ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Critics Choice Awards 2025: ದಿಲ್ಜಿತ್ ದೋಸಾಂಜ್, ದರ್ಶನ ರಾಜೇಂದ್ರನ್‌ಗೆ ಪ್ರಶಸ್ತಿ, ಇಲ್ಲಿದೆ ವಿಜೇತರ ಸಂಪೂರ್ಣ ಮಾಹಿತಿ

ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ 2025 ವಿಜೇತರ ಪಟ್ಟಿ ಬಿಡುಗಡೆಯಾಗಿದೆ. ಮಲಯಾಳಿ ನಟಿಯರಾದ ದಿವ್ಯ ಪ್ರಭಾ ಮತ್ತು ಕನಿ ಕುಶ್ರುತಿ ನಟಿಸಿರುವ ಪಾಯಲ್ ಕಪಾಡಿಯಾ ಅವರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರವು ತನ್ನ ಆಕರ್ಷಕ ಕಥೆ ಹೇಳುವಿಕೆ ಮತ್ತು ಕಲಾತ್ಮಕ ಪ್ರತಿಭೆಗಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್‌ ಯಾರಿಗೆ ಒಲಿದಿದೆ?

Profile Vishakha Bhat Mar 26, 2025 12:25 PM

ಮುಂಬೈ: ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ 2025 (Critics Choice Awards) ವಿಜೇತರ ಪಟ್ಟಿ ಬಿಡುಗಡೆಯಾಗಿದೆ. ಮಲಯಾಳಿ ನಟಿಯರಾದ ದಿವ್ಯ ಪ್ರಭಾ ಮತ್ತು ಕನಿ ಕುಶ್ರುತಿ ನಟಿಸಿರುವ ಪಾಯಲ್ ಕಪಾಡಿಯಾ ಅವರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರವು ತನ್ನ ಆಕರ್ಷಕ ಕಥೆ ಹೇಳುವಿಕೆ ಮತ್ತು ಕಲಾತ್ಮಕ ಪ್ರತಿಭೆಗಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಮರ್ ಸಿಂಗ್ ಚಮ್ಕಿಲಾ' ಚಿತ್ರದ ಅಭಿನಯಕ್ಕಾಗಿ ದಿಲ್ಜಿತ್ ದೋಸಾಂಜ್ ಅತ್ಯುತ್ತಮ ನಟ ಎಂದೆನಿಸಿಕೊಂಡಿದ್ದಾರೆ. ಪ್ಯಾರಡೈಸ್‌ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ದರ್ಶನಾ ರಾಜೇಂದ್ರನ್‌ ಅವರು ಅತ್ಯುತ್ತಮ ನಟಿ ಪ್ರಶಸಿಗೆ ಭಾಜನರಾಗಿದ್ದಾರೆ.

ಇನ್ನು ಲಾಪತಾ ಲೇಡೀಸ್' ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದಕ್ಕಾಗಿ ರವಿ ಕಿಶನ್ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಗರ್ಲ್ಸ್ ವಿಲ್ ಬಿ ಗರ್ಲ್ಸ್' ಚಿತ್ರದ ಗಮನಾರ್ಹ ಅಭಿನಯಕ್ಕಾಗಿ ಕನಿ ಕುಶ್ರುತಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ತನ್ನದಾಗಿಸಿಕೊಂಡರು. ವೆಬ್‌ ಸೀರಿಸ್‌ ವಿಭಾಗದಲ್ಲಿ , 'ಪೋಚರ್' ಬಹು ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿ, ಅತ್ಯುತ್ತಮ ವೆಬ್ ಸೀರಿಸ್‌ ಪ್ರಶಸ್ತಿಯನ್ನು ಬಾಚಿಕೊಂಡಿತು. . ಸಹನಟಿ ನಿಮಿಷಾ ಸಜಯನ್ 'ಪೋಚರ್' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಈ ಬಾರಿ 'ರಾತ್ ಜವಾನ್ ಹೈ' ಚಿತ್ರಕ್ಕಾಗಿ ಬರುನ್ ಸೋಬ್ತಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ 2025 ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಕಿರುಚಿತ್ರ ವಿಭಾಗ:

  • ಅತ್ಯುತ್ತಮ ಕಿರುಚಿತ್ರ: 'ಓಬರ್'
  • ಅತ್ಯುತ್ತಮ ನಿರ್ದೇಶಕ: ಫರಾಜ್ ಅಲಿ 'ಒಬುರ್'
  • ಅತ್ಯುತ್ತಮ ನಟ: 'ಜಲ್ ತೂ ಜಲಾಲ್ ತು'ಗಾಗಿ ಹರೀಶ್ ಖನ್ನಾ
  • ಅತ್ಯುತ್ತಮ ನಟಿ: 'ತಾಕ್ (ಟ್ರ್ಯಾಕರ್)' ಗಾಗಿ ಜ್ಯೋತಿ ಡೋಗ್ರಾ
  • ಅತ್ಯುತ್ತಮ ಬರಹಗಾರಿಕೆ: 'ಓಬರ್' ಗಾಗಿ ಫರಾಜ್ ಅಲಿ

ಸಾಕ್ಷ್ಯಚಿತ್ರ ವರ್ಗ:

  • ಅತ್ಯುತ್ತಮ ಸಾಕ್ಷ್ಯಚಿತ್ರ: 'ನಾಕ್ಟರ್ನ್ಸ್'

ವೆಬ್ ಸರಣಿ ವರ್ಗ:

  • ಅತ್ಯುತ್ತಮ ವೆಬ್ ಸರಣಿ: 'ಪೋಚರ್'
  • ಅತ್ಯುತ್ತಮ ನಿರ್ದೇಶಕ: 'ಪೋಚರ್' ಗಾಗಿ ರಿಚಿ ಮೆಹ್ತಾ
  • ಅತ್ಯುತ್ತಮ ನಟ: ಬರುನ್ ಸೋಬ್ತಿ 'ರಾತ್ ಜವಾನ್ ಹೈ'
  • ಅತ್ಯುತ್ತಮ ನಟಿ: 'ಪೋಚರ್'ಗಾಗಿ ನಿಮಿಷಾ ಸಜಯನ್
  • ಅತ್ಯುತ್ತಮ ಪೋಷಕ ನಟ: 'ಪೋಚರ್' ಚಿತ್ರಕ್ಕಾಗಿ ದಿಬ್ಯೇಂದು ಭಟ್ಟಾಚಾರ್ಯ • ಅತ್ಯುತ್ತಮ ಪೋಷಕ ನಟಿ: 'ಪೋಚರ್' ಗಾಗಿ ಕಣಿ ಕುಸರುತಿ
  • ಅತ್ಯುತ್ತಮ ಬರವಣಿಗೆ: ರಿಚಿ ಮೆಹ್ತಾ, ಗೋಪನ್ ಚಿದಂಬರನ್, ಸುಪ್ರೋತಿಮ್‌ಸೆನ್‌ಗುಪ್ತಾ,

ಈ ಸುದ್ದಿಯನ್ನೂ ಓದಿ: Deepika Padukone: ಹಲವು ಬಾರಿ ಭಾರತದಿಂದ ಆಸ್ಕರ್‌ ಪ್ರಶಸ್ತಿ ಕಸಿಯಲಾಗಿದೆ; ದೀಪಿಕಾ ಪಡುಕೋಣೆ ಹೀಗೆ ಹೇಳಿದ್ಯಾಕೆ?

ಚಲನಚಿತ್ರ ವಿಭಾಗ:

ಅತ್ಯುತ್ತಮ ಚಿತ್ರ: 'ಆಲ್ ವೀ ಇಮ್ಯಾಜಿನ್ ಆಸ್ ಲೈಟ್'

  • ಅತ್ಯುತ್ತಮ ನಿರ್ದೇಶಕಿ: 'ಆಲ್ ವೀ ಇಮ್ಯಾಜಿನ್ ಆಸ್ ಲೈಟ್' ಗಾಗಿ ಪಾಯಲ್‌ ಕಪಾಡಿಯಾ
  • ಅತ್ಯುತ್ತಮ ಛಾಯಾಗ್ರಹಣ: 'ಆಲ್ ವೀ ಇಮ್ಯಾಜಿನ್ ಆಸ್ ಲೈಟ್' ಗಾಗಿ ರಣಬೀರ್ ದಾಸ್ • ಅತ್ಯುತ್ತಮ ಸಂಕಲನ: ಶಿವಕುಮಾರ್ ವಿ. ಪಣಿಕರ್ - 'ಕಿಲ್' ಚಿತ್ರಕ್ಕಾಗಿ