Chikkaballapur News: ಅವ್ಯವಹಾರ ನಡೆದಿರುವುದು ಸಾಬೀತು ಪಡಿಸಿದರೆ ರಾಜಿನಾಮೆ ನೀಡಲು ಸಿದ್ದ: ಸೊಸೈಟಿ ಅಧ್ಯಕ್ಷ ಹೆಚ್.ವಿ.ನಾಗರಾಜ್
ಕಳೆದ 30 ವರ್ಷಗಳಿಂದ ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಕೊಂಡು ಬಂದಿದ್ದೇನೆ, ಇದುವರೆಗೂ ನನ್ನ ವಿರುದ್ದ ಯಾವುದೇ ಒಂದು ಭ್ರಷ್ಟಾಚಾರ ಆರೋಪ ಕೇಳಿಬಂದಿಲ್ಲ, ಅದರೆ ಇತ್ತೀಚಿನ ದಿನಗಳಲ್ಲಿ ನಡೆದ ಪರಗೋಡು ಸೊಸೈಟಿಯ ನಿರ್ದೇಶಕರ ಚುನಾಚಣೆಯಲ್ಲಿ ಕಾಂಗ್ರೆ ಸ್ ಬೆಂಬಲಿತ 9 ನಿರ್ದೇಶಕರು ಸೋತಿದ್ದಾರೆ, ಮತದಾರರ ತೀರ್ಪುನ್ನು ನಾನು ಗೌರವಿಸುತ್ತೇನೆ

ಪರಗೋಡು ಸೊಸೈಟಿಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತು ಪಡಿಸಿದರೆ ರಾಜಿನಾಮೆ ನೀಡಲು ಸಿದ್ದ ಎಂದು ಸೊಸೈಟಿ ಅಧ್ಯಕ್ಷ ಹೆಚ್.ವಿ.ನಾಗರಾಜ್ ತಿಳಿಸಿದರು.

ಬಾಗೇಪಲ್ಲಿ: ತಾಲೂಕಿನ ಪರಗೋಡು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘ ದಲ್ಲಿ ಒಂದು ನಯಾ ಪೈಸೆ ಅವ್ಯವಹಾರ ನಡೆದಿರುವುದು ಸಾಬೀತು ಪಡಿಸಿದರೆ ನಾನು ರಾಜಿನಾಮೆ ನೀಡಲು ಸಿದ್ದನಿದ್ದೇನೆ, ಅಕ್ರಮ ಸಾಬೀತು ಪಡಿಸದಿದ್ದರೆ ನೀವು ರಾಜಿನಾಮೆ ನೀಡಲು ಸಿದ್ದವೇ ಎಂದು ಪರಗೋಡು ಸೊಸೈಟಿ ಅಧ್ಯಕ್ಷ ಹೆಚ್.ವಿ.ನಾಗರಾಜ್ ಸಂಸದ ಡಾ.ಕೆ.ಸುಧಾಕರ್ ಬೆಂಬಲಿತ ನೂತನ ನಿರ್ದೇಶಕರಿಗೆ ಸವಾಲ್ ಹಾಕಿದ್ದಾರೆ. ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಸೊಸೈಟಿ ಅಧ್ಯಕ್ಷ ಹೆಚ್.ವಿ.ನಾಗರಾಜ್ ಹಾಗೂ ಕಾಂಗ್ರೆ ಸ್ ಪಕ್ಷದ ಮುಖಂಡರು ಸುದ್ದಿಗೋಷ್ಠಿ ಅಯೋಜಿಸಿ ಬಿಜೆಪಿ ಬೆಂಬಲಿತ ಸೊಸೈಟಿ ನಿರ್ದೇ ಶಕರ ಆರೋಪಕ್ಕೆ ಟಾಂಗ್ ನೀಡಿ ನಿರ್ದೇಶಕ ಸ್ಥಾನದ ರಾಜಿನಾಮೆಯ ಸವಾಲ್ ಹಾಕಿರು ತ್ತಾರೆ.
ಬಾಗೇಪಲ್ಲಿ ತಾಲೂಕಿನ ಪರಗೋಡು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಗಳಿಗೆ ಫೆ.16ರಂದು ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ 3 ನಿರ್ದೇಶಕರು, ಸಂಸದ ಡಾ.ಕೆ.ಸುಧಾಕರ್ ಬಿಜೆಪಿ ಬೆಂಬಲಿತ 9 ನಿರ್ದೇಶಕರು ಜಯಬೇರಿ ಬಾರಿಸಿದ್ದು, ಗೆಲುವಿನ ಸಂಭ್ರಮಾಚರಣೆ ಸಮಯದಲ್ಲಿ ಸೊಸೈಟಿ ಹಣಕಾಸು ವ್ಯವಹಾರ ದಲ್ಲಿ ಅಕ್ರಮ ಹಾಗೂ ಕೃಷಿ ಸಾಲ ಮಂಜೂರಾತಿಗಾಗಿ ರೈತರಿಂದ ಲಂಚ ಸ್ವೀಕರಿಸಿದ್ದಾ ರೆಂದು ಸೊಸೈಟಿ ಅಧ್ಯಕ್ಷ ಹೆಚ್.ವಿ.ನಾಗರಾಜ್ ವಿರುದ್ದ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಹಾಗೂ ಬಿಜೆಪಿ ಬೆಂಬಲಿತ ನಿರ್ದೇಶಕ ಎ.ಗೋಪಾಲಕೃಷ್ಣ ಗಂಬೀರ ಆರೋಪ ಮಾಡಿರು ತ್ತಾರೆ.
ಇದನ್ನೂ ಓದಿ: Chikkaballapur News: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ದತೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಸೂಚನೆ
ಬಿಜೆಪಿ ಬೆಂಬಲಿತ ನಿರ್ದೇಶಕರ ಆರೋಪಕ್ಕೆ ಸೊಸೈಟಿ ಅಧ್ಯಕ್ಷ ಹೆಚ್.ವಿ.ನಾಗರಾಜ್ ಪ್ರತಿಕ್ರಿಯಿಸಿ, ಕಳೆದ 30 ವರ್ಷಗಳಿಂದ ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಕೊಂಡು ಬಂದಿದ್ದೇನೆ, ಇದುವರೆಗೂ ನನ್ನ ವಿರುದ್ದ ಯಾವುದೇ ಒಂದು ಭ್ರಷ್ಟಾಚಾರ ಆರೋಪ ಕೇಳಿಬಂದಿಲ್ಲ, ಅದರೆ ಇತ್ತೀಚಿನ ದಿನಗಳಲ್ಲಿ ನಡೆದ ಪರಗೋಡು ಸೊಸೈಟಿಯ ನಿರ್ದೇಶಕರ ಚುನಾಚಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರು ಸೋತಿದ್ದಾರೆ, ಮತದಾರರ ತೀರ್ಪುನ್ನು ನಾನು ಗೌರವಿಸುತ್ತೇನೆ. ಅದರೆ ನನ್ನ ವಿರುದ್ದ ದಾಖಲೆ ರಹಿತ ಸುಳ್ಳು ಆರೋಪ ಮಾಡಿರುವ ಬಿಜೆಪಿ ಬೆಂಬಲಿತ ನೂತನ ನಿರ್ದೇಶಕರು ಅಕ್ರಮ ಸಾಬೀತು ಪಡಿಸಿದರೆ ನಾನು ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ, ಅಕ್ರಮ ಸಾಬೀತು ಪಡಿಸ ದಿದ್ದರೆ ನೀವು ರಾಜಿನಾಮೆ ನೀಡಲು ಸಿದ್ದರೇ ಎಂದು ನೂತನ ಸೊಸೈಟಿ ನಿರ್ದೇಶಕ ರಿಗೆ ಸವಾಲ್ ಹಾಕಿ ಬೇಸರ ವ್ಯಕ್ತಪಡಿಸಿರುತ್ತಾರೆ.
ಈ ಸಂದರ್ಭದಲ್ಲಿ ಪರಗೋಡು ಸೊಸೈಟಿ ನಿರ್ದೇಶಕ ಯಂಡ್ರಕಾಯಲಪಲ್ಲಿ ಶ್ರೀನಿವಾಸ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿ.ಶಿವಪ್ಪ, ಮದ್ದಿಲೇಟಿರೆಡ್ಡಿ, ಲಕ್ಷ್ಮಣಯ್ಯ, ನರಸಿಂಹಪ್ಪ, ವೆಂಕಟಸ್ವಾಮಿ ನಾಯ್ಡು ಮತ್ತಿತರರು ಇದ್ದರು.