ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB: ಈ ಬಾರಿ ತವರಿನ ಪಂದ್ಯ ಆರ್‌ಸಿಬಿಗೆ ಕಂಟಕ!; ಇಲ್ಲಿದೆ ಅಂಕಿ-ಅಂಶ

IPL 2025: ಆರ್‌ಸಿಬಿ ತನ್ನ ನಾಲ್ಕನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್‌ ವಿರುದ್ಧ ಆಡಲಿದೆ. ಈ ಪಂದ್ಯ ವಾಖೆಂಡೆ ಸ್ಟೇಡಿಯಂನಲ್ಲಿ ಎ.7 ರಂದು ನಡೆಯಲಿದೆ. ತವರಿನಲ್ಲಿ ಮುಂಬೈ ಎಷ್ಟು ಬಲಿಷ್ಠ ಎನ್ನುವುದು ಕಳೆದ ಪಂದ್ಯದಲ್ಲಿ ಸಾಬೀತಾಗಿದೆ. ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡವನ್ನು ಕೇವಲ 116 ರನ್‌ ರನ್‌ಗೆ ಕಟ್ಟಿ ಹಾಕಿ ಭರ್ಜರಿ ಗೆಲುವು ಸಾಧಿಸಿತ್ತು.

ಈ ಬಾರಿ ತವರಿನ ಪಂದ್ಯ ಆರ್‌ಸಿಬಿಗೆ ಕಂಟಕ!; ಇಲ್ಲಿದೆ ಅಂಕಿ-ಅಂಶ

Profile Abhilash BC Apr 3, 2025 9:16 AM

ಬೆಂಗಳೂರು: ಈ ಬಾರಿಯ ಮಹಿಳಾ ಪ್ರೀಮಿಯರ್‌ ಲೀಗ್‌(WPL)ನಲ್ಲಿ ಆರಂಭದ 2 ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದು ಭಾರೀ ವಿಶ್ವಾಸದಲ್ಲಿದ್ದ ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ, ತವರಿಗೆ ಬಂದ ಬಳಿಕ ದಿಢೀರ್‌ ಕುಸಿತ ಕಂಡಿತ್ತು. ತವರಿನಲ್ಲಿ ಆಡಿದ ಎಲ್ಲ5 ಪಂದ್ಯಗಳನ್ನು ಸೋತು ಬೆಂಗಳೂರು ಅಭಿಮಾನಿಗಳನ್ನು ತೀವ್ರ ನಿರಾಸೆಗೆ ತಳ್ಳಿತ್ತು. ಇದೀಗ ಪುರುಷರ ತಂಡ ಕೂಡ ಆರಂಭಿಕ ಎರಡು ಪಂದ್ಯ ಗೆದ್ದು ತವರಿಗೆ ಮರಳಿದ ಬಳಿಕ ಸೋಲಿಗೆ ತುತ್ತಾಗಿದೆ.

18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್‌ ಗೆಲ್ಲುವ ವಿಶ್ವಾಸದೊಂದಿಗೆ ಆಡಲಿಳಿದ ಆರ್‌ಸಿಬಿ ಈಡನ್​ ಗಾರ್ಡನ್ಸ್​ ಮತ್ತು ಚೆಪಾಕ್​ನಲ್ಲಿ ಆಡಿದ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್​ ಕೆಕೆಆರ್​ ಮತ್ತು 5 ಬಾರಿಯ ಚಾಂಪಿಯನ್​ ಸಿಎಸ್​ಕೆ ತಂಡಗಳಿಗೆ ಸೋಲುಣಿಸಿ ಮೆರೆದಾಡಿತ್ತು. ಜತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ.

ಸ್ಮೃತಿ ಮಂಧಾನ ಸಾರಥ್ಯದ ಮಹಿಳಾ ಆರ್‌ಸಿಬಿ ತಂಡ ಕೂಡ ಆರಂಭಿಕ ಎರಡು ಪಂದ್ಯ ಗೆದ್ದು ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ, ಆ ಬಳಿಕ ಸತತ ಸೋಲಿಗೆ ಕಂಗೆಟ್ಟು ಪ್ಲೇ ಆಫ್‌ ರೇಸ್‌ನಿಂದಲೇ ಹೊರಬಿದ್ದಿತ್ತು. ಇದೀಗ ಲಕ್‌ ಕೈಕೊಟ್ಟು ಪುರುಷರ ತಂಡ ಕೂಡ ಇದೇ ರೀತಿ ಆಗಬಹುದೇ ಎಂಬ ಆತಂಕವೊಂದು ಅಭಿಮಾನಿಗಳಲ್ಲಿ ಶುರುವಾಗಿದೆ. ತವರಿನಲ್ಲಿ ಆರ್‌ಸಿಬಿ ಇನ್ನು 6 ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ

ಮುಂದಿನ ಎದುರಾಳಿ ಮುಂಬೈ

ಆರ್‌ಸಿಬಿ ತನ್ನ ನಾಲ್ಕನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್‌ ವಿರುದ್ಧ ಆಡಲಿದೆ. ಈ ಪಂದ್ಯ ವಾಖೆಂಡೆ ಸ್ಟೇಡಿಯಂನಲ್ಲಿ ಎ.7 ರಂದು ನಡೆಯಲಿದೆ. ತವರಿನಲ್ಲಿ ಮುಂಬೈ ಎಷ್ಟು ಬಲಿಷ್ಠ ಎನ್ನುವುದು ಕಳೆದ ಪಂದ್ಯದಲ್ಲಿ ಸಾಬೀತಾಗಿದೆ. ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡವನ್ನು ಕೇವಲ 116 ರನ್‌ ರನ್‌ಗೆ ಕಟ್ಟಿ ಹಾಕಿ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಆರ್‌ಸಿಬಿ ವಿರುದ್ಧವೂ ತನ್ನ ಸಾಮರ್ಥ್ಯ ಪ್ರದರ್ಶಿಸಲು ಹಾರ್ದಿಕ್‌ ಪಡೆ ಕಾದು ಕುಳಿತಿದೆ.