ಏ.6ರಿಂದ 10ರವರೆಗೆ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ
ಏ. ೭ರಂದು ಸೋಮವಾರ ರಾತ್ರಿ ೯ಗಂಟೆಗೆ ಗರುಡೋತ್ಸವ (ದವನೋತ್ಸವ), ೮ರಂದು ಮಂಗಳವಾರ ರಾತ್ರಿ ೯ಕ್ಕೆ ಕಲ್ಲುಗಾಲಿ ರಥೋತ್ಸವ, ೯ರಂದು ಬುಧವಾರ ರಾತ್ರಿ ೯ಕ್ಕೆ ಗಜಪತಿ ಮೇಲೆ ಸ್ವಾಮಿ ಉತ್ಸವ ಜರುಗಲಿದೆ. ಕೊನೆಯ ದಿನವಾದ ೧೦ರಂದು ಗುರುವಾರ ರಾತ್ರಿ ೧೦ ಗಂಟೆಗೆ ಹನುಮಂತನ ಮೇಲೆ ಸ್ವಾಮಿಯ ವೈಭವದ ಹೂವಿನ ಉತ್ಸವ ನಡೆಯಲಿದೆ.

ಶಿರಾ ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾಥನೆ ಸಲ್ಲಿಸಿದರು.

ಶಿರಾ: ಶಿರಾ ತಾಲೂಕು ಗಿಡಗನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಏ. ೬ರಿಂದ ೧೦ರವರೆಗೆ ನಡೆಯಲಿದೆ. ಏ.6ರಂದು ಭಾನುವಾರ ಬೆಳಗ್ಗೆ 7ಕ್ಕೆ ಗಂಗಾಸ್ನಾನ, ರಾತ್ರಿ ೯ಕ್ಕೆ ಮಡಿತೇರಿನೊಂದಿಗೆ ಜಾತ್ರೆ ಆರಂಭವಾಗಲಿದೆ.
ಏ.7ರಂದು ಸೋಮವಾರ ರಾತ್ರಿ ೯ಗಂಟೆಗೆ ಗರುಡೋತ್ಸವ (ದವನೋತ್ಸವ), 8 ರಂದು ಮಂಗಳ ವಾರ ರಾತ್ರಿ ೯ಕ್ಕೆ ಕಲ್ಲುಗಾಲಿ ರಥೋತ್ಸವ, ೯ರಂದು ಬುಧವಾರ ರಾತ್ರಿ ೯ಕ್ಕೆ ಗಜಪತಿ ಮೇಲೆ ಸ್ವಾಮಿ ಉತ್ಸವ ಜರುಗಲಿದೆ. ಕೊನೆಯ ದಿನವಾದ ೧೦ರಂದು ಗುರುವಾರ ರಾತ್ರಿ ೧೦ ಗಂಟೆಗೆ ಹನುಮಂತನ ಮೇಲೆ ಸ್ವಾಮಿಯ ವೈಭವದ ಹೂವಿನ ಉತ್ಸವ ನಡೆಯಲಿದೆ.
ಇದನ್ನೂ ಓದಿ: Tumkur (Chikkanayanahalli) News: ನಾಲಿಗೆ ಹರಿಬಿಡುವ ಮುನ್ನ ಎಚ್ಚರ : ಅರಳೀಕೆರೆ ಉಮೇಶ್
ಅದೇ ದಿನ ಮಧ್ಯಾಹ್ನ ೨ ಗಂಟೆಗೆ ಉಂಡೆ ಮಂಡೆ, ರಾತ್ರಿ ೭ಕ್ಕೆ ಹರಿಸೇವೆ (ಅನ್ನದಾನ) ಏರ್ಪಡಿಸ ಲಾಗಿದೆ. ಅಲ್ಲದೆ, ಬೆಳಗ್ಗೆ ೯ರಿಂದ ಮಧ್ಯಾಹ್ನ ೨ ಗಂಟೆ ವರೆಗೆ ಬಂದಂತಹ ಭಕ್ತರಿಗೆ ಉಪಾಹಾರ ವ್ಯವಸ್ಥೆ, ಭಕ್ತರಿಂದ ಪಾನಕ, ಮಜ್ಜಿಗೆ, ಹೆಸರುಬೇಳೆ ವಿತರಣೆ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಪಕ್ಕದ ಆಂಧ್ರಪ್ರದೇಶ ಸೇರಿದಂತೆ ರಾಜ್ಯದಲ್ಲಿರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂದು ದೇಗುಲದ ಟ್ರಸ್ಟ್ನವರು ಮನವಿ ಮಾಡಿದ್ದಾರೆ.