ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thomas Burleigh Kurishingal: ಹಾಲಿವುಡ್‌ ಚಿತ್ರದಲ್ಲಿಯೂ ಅಭಿನಯಿಸಿದ್ದ ಮಲಯಾಳಂ ನಟ ಥಾಮಸ್ ಬರ್ಲೀ ಕುರಿಶಿಂಗಲ್ ವಿಧಿವಶ

Thomas Burleigh Kurishingal: ಮಲಯಾಳಂ ಚಿತ್ರರಂಗದ ಹಿರಿಯ ನಟ ಥಾಮಸ್‌ ನಿನ್ನೆ(ಡಿ.16) ಮೃತಪಟ್ಟಿದ್ದಾರೆ.

Profile Deekshith Nair Dec 17, 2024 4:24 PM
ತಿರುವನಂತಪುರಂ: ಮಲಯಾಳಂ(Malayalam) ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಥಾಮಸ್ ಬರ್ಲೀ ಕುರಿಶಿಂಗಲ್ (Thomas Burleigh Kurishingal) ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳ ಹಿಂದೆ ಕೇರಳದ (Kerala) ಎರ್ನಾಕುಲಂ (Ernakulam) ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ (ಡಿ. 16) ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ (Died) ಎಂದು ಮೂಲಗಳು ತಿಳಿಸಿವೆ.
ಥಾಮಸ್ ಅವರು ಮಲಯಾಳಂ ಚಲನಚಿತ್ರ ರಂಗದಲ್ಲಿ ಮೊದಲಿಗೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಸತ್ಯನ್ ಜತೆಗೆ ʼತಿರಮಲʼ (1953) ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮಾಲಿವುಡ್‌ನಲ್ಲಿ ತಮ್ಮ ಕಲಾ ಪ್ರತಿಭೆಯ ಮೂಲಕ ಗುರುತಿಸಿಕೊಂಡ ಕುರಿಶಿಂಗಲ್ ಕೆಲವೇ ವರ್ಷಗಳಲ್ಲಿ ಹಾಲಿವುಡ್‌ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಹಲವಾರು ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳ ಮೂಲಕ ಅಪಾರ ಜನಪ್ರೀತಿ ಗಳಿಸಿದರು.
ಕೇರಳದ ಫೋರ್ಟ್ ಕೊಚ್ಚಿಯಲ್ಲಿ 1932ರ ಸೆಪ್ಟೆಂಬರ್ 1ರಂದು ಜನಿಸಿದ ಥಾಮಸ್ ಬರ್ಲೀಗ್ ಕುರಿಶಿಂಗಲ್ ಬಹುಮುಖ ಪ್ರತಿಭೆ. ತಮ್ಮ 21ನೇ ವಯಸ್ಸಿನಲ್ಲಿ ಅವರು ʼತಿರುಮಲʼ (1953) ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ನಟನೆಯ ತರಬೇತಿಗಾಗಿ ಥಾಮಸ್ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿ ಅವರು ತಮ್ಮ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದರು. ಅಮೆರಿಕದಲ್ಲಿ ಅವರು ನೆವರ್ ಸೋ ಫ್ಯೂ (1959) ಸೇರಿದಂತೆ ಇಂಗ್ಲಿಷ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಆಗಾಗ್ಗೆ ಮೆಕ್ಸಿಕನ್ ಕೌಬಾಯ್ ಪಾತ್ರಗಳನನು ನಿರ್ವಹಿಸಿದರು. ವಿಶೇಷವಾಗಿ ಅವರು ʼಮಾಯಾʼ ಎಂಬ ಇಂಗ್ಲಿಷ್ ಮಕ್ಕಳ ಚಲನಚಿತ್ರವನ್ನು ನಿರ್ಮಿಸಿ ದಾಖಲೆ ಬರೆದರು.
ಅವರ ನಟರಾಗಿ ಅಷ್ಟೇ ಅಲ್ಲದೆ, ಜಾದೂಗಾರ, ಪಿಟೀಲು ವಾದಕ ಮತ್ತು ವರ್ಣಚಿತ್ರಕಾರರಾಗಿ ಹೆಸರು ಮಾಡಿದ್ದರು. ಲೇಖಕರಾಗಿಯೂ ಛಾಪು ಮೂಡಿಸಿದ್ದರು. ಹತ್ತಾರು ಕೃತಿಗಳನ್ನು ಪ್ರಕಟಿಸಿದ್ದರು. ʼಬಿಯಾಂಡ್ ಹಾರ್ಟ್ʼ (2000)- ಗದ್ಯ ಕವನಗಳ ಸಂಗ್ರಹ, ʼಓ ಕೇರಳʼ (2007)-ಕಾರ್ಟೂನ್ ಬುಕ್‌, ʼಸೇಕ್ರೆಡ್ ಸ್ಯಾವೇಜ್ʼ (2017) ಸೇರಿದಂತೆ ಹಲವು ಐತಿಹಾಸಿಕ ಕಾದಂಬರಿಗಳನ್ನೂ ಬರೆದಿದ್ದರು.
ತಮ್ಮ ವಿಭಿನ್ನ ನಟನೆ ಮತ್ತು ಅಸಾಮಾನ್ಯ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಥಾಮಸ್ ಬರ್ಲೀಗ್ ಕುರಿಶಿಂಗಲ್ ಅವರು ಪತ್ನಿ ಸೋಫಿ ಮತ್ತು ಮೂವರು ಮಕ್ಕಳಾದ ತಾನ್ಯಾ, ತಮಿನಾ, ತರುಣ್ ಅವರನ್ನು ಅಗಲಿದ್ದಾರೆ.
ತಬಲಾ ಮಾಂತ್ರಿಕ ಝಕೀರ್‌ ಹುಸೇನ್‌ ಇನ್ನಿಲ್ಲ
ವಿಶ್ವಪ್ರಸಿದ್ಧ ತಬಲಾ ವಾದಕ ಝಕೀರ್ ಹುಸೇನ್‌ ಭಾನುವಾರ(ಡಿ.15) ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಬಲಾ ಮಾಂತ್ರಿಕನೆಂದೇ ಜನಪ್ರಿಯರಾಗಿದ್ದ ಝಕೀರ್ ಹುಸೇನ್ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. 73 ವರ್ಷದ ಝಕೀರ್ ಹುಸೇನ್ ಅವರು ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು. ಅಮೆರಿಕದಲ್ಲಿ ನೆಲೆಸಿದ್ದ ಝಕೀರ್ ಅವರು ತಮ್ಮ ಸುದೀರ್ಘ ಸಂಗೀತ ಪಯಣದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಮೂರು ಗ್ರ್ಯಾಮಿ ಪುರಸ್ಕಾರಗಳು ಸೇರಿದಂತೆ ತಮ್ಮ ಸಂಗೀತ ಬದುಕಿನಲ್ಲಿ ಒಟ್ಟು ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈ ಸುದಿಯನ್ನೂ ಓದಿ:Swallowing Live Chick: ಅಯ್ಯೋ! ಹೀಗೂ ಉಂಟಾ?; ಕೋಳಿ ಮರಿ ನುಂಗಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಕೋಳಿ ಇನ್ನೂ ಜೀವಂತ!