ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs KKR: ಚೊಚ್ಚಲ ಐಪಿಎಲ್‌ ಎಸೆತದಲ್ಲೇ ರಹಾನೆ ವಿಕೆಟ್‌ ಕಿತ್ತ ಅಶ್ವನಿ ಕುಮಾರ್ ಯಾರು?

2022ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಪದಾರ್ಪಣೆ ಮಾಡಿದ್ದರು. ಆದರೆ ಕೇವಲ ನಾಲ್ಕು ಪಂದ್ಯಗಳನ್ನು ಆಡಿ 8.50 ರ ಎಕಾನಮಿಯಲ್ಲಿ ಮೂರು ವಿಕೆಟ್‌ಗಳನ್ನು ಕಿತ್ತಿದ್ದರು. ಅಶ್ವನಿ ಪಂಜಾಬ್ ಪರ ಎರಡು ಪ್ರಥಮ ದರ್ಜೆ ಮತ್ತು ನಾಲ್ಕು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಮುಂಬೈ ಪರ ಆಡುವ ಮೊದಲು ನಾಲ್ಕು ಟಿ20 ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು

ಚೊಚ್ಚಲ ಐಪಿಎಲ್‌ ಎಸೆತದಲ್ಲೇ ರಹಾನೆ ವಿಕೆಟ್‌ ಕಿತ್ತ ಅಶ್ವನಿ ಕುಮಾರ್ ಯಾರು?

Profile Abhilash BC Mar 31, 2025 8:27 PM

ಮುಂಬಯಿ: ಕೆಕೆಆರ್‌(MI vs KKR) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‌(IPL 2025)ಗೆ ಪದಾರ್ಪಣೆ ಮಾಡಿದ ಮುಂಬೈ ಇಂಡಿಯನ್ಸ್‌ ತಂಡದ ಯುವ ಎಡಗೈ ವೇಗಿ ಅಶ್ವನಿ ಕುಮಾರ್(Ashwani Kumar) ಚೊಚ್ಚಲ ಪಂದ್ಯದಲ್ಲೇ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕೆಕೆಆರ್‌ ನಾಯಕ ಅಜಿಂಕ್ಯ ರಹಾನೆ(Ajinkya Rahane) ವಿಕೆಟ್‌ ಕೀಳುವ ಮೂಲಕ ಐಪಿಎಲ್ ವೃತ್ತಿಜೀವನದ ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತ ಮುಂಬೈ ತಂಡದ 4ನೇ ಬೌಲರ್‌ ಎನಿಸಿಕೊಂಡರು. ಓಟ್ಟಾರೆಯಾಗಿ ಈ ಸಾಧನೆಗೈದ ವಿಶ್ವದ 10ನೇ ಬೌಲರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಅಶ್ವನಿ ಕುಮಾರ್ ಯಾರು?

ಪಂಜಾಬ್‌ನ 23 ವರ್ಷದ ಎಡಗೈ ವೇಗಿ ಆಗಿರುವ ಅಶ್ವನಿ ಕುಮಾರ್ 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಸಲ್ಪಟ್ಟರು. 2023 ರಲ್ಲಿ ಶೇರ್-ಎ-ಪಂಜಾಬ್ ಟ್ರೋಫಿಯ ಸಮಯದಲ್ಲಿ ಎಡಗೈ ವೇಗಿ ಗಮನ ಸೆಳೆದಿದ್ದರು. ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದ್ದರು. 2019 ರಲ್ಲಿ ರಾಜಸ್ಥಾನ ವಿರುದ್ಧ ಪಂಜಾಬ್ ಪರ ಕೇವಲ 18 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.



2022ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಪದಾರ್ಪಣೆ ಮಾಡಿದ್ದರು. ಆದರೆ ಕೇವಲ ನಾಲ್ಕು ಪಂದ್ಯಗಳನ್ನು ಆಡಿ 8.50 ರ ಎಕಾನಮಿಯಲ್ಲಿ ಮೂರು ವಿಕೆಟ್‌ಗಳನ್ನು ಕಿತ್ತಿದ್ದರು. ಅಶ್ವನಿ ಪಂಜಾಬ್ ಪರ ಎರಡು ಪ್ರಥಮ ದರ್ಜೆ ಮತ್ತು ನಾಲ್ಕು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಮುಂಬೈ ಪರ ಆಡುವ ಮೊದಲು ನಾಲ್ಕು ಟಿ20 ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು.

ಕೆಕೆಆರ್‌ ವಿರುದ್ಧ ಮೂರು ಓವರ್‌ ಬೌಲಿಂಗ್‌ ನಡೆಸಿದ ಅಶ್ವನಿ ಕುಮಾರ್‌ 24 ರನ್‌ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್‌ ಕಿತ್ತು ಮಿಂಚಿದರು.

ಇದನ್ನೂ ಓದಿ IPL 2025: ದ್ರಾವಿಡ್‌ರನ್ನು ಪ್ರಶ್ನೆ ಮಾಡಿದ ರಾಯುಡು ವಿರುದ್ಧ ಭಾರೀ ಆಕ್ರೋಶ

ಮುಂಬೈ ಪರ ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತ ಬೌಲರ್‌

ಅಲಿ ಮುರ್ತಾಜಾ(2010)

ಅಲ್ಜಾರಿ ಜೋಸೆಫ್(2019)

ಡೆವಾಲ್ಡ್ ಬ್ರೆವಿಸ್(2022)

ಅಶ್ವನಿ ಕುಮಾರ್(2025)