Shreyas Iyer: ನಾಯಕನಾಗಿ ವಿಶೇಷ ದಾಖಲೆ ಬರೆದ ಶ್ರೇಯಸ್ ಅಯ್ಯರ್
IPL 2025: ನಾಯಕನಾಗಿ ಮೊದಲ ಪಂದ್ಯದಲ್ಲೇ ಅತ್ಯಧಿಕ ರನ್ ಬಾರಿಸಿದ ದಾಖಲೆ ಸಂಜು ಸ್ಯಾಮ್ಸನ್ ಹೆಸರಿನಲ್ಲಿದೆ. ಸಂಜು 2021ರಲ್ಲಿ ರಾಜಸ್ಥಾನ್ ಪರ ಪಂಜಾಬ್ ವಿರುದ್ಧ 119 ರನ್ ಬಾರಿಸಿದ್ದರು. ಕನ್ನಡಿಗ ಮಯಾಂಕ್ ಅಗರ್ವಾಲ್(99*) ದ್ವಿತೀಯ ಸ್ಥಾನದಲ್ಲಿದ್ದಾರೆ.


ಅಹಮದಾಬಾದ್: ಗುಜರಾತ್ ಟೈಟಾನ್ಸ್(GT vs PBKS) ವಿರುದ್ಧ ಮಂಗಳವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್(Shreyas Iyer) ಅರ್ಧಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ಫ್ರಾಂಚೈಸಿಯೊಂದರ ನಾಯಕನಾಗಿ ಮೊದಲ ಪಂದ್ಯದಲ್ಲೇ ಅತ್ಯಧಿಕ ರನ್ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಗುಜರಾತ್ ಎದುರು ಅಯ್ಯರ್ ಅಜೇಯ 97 ರನ್ ಬಾರಿಸಿ ಮಿಂಚಿದ್ದರು.
ನಾಯಕನಾಗಿ ಮೊದಲ ಪಂದ್ಯದಲ್ಲೇ ಅತ್ಯಧಿಕ ರನ್ ಬಾರಿಸಿದ ದಾಖಲೆ ಸಂಜು ಸ್ಯಾಮ್ಸನ್ ಹೆಸರಿನಲ್ಲಿದೆ. ಸಂಜು 2021ರಲ್ಲಿ ರಾಜಸ್ಥಾನ್ ಪರ ಪಂಜಾಬ್ ವಿರುದ್ಧ 119 ರನ್ ಬಾರಿಸಿದ್ದರು. ಕನ್ನಡಿಗ ಮಯಾಂಕ್ ಅಗರ್ವಾಲ್(99*) ದ್ವಿತೀಯ ಸ್ಥಾನದಲ್ಲಿದ್ದಾರೆ. ಅಯ್ಯರ್ ಮೂರನೇ ಸ್ಥಾನದಲ್ಲಿದರೆ. ಇದಕ್ಕೂ ಮುನ್ನ 2018ರಲ್ಲಿ ಶ್ರೇಯಸ್ ಡೆಲ್ಲಿ ವಿರುದ್ಧ ಕೂಡ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಅಜೇಯ 93 ರನ್ ಬಾರಿಸಿದ್ದರು.
ನಾಯಕನಾಗಿ ಮೊದಲ ಪಂದ್ಯದಲ್ಲೇ ಗರಿಷ್ಠ ಮೊತ್ತ ಪೇರಿಸಿದವರು
ಸಂಜು ಸ್ಯಾಮ್ಸನ್-119
ಮಯಾಂಕ್ ಅಗರ್ವಾಲ್-99*
ಶ್ರೇಯಸ್ ಅಯ್ಯರ್-97*
ಫಾಫ್ ಡು ಪ್ಲೆಸಿಸ್-88
ಇದನ್ನೂ ಓದಿ IPL 2025 Points Table: ಐಪಿಎಲ್ ಅಂಕಪಟ್ಟಿಯಲ್ಲಿ ಆರ್‌ಸಿಬಿಗೆ ಎಷ್ಟನೇ ಸ್ಥಾನ?
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಶ್ರೇಯಸ್ 42 ಎಸೆತಗಳಲ್ಲಿ ಅಜೇಯ 97 ರನ್‌ಗಳನ್ನು ಸಿಡಿಸಿದರು. ಇದರಲ್ಲಿ ಅವರು 5 ಬೌಂಡರಿಗಳು ಹಾಗೂ ಬರೋಬ್ಬರಿ 9 ಸಿಕ್ಸರ್‌ಗಳನ್ನು ಸಿಡಿಸಿದರು. ಆ ಮೂಲಕ ಗುಜರಾತ್ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಇದೇ ವೇಳೆ ಅಯ್ಯರ್ ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳನ್ನು ಪೂರ್ಣಗೊಳಿಸಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆ ಹಾಕಿತ್ತು. ಗುರಿ ಹಿಂಬಾಲಿಸಿದ ಗುಜರಾತ್ ಡೆತ್ ಓವರ್‌ಗಳಲ್ಲಿನ ವೈಫಲ್ಯದಿಂದ 5 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.