ಲಿ ಘರ್ಷಣೆಗೆ ಕಾರಣವಾಗುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಕಾಂತರಾಜು, ರಮೇಶ್, ಯೋಗೀಶ್, ಪಾಂಡುರಂಗಯ್ಯ, ಮಂಜುನಾಥ್, ನಾಗರಾಜು, ಸೋಮಶೇಖರ್, ಬೇವಿನಗುಡ್ಡಯ್ಯ, ದೇವೇಗೌಡ, ರಾಘವೇಂದ್ರ, ಸಾಗರ್, ಅರ್ಚಕ ನರಸಿಂಹಮೂರ್ತಿ ಇತರರು ಇದ್ದರು.