#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

UP Shocker: ನವಜಾತ ಶಿಶುವಿನ ತಲೆ ತಿಂದ ಬೀದಿ ನಾಯಿಗಳು: ವೈದ್ಯರ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ!

ಆಸ್ಪತ್ರೆ ಆವರಣದೊಳಗೆ ಬೀದಿ ನಾಯಿಗಳು ನವಜಾತ ಶಿಶುವಿನ ತಲೆಯನ್ನು ತಿಂದು ಬಿಸಾಡಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಲಿತ್ ಪುರ್ ಮೆಡಿಕಲ್ ಕಾಲೇಜು ಆವರಣದಲ್ಲಿ ಬೀದಿ ನಾಯಿಗಳು ಮಗುವಿನ ತಲೆಯನ್ನು ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಾಯಿಯನ್ನು ಅಲ್ಲಿಂದ ಓಡಿಸಿದ್ದರು ಎಂದು ತಿಳಿದು ಬಂದಿದೆ.

ನವಜಾತ ಶಿಶುವಿನ ತಲೆ ತಿಂದ ಬೀದಿ ನಾಯಿಗಳು!

ನವಜಾತ ಶಿಶುವಿನ ತಲೆಯನ್ನು ತಿಂದ ಬೀದಿ ನಾಯಿಗಳು

Profile Deekshith Nair Feb 12, 2025 6:30 PM

ಲಖನೌ: ಆಸ್ಪತ್ರೆ ಆವರಣದೊಳಗೆ ಬೀದಿ ನಾಯಿಗಳು ನವಜಾತ ಶಿಶುವಿನ ತಲೆಯನ್ನು ತಿಂದು ಬಿಸಾಡಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ(UP Shocker) ನಡೆದಿದೆ. ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಲಿತ್ ಪುರ್(Lalitpur) ಮೆಡಿಕಲ್ ಕಾಲೇಜು(Medical College) ಆವರಣದಲ್ಲಿ ಬೀದಿ ನಾಯಿಗಳು ಮಗುವಿನ ತಲೆಯನ್ನು ತಿನ್ನುತ್ತಿರುವುದನ್ನು ಗಮನಿಸಿದ ಸ್ಥಳೀಯರು ನಾಯಿಯನ್ನು ಅಲ್ಲಿಂದ ಓಡಿಸಿದ್ದರು ಎಂದು ತಿಳಿದು ಬಂದಿದೆ.

ಭಾನುವಾರ (ಫೆ.09) ಲಲಿತ್ ಪುರ್ ಮೆಡಿಕಲ್‌ ಕಾಲೇಜಿನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮಗುವೊಂದು ಜನಿಸಿತ್ತು. ಮಗುವಿನ ತೂಕ ತುಂಬಾ ಕಡಿಮೆ ಇದ್ದ ಕಾರಣ ತೀವ್ರ ಅನಾರೋಗ್ಯಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ವಿಶೇಷ ಶಿಶು ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು ಎನ್ನಲಾಗಿದೆ. ಮಗು ಜನಿಸಿದಾಗಲೇ ಕೆಲವು ಸಮಸ್ಯೆಗಳಿದ್ದವು. ಮಗುವಿನ ತಲೆ ಬೆಳವಣಿಗೆಯಾಗಿರಲಿಲ್ಲ. ಹೃದಯ ಬಡಿತ ಕೂಡ ಕಡಿಮೆ ಇತ್ತು. ವಿಶೇಷ ಘಟಕದಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿತ್ತು. ನಂತರ ಮಗುವಿನ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿತ್ತು ಎಂದು ಮುಖ್ಯ ವೈದ್ಯಾಧಿಕಾರಿ ಮೀನಾಕ್ಷಿ ಸಿಂಗ್ ತಿಳಿಸಿದ್ದಾರೆ.



ಮಗುವಿನ ಶವವನ್ನು ಚಿಕ್ಕಮ್ಮ ತೆಗೆದುಕೊಂಡು ಹೋಗಿದ್ದರು. ಆಕೆಯ ಹೆಬ್ಬೆಟ್ಟಿನ ಗುರುತು ಗುರುತು ಪಡೆದು ಶವ ನೀಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಮಂಗಳವಾರ(ಫೆ.11) ಮಧ್ಯಾಹ್ನ ಮಗುವಿನ ತಲೆಯನ್ನು ನಾಯಿ ತಿಂದಿರುವ ಸುದ್ದಿ ಗಮನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:PM Modi America Visit: ಇಂದಿನಿಂದ ಪ್ರಧಾನಿ ಮೋದಿ ಅಮೆರಿಕ ಪ್ರವಾಸ; ಇಲ್ಲಿದೆ ಕಾರ್ಯಕ್ರಮಗಳ ವಿವರ

ಮಗುವಿನ ಪ್ರಕರಣದ ಕುರಿತು 24 ಗಂಟೆಯೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ನಾಲ್ವರ ವೈದ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಲಲಿತ್ ಪುರ್ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಡಾ. ನಾಥ್ ತಿಳಿಸಿದ್ದಾರೆ.