ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs MI: ಅಶ್ವನಿ ಕುಮಾರ್ ಘಾತಕ ದಾಳಿ; ಗೆಲುವಿನ ಖಾತೆ ತೆರೆದ ಮುಂಬೈ

ಚೇಸಿಂಗ್‌ ವೇಳೆ ರಯಾನ್ ರಿಕೆಲ್ಟನ್ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದರು. ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿಳಿದ ರೋಹಿತ್‌ ಶರ್ಮ(13) ಈ ಪಂದ್ಯದಲ್ಲೂ ವಿಫಲರಾದರು. ಈ ಮೊತ್ತಕ್ಕೆ 12 ಎಸೆತ ಎದುರಿಸಿದರು. ಸೂರ್ಯಕುಮಾರ್‌ ಯಾದವ್‌ ಅಜೇಯ 27 ರನ್‌ ಬಾರಿಸಿದರೆ, ರಿಕೆಲ್ಟನ್ 5 ಸಿಕ್ಸರ್‌ ಮತ್ತು 4 ಬೌಂಡರಿ ಬಾರಿಸಿ ಅಜೇಯ 62 ರನ್‌ ಗಳಿಸಿದರು. ಕೆಕೆಆರ್‌ ಪರ ರೆಸಲ್‌ 2 ವಿಕೆಟ್‌ ಕಿತ್ತರು.

ಅಶ್ವನಿ ಕುಮಾರ್ ಘಾತಕ ದಾಳಿ; ಗೆಲುವಿನ ಖಾತೆ ತೆರೆದ ಮುಂಬೈ

Profile Abhilash BC Mar 31, 2025 10:30 PM

ಮುಂಬಯಿ: ಯುವ ಎಡಗೈ ವೇಗಿ ಅಶ್ವನಿ ಕುಮಾರ್(24 ಕ್ಕೆ 4) ಘಾತಕ ಬೌಲಿಂಗ್‌ ದಾಳಿಗೆ ನಲುಗಿದ ಹಾಲಿ ಚಾಂಪಿಯನ್‌ ಕೆಕೆಆರ್‌(KKR vs MI), ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌(Mumbai Indians) ವಿರುದ್ಧ 8 ವಿಕೆಟ್‌ ಅಂತರದ ಹೀನಾಯ ಸೋಲು ಕಂಡಿದೆ. ಇದು ಈ ಆವೃತ್ತಿಯಲ್ಲಿ ಮುಂಬೈಗೆ ಒಲಿದ ಮೊದಲ ಗೆಲುವು. ಇದಕ್ಕೂ ಮುನ್ನ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಇಲ್ಲಿನ ವಾಖೆಂಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಮುಂಬೈ ನಾಯಕನ ಆಯ್ಕೆಯನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಸತತ ವಿಕೆಟ್‌ ಕಳೆದುಕೊಂಡ ಕೆಕೆಆರ್‌ 16.2 ಓವರ್‌ಗಳಲ್ಲಿ 116 ರನ್‌ಗೆ ಆಲೌಟ್‌ ಆಯಿತು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ರಯಾನ್ ರಿಕೆಲ್ಟನ್ ಅರ್ಧಶತಕದ ನೆರವಿನಿಂದ 12.5 ಓವರ್‌ಗಳಲ್ಲಿ 2 ವಿಕೆಟ್‌ಗೆ 121 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್‌ ವೇಳೆ ರಯಾನ್ ರಿಕೆಲ್ಟನ್ ಬಿರುಸಿನ ಬ್ಯಾಟಿಂಗ್‌ ಮೂಲಕ ಅರ್ಧಶತಕ ಬಾರಿಸಿದರು. ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿಳಿದ ರೋಹಿತ್‌ ಶರ್ಮ(13) ಈ ಪಂದ್ಯದಲ್ಲೂ ವಿಫಲರಾದರು. ಈ ಮೊತ್ತಕ್ಕೆ 12 ಎಸೆತ ಎದುರಿಸಿದರು. ಸೂರ್ಯಕುಮಾರ್‌ ಯಾದವ್‌ ಅಜೇಯ 27 ರನ್‌ ಬಾರಿಸಿದರು. ಇದೇ ವೇಳೆ ಅವರು ಟಿ20ಯಲ್ಲಿ 8 ಸಾವಿರ ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು. ಕೊನೆಯ ತನಕ ಬ್ಯಾಟಿಂಗ್‌ ನಡೆಸಿದ ರಿಕೆಲ್ಟನ್ 5 ಸಿಕ್ಸರ್‌ ಮತ್ತು 4 ಬೌಂಡರಿ ಬಾರಿಸಿ 62 ರನ್‌ ಗಳಿಸಿದರು. ಕೆಕೆಆರ್‌ ಪರ ರೆಸಲ್‌ 2 ವಿಕೆಟ್‌ ಕಿತ್ತರು.

ಇದನ್ನೂ ಓದಿ IPL 2025: ಲಂಕಾದ ಮಾಜಿ ಕ್ರಿಕೆಟಿಗನೊಂದಿಗೆ ಮಲೈಕಾ ಡೇಟಿಂಗ್‌!

ಚೊಚ್ಚಲ ಎಸೆತದಲ್ಲೇ ವಿಕೆಟ್‌ ಕಿತ್ತ ಅಶ್ವನಿ

ಚೊಚ್ಚಲ ಪಂದ್ಯವನ್ನಾಡಿ 23 ವರ್ಷದ ಅಶ್ವನಿ ಕುಮಾರ್ ತಾನೆಸೆದ ಮೊದಲ ಎಸೆತದಲ್ಲೇ ವಿಕೆಟ್‌ ಬೇಟೆಯಾಡಿದರು. ನಾಯಕ ಅಜಿಂಕ್ಯ ರಹಾನೆ ವಿಕೆಟ್‌ ಕಿತ್ತು ಐಪಿಎಲ್‌ ವಿಕೆಟ್‌ ಖಾತೆ ತೆರೆದ ಅವರು, ಒಟ್ಟು ಮೂರು ಓವರ್‌ ಬೌಲಿಂಗ್‌ ದಾಳಿ ನಡೆಸಿ 4 ವಿಕೆಟ್‌ ಕಿತ್ತು ಮಿಂಚಿದರು. ಈ ಸಾಧನೆಯೊಂದಿಗೆ ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ನಾಲ್ಕನೇ ಬೌಲರ್‌ ಎನಿಸಿಕೊಂಡರು.



ಕೆಕೆಆರ್‌ ಪರ ಅಂಗ್‌ಕ್ರಿಸ್‌ ರಘುವಂಶಿ(26), ರಮಣ್‌ದೀಪ್‌ ಸಿಂ(22) ಹೊರತುಪಡಿಸಿ ಉಳಿದವರೆಲ್ಲ ವಿಫಲರಾದರು. ಆರಂಭಿಕ ಆಟಗಾರರಾದ ಡಿ ಕಾಕ್‌ ಒಂದು ರನ್‌ ಗಳಿಸಿದರೆ, ನಾರಾಯಣ್‌ ಶೂನ್ಯ ಸುತ್ತಿದರು. ಕನ್ನಡಿಗ ಮನೀಷ್‌ ಪಾಂಡೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು. ಒಂದು ಸಿಕ್ಸರ್‌ ಮತ್ತು 2 ಬೌಂಡರಿ ನೆರವಿನಿಂದ 19 ರನ್‌ ಗಳಿಸಿದರು. ಮುಂಬೈ ಪರ ದೀಪಕ್‌ ಚಹರ್‌ 2, ಟ್ರೆಂಡ್‌ ಬೌಲ್ಟ್‌ ಒಂದು ವಿಕೆಟ್‌ ಕಿತ್ತರು.