ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಉತ್ತರಾಖಂಡಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ; ಮುಖ್ವಾ ದೇವಸ್ಥಾನದಲ್ಲಿ ಗಾಂಗಾರತಿ

ಗುರುವಾರ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಪ್ರವಾಸ ಕೈಗೊಂಡಿದ್ದಾರೆ. ಅವರು ಉತ್ತರಾಖಂಡ ತಲುಪುತ್ತಿದ್ದಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಸ್ವಾಗತಿಸಿದ್ದಾರೆ. ಅವರು ಮುಖ್ವಾ ದೇವಿ ದೇವಸ್ಥಾನದಲ್ಲಿ 'ಗಾಂಗಾರತಿ ' ನೆರವೇರಿಸಿದ್ದಾರೆ. ಅವರು ಹರ್ಸಿಲ್‌ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಉತ್ತರಾಖಂಡಕ್ಕೆ ಭೇಟಿ  ನೀಡಿದ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ

Profile Vishakha Bhat Mar 6, 2025 11:30 AM

ಡೆಹ್ರಾಡೂನ್‌: ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಉತ್ತರಾಖಂಡ ಪ್ರವಾಸ ಕೈಗೊಂಡಿದ್ದಾರೆ. ಅವರು ಉತ್ತರಾಖಂಡ (Uttarakhand) ತಲುಪುತ್ತಿದ್ದಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಸ್ವಾಗತಿಸಿದ್ದಾರೆ. ಅವರು ಮುಖ್ವಾ ದೇವಿ ದೇವಸ್ಥಾನದಲ್ಲಿ 'ಗಾಂಗಾರತಿ ' ನೆರವೇರಿಸಿದ್ದಾರೆ. ಮೋದಿ ಅವರು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಸ್ಥಳೀಯ ಆರ್ಥಿಕತೆ, ಹೋಂಸ್ಟೇಗಳು, ಪ್ರವಾಸೋದ್ಯಮ ವ್ಯವಹಾರಗಳನ್ನು ಹೆಚ್ಚಿಸಲು ಉತ್ತರಾಖಂಡಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಮಂತ್ರಿಯವರು ಮಂತ್ರ ಪಠಣಗಳ ನಡುವೆ ಗಂಗಾ ಮಾತೆಗೆ ಆರತಿ ಮಾಡಿದ್ದಾರೆ. ಅವರು ಹರ್ಸಿಲ್‌ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.



ಮೋದಿ ಅವರ ಆಗಮನದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಉತ್ತಾರಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದೇವಭೂಮಿ ಉತ್ತರಾಖಂಡದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು, ರಾಷ್ಟ್ರ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಯಿತು ಎಂದು ಅವರು ಬರೆದುಕೊಂಡಿದ್ದಾರೆ.



ತಮ್ಮ ಭೇಟಿಯ ಭಾಗವಾಗಿ, ಗಂಗಾ ನದಿಯ ಚಳಿಗಾಲದ ಸ್ಥಳವಾದ ಮುಖ್ವಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಪ್ರಧಾನಿ ಮೋದಿ ಅವರು ಹರ್ಸಿಲ್ ಕಣಿವೆಗೆ ತೆರಳಲಿದ್ದಾರೆ, ಅಲ್ಲಿ ಅವರು ಪಾದಯಾತ್ರೆ ಮತ್ತು ಬೈಕ್ ರ್ಯಾಲಿಗೆ ಚಾಲನೆ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಅವರು ಗಂಗಾ ಮಾತೆಯ ತವರು ಮನೆ ಮುಖಬಾವನ್ನು ತಲುಪಿದಾಗ, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಮಹಿಳೆಯರು ಅವರಿಗೆ ಭವ್ಯ ಸ್ವಾಗತ ನೀಡಿದ್ದಾರೆ. ಪ್ರಧಾನ ಮಂತ್ರಿಯನ್ನು ಸ್ವಾಗತಿಸಲು ಹರ್ಷಿಲ್ ಜನರು ಕೆಳ ಕಣಿವೆಗಳಲ್ಲಿ ಚಳಿಗಾಲದ ವಾಸ್ತವ್ಯದಿಂದ ತಮ್ಮ ಮೂಲ ಮನೆಗಳಿಗೆ ತೆರಳಿದ್ದಾರೆ.



ಈ ಸುದ್ದಿಯನ್ನೂ ಓದಿ: Narendra Modi: ವನ್ಯಜೀವಿ ಸಂರಕ್ಷಣೆಯ ವಂತಾರಾ ಕೇಂದ್ರ ಉದ್ಘಾಟನೆ ಮಾಡಿದ ಪ್ರಧಾನಿ; ಸಿಂಹದ ಮರಿಗೆ ತುತ್ತಿಟ್ಟ ಮೋದಿ

ಉತ್ತರಾಖಂಡ ಸರ್ಕಾರವು ಈ ವರ್ಷ ಚಳಿಗಾಲದ ಪ್ರವಾಸೋದ್ಯಮ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಸಾವಿರಾರು ಭಕ್ತರು ಈಗಾಗಲೇ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥದ ಚಳಿಗಾಲದ ಪೀಠಗಳಿಗೆ ಭೇಟಿ ನೀಡಿದ್ದಾರೆ.