Chikkaballapur Crime: ಹಬ್ಬದ ದಿನವೇ ಆದಿಯೋಗಿ ದರ್ಶನಕ್ಕೆ ಬಂದ ಇಬ್ಬರು ಯುವಕರು ಅಪಘಾತಕ್ಕೆ ಬಲಿ
ಹೆಲ್ಮೆಟ್ ಧರಿಸಿದ್ದರೂ ಮುಂಬದಿ ಬೈಕ್ ಸವಾರ ಸರಿಯಾಗಿ ಹೆಲ್ಮೆಟ್ ಲಾಕ್ ಮಾಡಿ ಕೊಂಡಿರ ಲಿಲ್ಲ ಹಾಗೂ ಹಿಂಬದಿ ಬೈಕ್ ಸವಾರ ಹಾಫ್ ಹೆಲ್ಮೆಟ್ ಧರಿಸಿದ್ದ. ಹೀಗಾಗಿ ಅಪಘಾತದ ರಭಸಕ್ಕೆ ತಲೆಗೆಳಿಗೆ ತೀವ್ರತರವಾದ ಪೆಟ್ಟಾಗಿ ಮೆದುಳು ನಿಷ್ಕ್ರಿಯವಾದ ಪರಿಣಾಮ ಇಬ್ಬರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ


ಚಿಕ್ಕಬಳ್ಳಾಪುರ : ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಈಶಾ ಆದಿಯೋಗಿ ದರ್ಶನ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದ ಇಬ್ಬರು ಯುವಕರು ಅಪಘಾತದಲ್ಲಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಸೇತುವೆ ಬಳಿ ನಡೆದಿದೆ. ನೇಪಾಳ ಮೂಲದ ಸುನಿಲ್ ಬಿಸ್ತೂರಿ ಹಾಗೂ 26 ವರ್ಷದ ಕುಜಲ್ ಭಂಡಾರಿ ಮೃತರು. ಈ ಇಬ್ಬರು ಬೆಂಗಳೂರಿನ ಅಪಾರ್ಟ್ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸ ಮಾಡು ತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನಿAದ ಗುರುವಾರ ಬೆಳಿಗ್ಗೆ ಬೈಕ್ ನಲ್ಲಿ ಸ್ನೇಹಿತರ ಜೊತೆಗೂಡಿ ಬಂದಿದ್ದ ಇವರು ಇಶಾ ಆದಿಯೋಗಿಯ ದರ್ಶನ ಪಡೆದು ವಾಪಾಸ್ ಆಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಸಿಮೆಂಟ್ ಲಾರಿಗೆ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Crime News: ಮಲ್ಪೆ ಸಮುದ್ರದಲ್ಲಿ ವಿದೇಶಿ ಬೋಟ್ ಪತ್ತೆ, ಕೋಸ್ಟ್ ಗಾರ್ಡ್‌ನಿಂದ ಸೆರೆ
ಹೆಲ್ಮೆಟ್ ಧರಿಸಿದ್ದರೂ ಮುಂಬದಿ ಬೈಕ್ ಸವಾರ ಸರಿಯಾಗಿ ಹೆಲ್ಮೆಟ್ ಲಾಕ್ ಮಾಡಿ ಕೊಂಡಿರಲಿಲ್ಲ ಹಾಗೂ ಹಿಂಬದಿ ಬೈಕ್ ಸವಾರ ಹಾಫ್ ಹೆಲ್ಮೆಟ್ ಧರಿಸಿದ್ದ. ಹೀಗಾಗಿ ಅಪಘಾತದ ರಭಸಕ್ಕೆ ತಲೆಗೆಳಿಗೆ ತೀವ್ರತರವಾದ ಪೆಟ್ಟಾಗಿ ಮೆದುಳು ನಿಷ್ಕ್ರಿಯವಾದ ಪರಿಣಾಮ ಇಬ್ಬರು ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.