ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jasprit Bumrah: ಬುಮ್ರಾ ಐಪಿಎಲ್‌ ಆಡುವುದೇ ಅನುಮಾನ!

ಮೇ ಕೊನೆಯ ವಾರದಲ್ಲಿ ಕೊನೆಗೊಳ್ಳುವ ಐಪಿಎಲ್ 2025 ರ ನಂತರ, ಭಾರತೀಯ ಕ್ರಿಕೆಟ್ ತಂಡ ಜೂನ್ ಮೂರನೇ ವಾರದಿಂದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಹಾರಲಿದೆ. ಈ ಸರಣಿಗೆ ಬುಮ್ರಾ ಲಭ್ಯರಿದ್ದಾರಾ ಎನ್ನುವುದು ಕೂಡ ಸದ್ಯದ ಕುತೂಹಲ.

Jasprit Bumrah: ಬುಮ್ರಾ ಐಪಿಎಲ್‌ ಆಡುವುದೇ ಅನುಮಾನ!

Profile Abhilash BC Mar 31, 2025 9:32 PM

ಮುಂಬಯಿ: ಐಪಿಎಲ್ 2025ರ ಮೊದಲ ಎರಡು ಸುತ್ತಿನ ಪಂದ್ಯಗಳು ಈಗಾಗಲೇ ಮುಗಿದಿವೆ. ಆದರೆ ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ತಂಡಕ್ಕೆ ಯಾವಾಗ ಮರಳುತ್ತಾರೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಬೆನ್ನು ಸೋವಿನ ಸಮಸ್ಯೆಗೆ ಸಿಲುಕಿದ ಬಳಿಕ ಕ್ರಿಕೆಟ್‌ನಿಂದ ಬುಮ್ರಾ ದೂರ ಉಳಿದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಕೂಡ ತಪ್ಪಿಸಿಕೊಂಡಿದ್ದರು. ಇದೀಗ ಎನ್‌ಸಿಎಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಬುಮ್ರಾ ಐಪಿಎಲ್‌ ಆಡಲು ಇನ್ನೂ ಎರಡು ವಾರ ಕಾಲಾವಕಾಶ ಬೇಕಾಗಬಹುದು ಎಂದು ಹೇಳಿದ್ದಾರೆ. ಇದು ಮುಂಬೈ ಇಂಡಿಯನ್ಸ್‌ಗೆ ಭಾರೀ ಹೊಡೆತ ಬಿದ್ದಂತಾಗಿದೆ.

ಮೇ ಕೊನೆಯ ವಾರದಲ್ಲಿ ಕೊನೆಗೊಳ್ಳುವ ಐಪಿಎಲ್ 2025 ರ ನಂತರ, ಭಾರತೀಯ ಕ್ರಿಕೆಟ್ ತಂಡ ಜೂನ್ ಮೂರನೇ ವಾರದಿಂದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಹಾರಲಿದೆ. ಈ ಸರಣಿಗೆ ಬುಮ್ರಾ ಲಭ್ಯರಿದ್ದಾರಾ ಎನ್ನುವುದು ಕೂಡ ಸದ್ಯದ ಕುತೂಹಲ.

ಐಪಿಎಲ್‌ ಆರಂಭಕ್ಕೂ ಮುನ್ನವೇ ಬುಮ್ರಾ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಕ್ರೀಡಾ ವಿಜ್ಞಾನ ತಂಡವು ಮೇಲ್ವಿಚಾರಣೆ ಮಾಡುತ್ತಿದೆ. ಬೆನ್ನು ನೋವಿನಿಂದ ಗುಣಮುಖರಾಗಿದ್ದರೂ ಕೂಡ ಬೌಲಿಂಗ್‌ ಮಾಡುವ ಫಿಟ್‌ನೆಸ್‌ ಹೊಂದಿಲ್ಲ. ಒಂದೊಮ್ಮೆ ಬುಮ್ರಾ ಮುಂದಿನ ಎರಡು ವಾರದ ಒಳಗೆ ಫಿಟ್‌ ಆಗದಿದ್ದರೆ, ಐಪಿಎಲ್‌ನಿಂದಲೇ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2025: ದ್ರಾವಿಡ್‌ರನ್ನು ಪ್ರಶ್ನೆ ಮಾಡಿದ ರಾಯುಡು ವಿರುದ್ಧ ಭಾರೀ ಆಕ್ರೋಶ

ಮುಂಬೈ ಇಂಡಿಯನ್ಸ್‌ ತಂಡದ ಬೌಲಿಂಗ್‌ ಕೋಚ್‌ ಶೇನ್ ಬಾಂಡ್ ಅವರು ಇತ್ತೀಗೆಚೆ ಪದೇಪದೆ ಬೆನ್ನುನೋವಿನ ಗಾಯಕ್ಕೆ ಒಳಗಾಗುತ್ತಿರುವ ಬುಮ್ರಾ ಅವರ ಕ್ರಿಕೆಟ್‌ ವೃತ್ತಿ ಬದುಕು ಅಪಾಯದಲ್ಲಿದೆ ಎಂದು ಹೇಳಿದ್ದರು. ಬಾಂಡ್ ಕೂಡ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಬೆನ್ನು ನೋವಿನಿಂದ ಕ್ರಿಕೆಟ್​ ಕೆರಿಯರ್​ಗೆ ವಿದಾಯ ಹೇಳಿದ್ದರು.

ಬುಮ್ರಾಗೆ ಉಳುಕಿನ ಸಮಸ್ಯೆಯಲ್ಲ, ಬದಲಾಗಿ ಬೆನ್ನಿನ ಮೂಳೆಗೆ ಗಾಯವಾಗಿರಬಹುದು. ಬುಮ್ರಾ ಬೌಲಿಂಗ್‌ ಶೈಲಿ ಅಪಾಯಕಾರಿ ಅವರು ಬೌಲಿಂಗ್‌ ಮಾಡುವಾಗ ಬೆನ್ನು ಹುರಿಗೆ ನೇರವಾಗಿ ಪೆಟ್ಟು ಬೀಳುತ್ತಿದೆ. ಇದೇ ರೀತಿಯ ನೋವು ಮತ್ತೆ ಕಾಣಿಸಿಕೊಂಡರೆ ಅವರ ಕ್ರಿಕೆಟ್‌ ಅಂತ್ಯವಾಗುವ ಸಾಧ್ಯತೆ ಅಧಿಕವಾಗಿದೆ ಎಂದರು.