ಉನ್ನತ ಮಟ್ಟದ ಸಾರಿಗೆ ಅನುಭವ ಒದಗಿಸಲಿದೆ ಟೊಯೋಟಾ ಕಿರ್ಲೋಸ್ಕರ್
ಭಾರತದ ಮೊದಲ ಸೆಲ್ಫ್- ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಎಸ್ ಯು ವಿ ಎಂಬ ಹೆಗ್ಗಳಿಕೆ ಗಳಿಸಿದ ಮತ್ತು ಅಪಾರ ಗ್ರಾಹಕರಿಂದ ಸಂತೋಷದಿಂದ ಸ್ವೀಕರಿಸಲ್ಪಟ್ಟ ಅರ್ಬನ್ ಕ್ರೂಸರ್ ಹೈರೈಡರ್ ಈಗಾಗಲೇ 1 ಲಕ್ಷ ಮಾರಾಟದ ಮೈಲಿಗಲ್ಲು ದಾಟಿದೆ. ಈ ವಾಹನವು ತನ್ನ ನವೀನ ತಂತ್ರಜ್ಞಾನ, ಅತ್ಯುತ್ತಮ ಇಂಧನ ದಕ್ಷತೆ, ಅತ್ಯುನ್ನತ ಕಾರ್ಯ ಕ್ಷಮತೆ ಮತ್ತು ಪ್ರೀಮಿಯಂ ಚಾಲನಾ ಅನುಭವದ ಮೂಲಕ ಗ್ರಾಹಕರ ಹೃದಯಗಳನ್ನು ಗೆಲ್ಲುತ್ತಿದೆ.


ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಅರ್ಬನ್ ಕ್ರೂಸರ್ ಹೈರೈಡರ್ ನ ಹೊಸ ಅತ್ಯಾಧುನಕ ಫೀಚರ್ ಗಳನ್ನು ಅನಾವರಣ ಮಾಡಿದೆ. ಈ ಫೀಚರ್ ಗಳು ಗ್ರಾಹಕರಿಗೆ ಅತ್ಯುತ್ತಮ ಸುರಕ್ಷತೆ, ಸೌಲಭ್ಯ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ಈ ಹೊಸ ಸುಧಾರಣೆಗಳು ಗ್ರಾಹಕ ಕೇಂದ್ರಿತ ಆವಿಷ್ಕಾರವನ್ನು ಒದಗಿಸುವ ಟೊಯೋಟಾದ ಬದ್ಧತೆಯನ್ನು ಸಾರುತ್ತಿದೆ. ಗ್ರಾಹಕರ ಮೌಲ್ಯಯುತ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ಈ ಸುಧಾರಣೆಗಳನ್ನು ಪರಿಚಯಿಸಲಾಗಿದ್ದು, ಬೆಳೆಯುತ್ತಿರುವ ಮಾರುಕಟ್ಟೆಯ ಟ್ರೆಂಡ್ ಗಳಿಗೆ ಅನುಗುಣವಾಗಿ ಈ ಫೀಚರ್ ಗಳು ಚಾಲನಾ ಅನುಭವ ವನ್ನು ಉನ್ನತೀಕರಿಸುತ್ತವೆ.
ಭಾರತದ ಮೊದಲ ಸೆಲ್ಫ್- ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಎಸ್ ಯು ವಿ ಎಂಬ ಹೆಗ್ಗಳಿಕೆ ಗಳಿಸಿದ ಮತ್ತು ಅಪಾರ ಗ್ರಾಹಕರಿಂದ ಸಂತೋಷದಿಂದ ಸ್ವೀಕರಿಸಲ್ಪಟ್ಟ ಅರ್ಬನ್ ಕ್ರೂಸರ್ ಹೈರೈಡರ್ ಈಗಾಗಲೇ 1 ಲಕ್ಷ ಮಾರಾಟದ ಮೈಲಿಗಲ್ಲು ದಾಟಿದೆ. ಈ ವಾಹನವು ತನ್ನ ನವೀನ ತಂತ್ರಜ್ಞಾನ, ಅತ್ಯುತ್ತಮ ಇಂಧನ ದಕ್ಷತೆ, ಅತ್ಯುನ್ನತ ಕಾರ್ಯ ಕ್ಷಮತೆ ಮತ್ತು ಪ್ರೀಮಿಯಂ ಚಾಲನಾ ಅನುಭವದ ಮೂಲಕ ಗ್ರಾಹಕರ ಹೃದಯಗಳನ್ನು ಗೆಲ್ಲುತ್ತಿದೆ.
ಅರ್ಬನ್ ಕ್ರೂಸರ್ ಹೈರೈಡರ್ ನ ಹೊಸ ಬದಲಾವಣೆಗಳ ಮಾಹಿತಿ ಇಲ್ಲಿವೆ:
ಸುರಕ್ಷತೆ: •ಎಲ್ಲಾ ವೇರಿಯಂಟ್ ಗಳಲ್ಲಿ ಸುರಕ್ಷತೆಗಾಗಿ ಹಲವು ರಚನಾತ್ಮಕ ಬದಲಾವಣೆ ಗಳನ್ನು ಮಾಡಲಾಗಿದೆ. •
6 ಏರ್‌ಬ್ಯಾಗ್‌ಗಳು ಈಗ ಎಲ್ಲಾ ವೇರಿಯಂಟ್ ಗಳಲ್ಲಿ ಸ್ಟಾಂಡರ್ಡ್ ಆಗಿದ್ದು, ಪ್ರಯಾಣಿಕ ರಿಗೆ ಹೆಚ್ಚಿನ ಸುರಕ್ಷತೆ ಒದಸುತ್ತವೆ.
•ಕೆಲವು ವೇರಿಯಂಟ್ ಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (ಇಪಿಬಿ) ಫೀಚರ್ ಅನ್ನು ಸೇರಿಸಲಾಗಿದೆ.
ಕಾರ್ಯಕ್ಷಮತೆ: •ಎಡಬ್ಲ್ಯೂಡಿ ವೇರಿಯಂಟ್ ನಲ್ಲಿ 5- ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಬದಲಿಗೆ ಹೊಸ 6- ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ (6ಎಟಿ) ಪರಿಚಯಿಸಲಾಗಿದೆ.
ಸೌಲಭ್ಯ ಮತ್ತು ಅನುಕೂಲತೆ: •ವೈಯಕ್ತೀಕರಿಸಿದ ಡ್ರೈವಿಂಗ್ ಪೊಸಿಷನ್ ಸೌಲಭ್ಯ ಒದಗಿಸಲು ಉನ್ನತ ವೇರಿಯಂಟ್ ಗಳಲ್ಲಿ 8-ವೇ ಅಡ್ಜಸ್ಟೇಬಲ್ ಪವರ್ ಡ್ರೈವರ್ ಸೀಟ್ ಲಭ್ಯವಿದೆ.
•ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಲು ಉನ್ನತ ವೇರಿಯಂಟ್ ಗಳಲ್ಲಿ ರಿರೇ ಡೋರ್ ಸನ್ ಶೇಡ್ ಸೇರ್ಪಡೆಗೊಳಿಸಲಾಗಿದೆ.
•ಹಲವಾರು ವೇರಿಯಂಟ್ ಗಳಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಸೌಲಭ್ಯ ಒದಗಿಸಲಾಗಿದೆ.
•ಪ್ರೀಮಿಯಂ ಕ್ಯಾಬಿನ್ ಅನುಭವ ಹೊಂದಲು ಉನ್ನತ ವೇರಿಯಂಟ್ ಗಳಲ್ಲಿ ಆಂಬಿ ಯೆಂಟ್ ಲೈಟಿಂಗ್ ವ್ಯವಸ್ಥೆ ರೂಪಿಸಲಾಗಿದೆ. • ಉನ್ನತ ವೇರಿಯಂಟ್ ಗಳಲ್ಲಿ ಚಾಲಕ ಮತ್ತು ಸಹ-ಚಾಲಕರಿಗೆ ವೆಂಟಿಲೇಟೆಡ್ ಸೀಟ್ ಗಳು ಲಭ್ಯವಿದೆ.
•15 ವಾರ್ಪ್ ಟೈಪ್-ಸಿ ಯು ಎಸ್ ಬಿ ಫಾಸ್ಟ್-ಚಾರ್ಜಿಂಗ್ ಪೋರ್ಟ್ ಗಳನ್ನು ಸೇರಿಸಲಾಗಿದೆ. •ಎಲ್ಇಡಿ ಸ್ಪಾಟ್ ಆಂಡ್ ರೀಡಿಂಗ್ ಲ್ಯಾಂಪ್ ಗಳು ಎಲ್ಲಾ ವೇರಿಯಂಟ್‌ಗಳಲ್ಲಿ ಸ್ಟಾಂಡರ್ಡ್ ಆಗಿ ದೊರೆಯುತ್ತವೆ.
•ಕೆಲವು ವೇರಿಯಂಟ್‌ಗಳಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ ಡಿಸ್‌ಪ್ಲೇ ಸೇರಿಸಲಾಗಿದೆ. ಈ ವ್ಯವಸ್ಥೆಯು ಒಳಗೆ ಕ್ಯಾಬಿನ್ ನಲ್ಲಿ ಉತ್ತಮ ಏರ್ ಕ್ವಾಲಿಟ್ ಮಾನಿಟರಿಂಗ್ ಮಾಡುವ ಸೌಕರ್ಯ ಒದಗಿಸುತ್ತದೆ.
•ಎಲ್ಲಾ ವೇರಿಯಂಟ್ ಗಳಲ್ಲಿ ಅತ್ಯಾಧುನಿಕ ಅಪ್ ಡೇಟೆಡ್ ಸ್ಪೀಡೋಮೀಟರ್ ಲಭ್ಯವಿದೆ. ಈ ಮೀಟರ್ ಸ್ಪಷ್ಟ ಮಾಹಿತಿ ಒದಗಿಸುತ್ತದೆ ಮತ್ತು ಸುಲಭವಾದ ಓದುವಿಕೆಯನ್ನು ಸಾಧ್ಯವಾಗಿಸುತ್ತದೆ.
•ಕೆಲವು ವೇರಿಯಂಟ್ ಗಳಲ್ಲಿ ಡ್ಯುಯಲ್-ಟೋನ್ ಎಕ್ಸ್ ಟೀರಿಯರ್ ಬಣ್ಣಗಳು ಲಭ್ಯವಿದೆ. ಈ ಸುಧಾರಣೆಗಳ ಕುರಿತು ಮಾತನಾಡಿದ ಟಿಕೆಎಂನ ಸೇಲ್ಸ್-ಸರ್ವಿಸ್-ಯೂಸ್ಡ್ ಕಾರ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷರಾದ ವರೀಂದರ್ ವಾಧ್ವಾ ಅವರು, "ಎಸ್ ವಿ ಯು ವಿಭಾಗ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಹೊತ್ತಿನಲ್ಲಿ ಮುಂಚೂಣಿಯಲ್ಲಿ ಇರಲು ನಾವು ನಮ್ಮ ಉತ್ಪನ್ನ ವಿಭಾಗಕ್ಕೆ ಹೊಸ ಸ್ಪರ್ಶ ನೀಡುತ್ತಿದ್ದೇವೆ. ಇತ್ತೀಚಿನ ಅರ್ಬನ್ ಕ್ರೂಸರ್ ಹೈರೈಡರ್ ಅತ್ಯುತ್ತಮ ತಂತ್ರಜ್ಞಾನ, ಅತ್ಯುನ್ನತ ಸುರಕ್ಷತೆ, ಅದ್ಭುತ ಅನುಕೂಲತೆ ಒದಗಿಸುವ ನಮ್ಮ ಬದ್ಧತೆಗೆ ಉತ್ತಮ ಸಾಕ್ಷಿಯಾಗಿದೆ.
ಆಧುನಿಕ ಎಸ್ ಯು ವಿ ಖರೀದಿದಾರರಿಗಾಗಿ ಟೊಯೋಟಾದ ಅತ್ಯುತ್ತಮ ಗುಣಮಟ್ಟ, ಸುಸ್ಥಿರತೆ ಮತ್ತು ಚಾಲನಾ ಆನಂದವನ್ನು ಒದಗಿಸುತ್ತದೆ. ಈ ಹೊಸ ಅಪ್ ಗ್ರೇಡ್ ಗಳ ಬಳಿಕ ಈ ವಾಹನವು ಇನೂ ಹೆಚ್ಚಿನ ಜನರನ್ನು ಆಕರ್ಷಿಸಲಿದೆ ಮತ್ತು ಹೈರೈಡರ್ ಭಾರತದ ಅತ್ಯಂತ ಹೆಚ್ಚು ಮಾರಾಟವಾಗುವ ಎಸ್ ಯು ವಿ ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ವಿಶ್ವಾಸ ನಮಗಿದೆ. ಈ ವಾಹನವು ಹೈಬ್ರಿಡ್ ತಂತ್ರಜ್ಞಾನ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯಲ್ಲಿ ಹೊಸ ಮಾನದಂಡವನ್ನು ಹಾಕಿಕೊಡಲಿದೆ" ಎಂದು ಹೇಳಿದರು.
2021ರಲ್ಲಿ ಬಿಡುಗಡೆಯಾದ ಅರ್ಬನ್ ಕ್ರೂಸರ್ ಹೈರೈಡರ್ ಟೊಯೋಟಾದ ಜಾಗತಿಕ ಎಸ್ ಯು ವಿ ಪರಂಪರೆಯ ಜೊತೆಗೆ ಆಕರ್ಷಕ ವಿನ್ಯಾಸ, ಅತ್ಯಾಧುನಿತ ತಂತ್ರಜ್ಞಾನ ಮತ್ತು ಸುಸ್ಥಿರ ಗುಣಗಳನ್ನು ಹೊಂದಿದೆ. ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಮತ್ತು 1.5ಲೀ ಕೆ-ಸೀರೀಸ್ ಎಂಜಿನ್ ಹೊಂದಿರುವ ಅರ್ಬನ್ ಕ್ರೂಸರ್ ಹೈರೈಡರ್ 5-ಸ್ಪೀಡ್ ಮ್ಯಾನುವಲ್ ಮತ್ತು 6- ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ. ಇದರಲ್ಲಿ 2ಡಬ್ಲ್ಯೂಡಿ ಮತ್ತು 4 ಡಬ್ಲ್ಯೂಡಿ ಆಯ್ಕೆಗಳು ಲಭ್ಯವಿದೆ.
ಸೊಗಸಾದ ಹೊರಾಂಗಣದಲ್ಲಿ ಎಲ್ಇಡಿ ಪ್ರೊಜೆಕ್ಟ್ ಹೆಡ್‌ಲ್ಯಾಂಪ್ ಗಳು, ಟ್ವಿನ್ ಎಲ್ಇಡಿ ಡಿ ಆರ್ ಎಲ್ ಗಳು, ಸ್ಪೋರ್ಟಿ ಸ್ಕಿಡ್ ಪ್ಲೇಟ್, ಕ್ರಿಸ್ಟಲ್ ಆಕ್ರಿಲಿಕ್ ಗ್ರಿಲ್ ಮತ್ತು 17 ಇಂಚಿನ ಅಲಾಯ್ ವೀಲ್ ಗಳಿವೆ. ಏಳು ಮೋನೋ ಟೋನ್ ಮತ್ತು 4 ಡ್ಯುಯಲ್ ಟೋನ್ ಬಣ್ಣಗಳಲ್ಲಿ ಇದು ಲಭ್ಯವಿದೆ. ಒಳಾಂಗಣದ ಪ್ರೀಮಿಯಂ ಕ್ಯಾಬಿನ್ ನಲ್ಲಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಲೆದರ್ ಸೀಟ್‌ಗಳು, 360-ಡಿಗ್ರಿ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್ ಮತ್ತು ಗೂಗಲ್ ಹಾಗೂ ಸಿರಿ ವಾಯ್ಸ್ ಅಸಿಸ್ಟೆಂಟ್ ಸೌಲಭ್ಯಗಳು ಲಭ್ಯವಿವೆ.
ಹಿಂದಿನ ಸೀಟಿನ ಪ್ರಯಾಣಿಕರು ಕೂಡ ರೇರ್ ಏಸಿ ವೆಂಟ್ ಗಳು, ಯು ಎಸ್ ಬಿ ಚಾರ್ಜಿಂಗ್ ಪಾಯಿಂಟ್ ಗಳು ಮತ್ತು 60:40 ಸ್ಪ್ಲಿಟ್ ಸೀಟ್ ಸೌಲಭ್ಯ ಪಡೆಯಬಹುದಾಗಿದೆ. ಟೊಯೋಟಾ ಸಂಸ್ಥೆಯು 66 ವಿಶೇಷ ಆಕ್ಸೆಸರೀಸ್ ಗಳು, 3 ವರ್ಷ/ 1,00,000 ಕಿ.ಮೀ ವಾರಂಟಿ (5 ವರ್ಷ/ 2,20,000 ಕಿ.ಮೀ ವರೆಗೆ ವಿಸ್ತರಿಸಬಹುದು), ಮತ್ತು 8 ವರ್ಷ/ 1,60,000 ಕಿ.ಮೀ ಹೈಬ್ರಿಡ್ ಬ್ಯಾಟರಿ ವಾರಂಟಿ ಒದಗಿಸುತ್ತಿದ್ದು, ಪ್ರೀಮಿಯಂ ಚಾಲನಾ ಅನುಭವ ವನ್ನು ಒದಗಿಸುತ್ತದೆ.
ಉತ್ತಮ ಮಾಲೀಕತ್ವ ಅನುಭವ ಹೊಂದುವಂತೆ ಮಾಡುತ್ತದೆ. ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ 11.34 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಮ್) ಪ್ರಾರಂಭವಾಗುತ್ತದೆ. ಬುಕಿಂಗ್ ಈಗ ಆರಂಭವಾಗಿದ್ದು, ಬುಕಿಂಗ್ ಮಾಡಲು ಗ್ರಾಹಕರು ಹತ್ತಿರದ ಟೊಯೋಟಾ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.