ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chaithra Kundapura: ಚೈತ್ರಾ ಕುಂದಾಪುರ ಜೀವನವನ್ನೇ ಬದಲಾಯಿಸಿತು ಬಿಗ್ ಬಾಸ್: ಆಫರ್ ಮೇಲೆ ಆಫರ್

ಮೊನ್ನೆಯಷ್ಟೆ ಚೈತ್ರಾ ಕುಂದಾಪುರ ಮಹಾರಾಷ್ಟ್ರದ ಬೆಡಗಿಯಾಗಿ ಸಖತ್ ಆಗಿ ಕಾಣಿಸಿಕೊಂಡಿದ್ದರು. ಕೆಂಪು ಬಣ್ಣದ ಬಾರ್ಡರ್ ಹಾಗೂ ಪಲ್ಲು ಇರುವ, ಹಸಿರು ಬಣ್ಣದ ಸೀರೆ, ಹಾಗೂ ಕೆಂಪು ಬಣ್ಣದ ಬ್ಲೌಸ್ ಧರಿಸಿ ಮಹಾರಾಷ್ಟ್ರ ಸ್ಟೈಲಿನಲ್ಲಿ ಸೀರೆಯುಟ್ಟಿದ್ದರು. ಇದೀಗ ಮೈತುಂಬಾ ಆಭರಣ ತೊಟ್ಟು ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ.

ಚೈತ್ರಾ ಕುಂದಾಪುರ ಜೀವನವನ್ನೇ ಬದಲಾಯಿಸಿತು ಬಿಗ್ ಬಾಸ್

Chaithra Kundapura

Profile Vinay Bhat Mar 25, 2025 7:14 AM

ಫೈರ್​ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ​ ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaithra Kundapura) ಬಿಗ್ ​ಬಾಸ್​​ನಿಂದ ಹೊರ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ದಿನದಿಂದ ದಿನಕ್ಕೆ ಚೈತ್ರಾ ಅವರ ವರ್ಚಸ್ಸನ್ನು ಹೆಚ್ಚುತ್ತಿದೆ. ದೊಡ್ಮನೆಯೊಳಗೆ ಸೀರೆಯುಟ್ಟು ಎಲ್ಲರ ಮನಸ್ಸು ಗೆದ್ದಿದ್ದ ಚೈತ್ರಾ ಅವರಿಗೆ ಈಗ ಬ್ಯೂಟಿ ಪಾರ್ಲರ್ ಗಳಿಂದ ಆಫರ್ ಮೇಲೆ ಆಫರ್ ಬರ್ತಿದೆ. ಒಂದಾದ್ಮೇಲೆ ಒಂದು ಬ್ಯೂಟಿ ಪಾರ್ಲರ್, ಸೀರೆ ಅಂಗಡಿಗೆ ಹೋಗುವ ಚೈತ್ರಾ, ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಸಖತ್ ಸೈಲಿಶ್ ಲುಕ್​ನಲ್ಲಿ ಮಿಂಚಿದ್ದಾರೆ.

ಬಿಗ್ ​ಬಾಸ್​ನಿಂದ ಹೊರಬಂದ ಬಳಿಕ​ ಚೈತ್ರಾ ಕುಂದಾಪುರ ಅವರು ಸೋಷಿಯಲ್​ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್​ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ಶುರುಮಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್​ ಆಗಿ ಇರುತ್ತಿದ್ದರು. ಆದರೆ, ಬಿಗ್ ​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಎಲ್ಲವೂ ಬದಲಾಗಿ ಬಿಟ್ಟಿದೆ. ದಿನೇ ದಿನೇ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.

ಮೊನ್ನೆಯಷ್ಟೆ ಚೈತ್ರಾ ಕುಂದಾಪುರ ಮಹಾರಾಷ್ಟ್ರದ ಬೆಡಗಿಯಾಗಿ ಸಖತ್ ಆಗಿ ಕಾಣಿಸಿಕೊಂಡಿದ್ದರು. ಕೆಂಪು ಬಣ್ಣದ ಬಾರ್ಡರ್ ಹಾಗೂ ಪಲ್ಲು ಇರುವ, ಹಸಿರು ಬಣ್ಣದ ಸೀರೆ, ಹಾಗೂ ಕೆಂಪು ಬಣ್ಣದ ಬ್ಲೌಸ್ ಧರಿಸಿ ಮಹಾರಾಷ್ಟ್ರ ಸ್ಟೈಲಿನಲ್ಲಿ ಸೀರೆಯುಟ್ಟಿದ್ದರು. ಇದೀಗ ಮೈತುಂಬಾ ಆಭರಣ ತೊಟ್ಟು ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್ಸ್, ಕಮೆಂಟ್​ಗಳು ಬರುತ್ತಿವೆ. ಅಬ್ಬಾ, ಕರ್ಪೂರದ ಗೊಂಬೆ ತರ ಕಾಣುಸ್ತಿದೀರಾ ಚೈತ್ರಕ್ಕಾ ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರ ಈ ಲುಕ್ ಸದ್ಯ ಸಖತ್ ವೈರಲ್ ಆಗ್ತಿದೆ. ಜನ ಕೂಡ ಇವರ ಲುಕ್ ಇಷ್ಟಪಟ್ಟಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿ ಹೊಗಳಿಕೆಯ ಮೆಸೇಜ್ ಗಳಿಂದ ತುಂಬಿ ಹೋಗಿದೆ. ಕರ್ನಾಟಕದ ಕ್ರಶ್​ ಚೈತ್ರಕ್ಕ ಅಂತ ಹೇಳುತ್ತಿದ್ದಾರೆ.

ಬಿಗ್‌ ಬಾಸ್‌ ಕನ್ನಡದಲ್ಲಿ ಚೈತ್ರಾ ಹೆಚ್ಚಿನವರ ಜೊತೆ ಜಗಳವಾಡಿದ್ದರು. ಇವರ ಮಾತಿನ ಚಾತುರ್ಯತೆಯೆ ಇವರನ್ನು ಬಿಬಿಕೆ 11ನಲ್ಲಿ ಫಿನಾಲೆ ಹತ್ತಿರದ ವರೆಗೆ ಕರೆದುಕೊಂಡುಬಂತು. ಅದರಲ್ಲೂ ಚೈತ್ರಾ ಮತ್ತು ರಜತ್‌ ನಡುವಿನ ಜಗಳ-ಪರಸ್ಪರ ಕಾಲು ಎಳೆದುಕೊಳ್ಳುವ ರೀತಿಗಳೆಲ್ಲ ಜನರಿಗೆ ಇಷ್ಟವಾಗಿದ್ದವು. ಎದುರಿನವರು ಯಾರೇ ಆಗಲಿ ಗಟ್ಟಿಯಾಗಿ ನಿಂತು ಚೈತ್ರಾ ತಮ್ಮದೇ ಶೈಲಿಯಲ್ಲಿ ಬಾಯಿಮುಚ್ಚಿಸುತ್ತಿದ್ದರು. ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಇವರಿಗೆ ಹೇಳಿ ಮಾಡಿಸಿದ ಮತ್ತೊಂದು ಶೋ ಬಾಯ್ಸ್ ವರ್ಸಸ್ ಗರ್ಲ್ಸ್​ನಲ್ಲಿ ಮಿಂಚುತ್ತಿದ್ದಾರೆ. ಕಳೆದ ವಾರ ಇವರು ನಾಗವಲ್ಲಿ ಡ್ರೆಸ್ ತೊಟ್ಟು ನೃತ್ಯ ಮಾಡಿದ್ದರು.

Rajath Kishan: ಎಫ್ಐಆರ್ ಆದ್ರೂ ಲಾಂಗ್ ಹಿಡಿದು ರೀಲ್ಸ್ ಮಾಡಿದ ವಿಡಿಯೋವನ್ನು ಇನ್ನೂ ಡಿಲೀಟ್ ಮಾಡದ ರಜತ್