Chikkaballapur News: ನೂತನವಾಗಿ ನಿರ್ಮಾಣ ಮಾಡಿರುವ ಶಾದಿ ಮಹಲ್ ಸುತ್ತಲೂ ರಕ್ಷಣಾ ಗೋಡೆ ನಿರ್ಮಾಣ
16 ಮಸೀದಿಗಳಿಂದಲೂ ಅಲ್ಲಾಹುನನ್ನು ನೆನೆಯುತ್ತಾ ಪಾದಪಾತ್ರೆ ಮೂಲಕ ಕೊಡಿಕೊಂಡ ರಸ್ತೆಯಲ್ಲಿ ರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಮುಸ್ಲಿಂ ಭಾಂಧವರನ್ನು ಅಲಿಂಗನೆ ಮಾಡಿಕೊಂಡು ಶುಭಾಶಯ ಕೋರಿದರು.

ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭಾಗವಹಿಸಿದ್ದರು

ಬಾಗೇಪಲ್ಲಿ: ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶಾದಿ ಮಹಲ್ ಸುತ್ತಲೂ ರಕ್ಷಣಾ ಗೋಡೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.
ಅವರು ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಸ್ಲಿಂ ಭಾಂಧವರಿಗೆ ಅನೇಕ ಸೌಲಭ್ಯಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದೆ ಹಾಸ್ಟೆಲ್,ಶಾಲೆಗಳು ಹಾಗೂ ಕಾಮಗಾರಿಗಳಲ್ಲಿ ಶೇ.4ರಷ್ಟು ಗುತ್ತಿಗೆ ಮೀಸಲು ಮತ್ತಿತರ ಸೌಲಭ್ಯಗಳನ್ನು ನೀಡಿದೆ ಆದರೆ ಇಂತಹ ಸೌಲಭ್ಯಗಳು ದೇಶದಲ್ಲಿ ಯಾವುದೇ ರಾಜ್ಯ ಸರಕಾರ ನೀಡಿಲ್ಲ ಎಂದರು.
ಬೆಳಗ್ಗೆ ಪಟ್ಟಣದ 16 ಮಸೀದಿಗಳಿಂದಲೂ ಅಲ್ಲಾಹುನನ್ನು ನೆನೆಯುತ್ತಾ ಪಾದಪಾತ್ರೆ ಮೂಲಕ ಕೊಡಿಕೊಂಡ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಮುಸ್ಲಿಂ ಭಾಂಧವರನ್ನು ಅಲಿಂಗನೆ ಮಾಡಿಕೊಂಡು ಶುಭಾಶಯ ಕೋರಿದರು.
ಕಪ್ಪುಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ:ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಪ್ ತಿದ್ದುಪಡಿ ಮಸೂದೆ ಕಾಯ್ದೆ ವಿರುದ್ದ ಮುಸ್ಲಿಂ ಭಾಂಧವರು ಎಡ ಕೈಗೆ ಕಪ್ಪುಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಧರ್ಮಗುರು ಮೌಲಾನಾ ಅಬ್ದುಲ್ ಫಯಾಜ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ, ಸದಸ್ಯ ಗಡ್ಡಂ ರಮೇಶ್, ಬಿ.ಎ.ಬಾಬಾಜಾನ್, ಬಷೀರ್ ಅಹಮದ್,ಮುನೀರ್ ಆಹಮದ್,ಡಾ.ಮಹಮದ್.ಎಸ್.ನೂರಲ್ಲಾ,ನಿಜಾಮುದ್ದೀನ್ ಬಾಬು,ಅನ್ಸರ್ ಭಾಷ,ಸಲೀಂ ಅಹಮದ್,ಜಬೀವುಲ್ಲಾ,ಪರವೇಜ್,ಖಲೀಲ್ ಅಹಮದ್,ಸೈಯದ್ ಯೂಸಪ್,ಶಬೀರ್ ಅಹಮದ್,ಅಧಿಲ್ ಖಾನ್,ಮಹಬೂಬ್ ಭಾಷ, ಮತ್ತಿತರರು ಇದ್ದರು.