ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs SRH: ಐಪಿಎಲ್‌ ನಿಯಮ ಉಲ್ಲಂಘಿಸಿದ ಇಶಾಂತ್‌ ಶರ್ಮಾಗೆ ಭಾರಿ ದಂಡ!

Ishant Sharma fined 25 Per cent Match Fees: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಐಪಿಎಲ್‌ ನಿಯಮ ಉಲ್ಲಂಘಿಸಿದ ಗುಜರಾತ್‌ ಟೈಟನ್ಸ್‌ ವೇಗಿ ಇಶಾಂತ್‌ ಶರ್ಮಾಗೆ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 25ರಷ್ಟು ದಂಡವನ್ನು ವಿಧಿಸಿದೆ ಹಾಗೂ ಡಿಮೆರಿಟ್‌ ಅಂಕವನ್ನು ನೀಡಲಾಗಿದೆ.

ಐಪಿಎಲ್‌ ನಿಯಮ ಉಲ್ಲಂಘಿಸಿದ ಇಶಾಂತ್‌ ಶರ್ಮಾಗೆ ಭಾರಿ ದಂಡ!

ಇಶಾಂತ್‌ ಶರ್ಮಾಗೆ ದಂಡ

Profile Ramesh Kote Apr 7, 2025 3:39 PM

ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ( Gujarat Titans) ತಂಡ 7 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆದರೆ, ಪಂದ್ಯದಲ್ಲಿ ಐಪಿಎಲ್‌ ನಿಯಮವನ್ನು ಉಲ್ಲಂಘಿಸಿದ ಗುಜರಾತ್‌ ಟೈಟನ್ಸ್‌ ವೇಗಿ ಇಶಾಂಗ್‌ ಶರ್ಮಾಗೆ (Ishant Sharma) ಪಂದ್ಯದ ಸಂಭಾವನೆಯಲ್ಲಿ ಶೇ 25ರಷ್ಟು ದಂಡ ಹಾಗೂ ಒಂದು ಡಿಮೆರಿಟ್‌ ಅಂಕವನ್ನು ನೀಡಲಾಗಿದೆ. ಈ ವಿಷಯವನ್ನು ಐಪಿಎಲ್‌ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪಂದ್ಯ ಮುಗಿದ 12 ವರ್ಷಗಳ ಬಳಿಕ ಐಪಿಎಲ್‌ ಈ ವಿಷಯವನ್ನು ಪ್ರಕಟಿಸಿದೆ.

ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರುವಲ್ಲಿ ಇಶಾಂತ್‌ ಶರ್ಮಾ ವಿಫಲರಾಗಿದ್ದರು. ಬೌಲ್‌ ಮಾಡಿದ ನಾಲ್ಕು ಓವರ್‌ಗಳಲ್ಲಿ ಇಶಾಂತ್‌ ಶರ್ಮಾ ಅವರು ಒಂದೂ ವಿಕೆಟ್‌ ಪಡೆಯದೆ, 53 ರನ್‌ಗಳನ್ನು ಬಿಟ್ಟು ಕೊಟ್ಟಿದ್ದಾರೆ. ಅಂದ ಹಾಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಗಳಿಸಿದ ಒಟ್ಟು ರನ್‌ಗಳ ಪೈಕಿ ಶೇ 30 ರಷ್ಟು ಇಶಾಂತ್‌ ಶರ್ಮಾ ಒಬ್ಬರೇ ಬಿಟ್ಟುಕೊಟ್ಟಿದ್ದಾರೆ.

IPL 2025: ಐಪಿಎಲ್‌ನಲ್ಲಿ 100 ವಿಕೆಟ್‌ ಪೂರ್ತಿಗೊಳಿಸಿದ ಸಿರಾಜ್‌

"ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ ನಿಯಮ ಉಲ್ಲಂಘಿಸಿದ ಗುಜರಾತ್‌ ಟೈಟನ್ಸ್‌ ತಂಡದ ವೇಗಿ ಇಶಾಂತ್‌ ಶರ್ಮಾಗೆ ಪಂದ್ಯದ ಸಂಭಾವನೆಯಲ್ಲಿ ಶೇ 25ರಷ್ಟು ದಂಡವನ್ನು ವಿಧಿಸಲಾಗಿದೆ ಹಾಗೂ ಒಂದು ಡಿಮೆರಿಟ್‌ ಅಂಕವನ್ನು ಕೂಡ ನೀಡಲಾಗಿದೆ," ಎಂದು ಐಪಿಎಲ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

"ಆರ್ಟಿಕಲ್‌ 2.2ರ ಅಡಿಯಲ್ಲಿ ಮೊದಲನೇ ಹಂತದ ಪ್ರಮಾದವನ್ನು ಇಶಾಂತ್‌ ಶರ್ಮಾ ಎಸಗಿದ್ದಾರೆ ಹಾಗೂ ಇದನ್ನು ಗುಜರಾತ್‌ ಟೈಟನ್ಸ್‌ ವೇಗಿ ಒಪ್ಪಿಕೊಂಡಿದ್ದಾರೆ. ಐಪಿಎಲ್‌ ಕೋಡ್‌ ಆಫ್‌ ಕಂಡಕ್ಟ್‌ನ ಮೊದಲ ಹಂತದ ಪ್ರಮಾದಕ್ಕೆ ಸಂಬಂಧಿಸಿದ ನಿರ್ಧಾರವು ಮ್ಯಾಚ್‌ ರೆಫರಿಯ ಅಂತಿಮ ನಿರ್ಧಾರವಾಗಿರುತ್ತದೆ," ಎಂದು ಹೇಳಿದೆ.



2025ರ ಐಪಿಎಲ್‌ ಟೂರ್ನಿಯ ನಿಯಮ ಉಲ್ಲಂಘನೆಗಳು

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ದಂಡ ಪಡೆದುಕೊಂಡ ಮೊದಲ ಆಟಗಾರ ಇಶಾಂತ್‌ ಶರ್ಮಾ. ಇಲ್ಲಿಯ ತನಕ ಐವರು ಆಟಗಾರರಿಗೆ ದಂಡವನ್ನು ವಿಧಿಸಲಾಗಿದೆ. ಇಶಂತ್‌ ಶರ್ಮಾ ಜೊತೆಗೆ ಲಖನೌ ಸೂಪರ್‌ ಜಯಂಟ್ಸ್‌ ಸ್ಪಿನ್ನರ್‌ ದಿಗ್ವೇಶ್‌ ರಾಠಿ, ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ, ರಾಜಸ್ಥಾನ್‌ ರಾಯಲ್ಸ್‌ ತಂಡದ ರಿಯಾನ್‌ ಪರಾಗ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕ ರಿಷಭ್‌ ಪಂತ್‌ ಕೂಡ ಈ ಆವೃತ್ತಿಯಲ್ಲಿ ಪ್ರಮಾದವೆಸಗಿ ದಂಡವನ್ನು ಕಟ್ಟಿದ್ದಾರೆ.

ಸತತವಾಗಿ ನೋಟ್‌ ಬುಕ್‌ ಶೈಲಿಯಲ್ಲಿ ಸಂಭ್ರಮಿಸಿದ ಕಾರಣ ದಿಗ್ವೀಶ್‌ ಸಿಂಗ್‌ಗೆ ದಂಡವನ್ನು ವಿಧಿಸಿದರೆ, ಇನ್ನುಳಿದ ನಾಯಕರಿಗೆ ನಿಧಾನಗತಿಯ ಬೌಲಿಂಗ್‌ ಕಾರಣ ದಂಡವನ್ನು ವಿಧಿಸಲಾಗಿದೆ.

IPL 2025: ಆಟಗಾರರ ಕಳಪೆ ಪ್ರದರ್ಶನದಿಂದ ಬೇಸತ್ತು ಗರಂ ಆದ ಕಾವ್ಯಾ ಮಾರನ್

ಗುಜರಾತ್‌ ಟೈಟನ್ಸ್‌ಗೆ 7 ವಿಕೆಟ್‌ ಜಯ

ಇನ್ನು ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 152 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡಕ್ಕೆ 153 ರನ್‌ಗಳನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡ, ವಾಷಿಂಗ್ಟನ್‌ ಸುಂದರ್‌ ಹಾಗೂ ಶುಭಮನ್‌ ಗಿಲ್‌ ಅವರ ಅತ್ಯುತ್ತಮ ಬ್ಯಾಟಿಂಗ್‌ ನೆರವಿನಿಂದ 16.4 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 153 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಗುಜರಾತ್‌ ಟೈಟನ್ಸ್‌ ತಂಡ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.