Smuggling Case: ಡೆಲ್ಲಿ ಏರ್‌ಪೋರ್ಟ್‌ನಲ್ಲಿ 1.2 ಕೆಜಿ ಚಿನ್ನ ಕಳ್ಳಸಾಗಣೆಗೆ ಯತ್ನ- ಇರಾಕ್ ಪ್ರಜೆ ಅರೆಸ್ಟ್
Smuggling Case: ಬಾಗ್ದಾದ್ ನಿಂದ ಆಗಮಿಸುತ್ತಿದ್ದ ಇರಾಕಿ ಪ್ರಜೆಯನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದು, ಆತನ ಬಳಿಯಿಂದ ಚಿನ್ನ ಎಂದು ಶಂಕಿಸಲಾದ 1203 ಗ್ರಾಂ ಹಳದಿ ಲೋಹ, ಬೆಳ್ಳಿ ಲೇಪಿತ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಚಿನ್ನ

ನವದೆಹಲಿ: ದೇಶದಲ್ಲಿ ಚಿನ್ನಕಳ್ಳಸಾಗಣೆ(Smuggling Case) ಪ್ರಕರಣಗಳು ದಿನೇದಿನೆ ಏರುತ್ತಲೇ ಇದು. ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಕಠಿಣ ತಪಾಸಣೆ ನಡೆಸುತ್ತಿರುವುದರಿಂದ ಹಲವರನ್ನು ಈವರೆಗೆ ಬಂಧಿಸಲಾಗಿದೆ. ಇಂತಹುದೇ ಒಂದು ಪ್ರಕರಣ ಈಗ ದೆಹಲಿಯ ಅಂತಾರಾಷ್ಟ್ರಿಯ ವಿಮಾನ(Delhi's IGI Airport) ನಿಲ್ದಾಣದಲ್ಲಿ ಪತ್ತೆಯಾಗಿದೆ. ಬಾಗ್ದಾದ್(Baghdad)ನಿಂದ ಆಗಮಿಸುತ್ತಿದ್ದ ಇರಾಕಿ ಪ್ರಜೆ(Iraqi national)ಯನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳುತಡೆದು, ಆತನ ಬಳಿಯಿಂದ ಚಿನ್ನ ಎಂದು ಶಂಕಿಸಲಾದ 1203 ಗ್ರಾಂ ಹಳದಿ ಲೋಹ, ಬೆಳ್ಳಿ ಲೇಪಿತ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಮಾನದಿಂದ ಇಳಿದು ಗ್ರೀನ್ ಚಾನೆಲ್ ಕಡೆಗೆ ಹೋಗುತ್ತಿದ್ದ ಪ್ರಯಾಣಿಕ ಸಾಮಾನ್ಯ ತಪಾಸಣೆ ಪ್ರಕ್ರಿಯೆಗೆ ಒಳಗಾದ ವೇಳೆ ಅವರ ಬ್ಯಾಗ್‌ನ ಎಕ್ಸ್-ರೇಯಲ್ಲಿ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿದ್ದವು. ಇದನ್ನು ನೋಡಿದ ಅಧಿಕಾರಿಗಳು ಅವರ ಬ್ಯಾಗ್‌ನ ಸಂಪೂರ್ಣ ತಪಾಸಣೆ ನಡೆಸಲು ಆರಂಭಿಸಿದರು. ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ (DFMD) ಬಳಸಿ ಹೆಚ್ಚಿನ ಪರಿಶೀಲನೆ ನಡೆಸಿದಾಗ, ಅದು ಎಚ್ಚರಿಕೆಯ ಸಂದೇಶಗಳನ್ನು ನೀಡಿತ್ತು. ಹೀಗಾಗಿ, ಇರಾಕಿ ಪ್ರಜೆಯ ಬ್ಯಾಗ್ ತೆಗೆದು ತಪಾಸಣೆ ನಡೆಸಲಾಯಿತು.
Based on profiling, a male Iraqi national arriving from Baghdad to Delhi by Flight No. IA-443 dated 07.04.2025 was intercepted at the exit of the green channel at Terminal 3, IGI Airport. During X-ray screening of the baggage, suspicious images were observed. The DFMD (Door Frame… pic.twitter.com/j4PpSBIOSf
— ANI (@ANI) April 8, 2025
ತಪಾಸಣೆ ವೇಳೆ ಅಧಿಕಾರಿಗಳಿಗೆ ಚಿನ್ನದಂತೆ ಕಾಣಿಸುವ ವಿವಿಧ ರೀತಿಯ ಹಳದಿ ಬಣ್ಣದ ಲೋಹ ಪತ್ತೆಯಾಗಿದೆ. ಈ ಲೋಹದ ತುಂಡುಗಳು ಒಟ್ಟು 1203 ಗ್ರಾಂ ತೂಕವಿದ್ದವು. ಈ ಲೋಹದ ತುಣುಕುಗಳು ಪತ್ತೆಯಾಗದಂತೆ ತಡೆಯಲು ಅದನ್ನು ಹಲವು ರೀತಿಯ ಬಟ್ಟೆ ಮತ್ತು ಇತರ ವಸ್ತುಗಳಿಂದ ಮುಚ್ಚಲಾಗಿತ್ತು. ಸದ್ಯಕ್ಕೆ ಆ ಲೋಹ ಯಾವುದು ಮತ್ತು ಅದರ ಮೌಲ್ಯವೆಷ್ಟು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.
ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆ, 1962 ಅನ್ನು ಉಲ್ಲಂಘಿಸಲಾಗಿದೆ ಎಂದು ಅನುಮಾನಪಟ್ಟಿದೆ. ಜಪ್ತಿ ಮಾಡಿದ ವಸ್ತುಗಳ ಫೋಟೋ ಮತ್ತು ವೀಡಿಯೊವನ್ನು ಕಸ್ಟಮ್ಸ್ ಇಲಾಖೆ ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ತಡೆಗಟ್ಟಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಬೀದಿ ಶ್ವಾನವನ್ನು ಬರ್ಬರವಾಗಿ ಥಳಿಸಿ ಕೊಂದ ನೀಚ! ಹೃದಯವಿದ್ರಾವಕ ವಿಡಿಯೊ ವೈರಲ್
ಇದಕ್ಕೂ ಮೊದಲು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (CSMI) ಕಸ್ಟಮ್ಸ್ ಅಧಿಕಾರಿಗಳು ಸುಮಾರು ₹17.89 ಕೋಟಿ ಮೌಲ್ಯದ ಶಂಕಿತ ಕೊಕೇನ್ ಅನ್ನು ವಶಪಡಿಸಿಕೊಂಡು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, “ಏಪ್ರಿಲ್ 1ರಂದು, ಸ್ಪಾಟ್ ಪ್ರೊಫೈಲಿಂಗ್ ಆಧಾರದ ಮೇಲೆ, ನೈರೋಬಿಯಿಂದ ದೋಹಾ ಮೂಲಕ ಮುಂಬೈಗೆ ಬಂದ ಮಹಿಳೆಯನ್ನು CSMI ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ. ಆಕೆಯ ಬ್ಯಾಗ್ ಪರಿಶೀಲಿಸುವ ವೇಳೆ, ಅವರ ಬಳಿಯಿದ್ದ ಟ್ರಾಲಿ ಬ್ಯಾಗ್‌ನಲ್ಲಿ 1789 ಗ್ರಾಂ ತೂಕದ ಕೊಕೇನ್ ಎಂದು ಹೇಳಲಾದ ಬಿಳಿ ಬಣ್ಣದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ, ಇದರ ಅಂದಾಜು ಮೌಲ್ಯ ₹17,89,00,000. ಅವರನ್ನು NDPS ಕಾಯ್ದೆ, 1985ರ ಅಡಿಯಲ್ಲಿ ಬಂಧಿಸಲಾಗಿದೆ” ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.