ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

World Record: ಗಾಂಧಾರಿ ವಿದ್ಯೆ ಮೂಲಕ ʼಹೈ ರೇಂಜ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ʼ ಪುಟ ಸೇರಿದ ಪಾವಗಡದ ಪುಟ್ಟ ಬಾಲಕಿ!

World Record: ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತನ್ನ ಮುಂದೆ ಇರಿಸಿದ ಬಣ್ಣಗಳು, ಸಂಖ್ಯೆಗಳು ಮತ್ತು ನೋಟುಗಳನ್ನು ಸುಲಭವಾಗಿ ಗುರುತಿಸುವ ಮೂಲಕ ಬಾಲಕಿ ವಿಶ್ವ ದಾಖಲೆ ಬರೆದಿದ್ದಾಳೆ. ಪಾವಗಡದ ಶ್ರೀಶೈಲ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಗಾಂಧಾರಿ ವಿದ್ಯೆ ಮೂಲಕ ವಿಶ್ವ ದಾಖಲೆ ಪುಟ ಸೇರಿದ ಪಾವಗಡದ ಬಾಲಕಿ!

Profile Prabhakara R Mar 4, 2025 9:16 PM

ಪಾವಗಡ, ಮಾ. 5: ಪಾವಗಡದ ಶ್ರೀಶೈಲ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಮೆಹತಾಬ್ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ʼಹೈ ರೇಂಜ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ʼನಲ್ಲಿ‌ (High Range Book of World Records) ಹೆಸರು ದಾಖಲಿಸಿದ್ದಾಳೆ. ಬಾಲ್ಯದಲ್ಲೇ ವಿಶೇಷ ಸಾಧನೆ ಮಾಡಿದ ಈ ಪುಟ್ಟ ಪ್ರತಿಭೆ ತನ್ನ ʼಗಾಂಧಾರಿ ವಿದ್ಯೆʼ ಯ ಮೂಲಕ ಗಮನ ಸೆಳೆದಿದ್ದಾರೆ. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ತನ್ನ ಮುಂದೆ ಇರಿಸಿದ ಬಣ್ಣಗಳು, ಸಂಖ್ಯೆಗಳು ಮತ್ತು ನೋಟುಗಳನ್ನು ಸುಲಭವಾಗಿ ಗುರುತಿಸುವ ಮೂಲಕ ಬಾಲಕಿ ವಿಶ್ವ ದಾಖಲೆ ಬರೆದಿದ್ದಾಳೆ.

ಈ ಬಗ್ಗೆ ಮೆಹತಾಬ್ ತಾಯಿ ಮಾತನಾಡಿ, ಮಗಳು ಪಟ್ಟಣದ ಖಾಸಗಿ ಸಂಸ್ಥೆಯಲ್ಲಿ ಗಾಂಧಾರಿ ವಿದ್ಯೆಯ ತರಬೇತಿ ಪಡೆದಿದ್ದು, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ, ತನ್ನ ಮುಂದೆ ಇರಿಸಿದ ಬಣ್ಣಗಳು, ಸಂಖ್ಯೆಗಳು ಮತ್ತು ನೋಟುಗಳನ್ನು ಸುಲಭವಾಗಿ ಗುರುತಿಸುವ ಪ್ರತಿಭೆ ಪ್ರದರ್ಶಿಸಿದ್ದಾಳೆ. ಈ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿದ ಹೈ ರೇಂಜ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ ಸಂಸ್ಥೆ ಮೆಹತಾಬ್ ಸಾಧನೆಯನ್ನು ದಾಖಲು ಮಾಡಿದ್ದು, ಈ ಮೂಲಕ ನಮ್ಮ ಮಗು ನಮ್ಮ ಕುಟುಂಬ ಹಾಗೂ ಶಾಲೆಗೆ ಗೌರವ ತಂದುಕೊಟ್ಟಿದೆ ಎಂದರು.

High Range Book of World Records

ಬಾಲಕಿ ಸಾಧನೆ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀಶೈಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮೆಹತಾಬ್ ಮತ್ತು ಅವರ ಪೋಷಕರಿಗೆ ಸನ್ಮಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಮಂಜುಳಾ ನಾಗಭೂಷಣ್ ಮಾತನಾಡಿ, ನಮ್ಮ ಶಾಲೆಯ ಮೂರನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೆಹತಾಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಪಡುವ ಸಂಗತಿ. ಇಂತಹ ಪ್ರತಿಭೆಗಳಿಗೆ ನಮ್ಮ ಶಾಲೆ ಸದಾ ಬೆಂಬಲ ನೀಡುತ್ತದೆ" ಎಂದು ಹೇಳಿದ್ದಾರೆ.

Pavagada News (5)

ಮೆಹತಾಬ್ ಸಾಧನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳು ಡಾ. ವೆಂಕಟರಾಮಯ್ಯ, ಲಕ್ಷ್ಮಿ ವೆಂಕಟರಾಮಯ್ಯ. ಪ್ರಾಂಶುಪಾಲ ನಾಗೇಂದ್ರ, ಶಿಕ್ಷಕರು, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಶ್ಲಾಘಿಸಿದ್ದು, ಬಾಲಕಿಯ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

(ವರದಿ: ಇಮ್ರಾನ್ ಉಲ್ಲಾ. ಪಾವಗಡ)