Chikkaballapur News: ತಾರಕಕ್ಕೇರಿದ ನಗರಸಭೆ ಅಧ್ಯಕ್ಷ ಸದಸ್ಯರ ನಡುವಿನ ಶೀತಲ ಸಮರ
ಜನರ ಸಮಸ್ಯೆ ನಿವಾರಿಸುವಲ್ಲಿ ನಗರಸಭೆ ಅಧ್ಯಕ್ಷರು ವಿಫರಾಗಿದ್ದಾರೆ. ಪ್ರತಿ ತಿಂಗಳು ಸಭೆ ನಡೆಸಬೇಕು ಎಂಬ ನಿಯಮವಿದೆ. ಆದರೆ ಇವರು ಅಧ್ಯಕ್ಷರಾದ ನಂತರ ಬಜೆಟ್ ಸಭೆ ಹೊರತುಪಡಿಸಿದರೆ ಸಾಮಾನ್ಯ ಸಭೆ ಕರೆದಿಲ್ಲ, ಅವರಿಗೆ ಅಭಿವೃದ್ಧಿಯ ಚಿಂತನೆಯೇ ಇಲ್ಲ. ಇನ್ನು ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೇಡಿಕೆ ಇಟ್ಟಿದ್ದ ಕೋಟ್ಯಂತರ ಅನುದಾನ ಬಂದಿದ್ದು, ಇದಕ್ಕೆ ಟೆಂಡರ್ ಕರೆದು ಕಾಮಗಾರಿಗಳನ್ನು ಆರಂಭಿಸಲೂ ಅಧ್ಯಕ್ಷರು ಆಸಕ್ತಿ ತೋರುತ್ತಿಲ್ಲ

ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ನಗರಸಭಾಧ್ಯಕ್ಷ ಆನಂದರೆಡ್ಡಿ ಮಾತನಾಡಿದರು.

ಚಿಕ್ಕಬಳ್ಳಾಪುರ: ನಗರಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಕಳೆದ ೯ ತಿಂಗಳ ಹಿಂದಷ್ಟೇ ಗಜೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸದಸ್ಯರು ಇದೀಗ ಅವರನ್ನು ಆಯ್ಕೆ ಮಾಡಿರುವುದಕ್ಕೆ ಪಾಪಪ್ರಜ್ಞೆ ಕಾಡುತ್ತಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷ ಗಜೇಂದ್ರ ನಗರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.
ಕೇವಲ ಒದೆರಡು ವಾರ್ಡ್ಗಳ ಅಭಿವೃದ್ಧಿಗಾಗಿ ಮಾತ್ರ ಗಮನವನ್ನು ಹರಿಸುತ್ತಿದ್ದಾರೆ. ನಾಗರಿಕರ ಹಿತಕ್ಕಿಂತ ಅವರ ಸ್ವಲಾಭವೇ ಮುಖ್ಯವಾಗಿದ್ದು, ನಾಗರಿಕರ ಖಾತೆ ಮಾಡೋ ಬದಲು ಖಾಸಗಿ ಬಡಾವಣೆಗಳ ಖಾತೆಗಳನ್ನು ಮಾಡುತ್ತಿದ್ದಾರೆಂಬ ಎಂಬಿತ್ಯಾದಿ ಆರೋಪಗಳನ್ನು ಮಾಡಿದರು.
ಇದನ್ನೂ ಓದಿ: Chikkaballapur News: ಉಪ್ಪಾರ ಸಮುದಾಯವು ಸಮಾಜದಲ್ಲಿ ಅತ್ಯಂತ ಹಿಂದುಳಿದ ತಳಮಟ್ಟದ ಸಮುದಾಯವಾಗಿದೆ.
ಟೆಂಡರ್ ಕರೆಯುವಲ್ಲಿ ವಿಫಲ
ನಗರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಆನಂದ್‌ರೆಡ್ಡಿ ಬಾಬು ಮಾತನಾಡಿ, ಜನರ ಸಮಸ್ಯೆ ನಿವಾರಿಸುವಲ್ಲಿ ನಗರಸಭೆ ಅಧ್ಯಕ್ಷರು ವಿಫರಾಗಿದ್ದಾರೆ. ಪ್ರತಿ ತಿಂಗಳು ಸಭೆ ನಡೆಸಬೇಕು ಎಂಬ ನಿಯಮವಿದೆ. ಆದರೆ ಇವರು ಅಧ್ಯಕ್ಷರಾದ ನಂತರ ಬಜೆಟ್ ಸಭೆ ಹೊರತುಪಡಿಸಿದರೆ ಸಾಮಾನ್ಯ ಸಭೆ ಕರೆದಿಲ್ಲ, ಅವರಿಗೆ ಅಭಿವೃದ್ಧಿಯ ಚಿಂತನೆಯೇ ಇಲ್ಲ. ಇನ್ನು ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೇಡಿಕೆ ಇಟ್ಟಿದ್ದ ಕೋಟ್ಯಂತರ ಅನುದಾನ ಬಂದಿದ್ದು, ಇದಕ್ಕೆ ಟೆಂಡರ್ ಕರೆದು ಕಾಮಗಾರಿಗಳನ್ನು ಆರಂಭಿಸಲೂ ಅಧ್ಯಕ್ಷರು ಆಸಕ್ತಿ ತೋರುತ್ತಿಲ್ಲ ಎಂದು ಕಿಡಿಕಾರಿದರು.
ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ
ಇರುವ ಅನುದಾನಕ್ಕೆ ಕಾಮಗಾರಿಗಳ ಟೆಂಡರ್ ಕರೆಯಲೂ ಅಧ್ಯಕ್ಷರು ಮುಂದಾಗಿಲ್ಲ. ನಗರದ ೩೧ ವಾರ್ಡಿನಲ್ಲಿ ಕೇವಲ ನಾಲ್ಕೈದು ವಾರ್ಡುಗಳಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನಗರದಾದ್ಯಂತ ರಸ್ತೆ, ಚರಂಡಿ, ಸ್ಮಶಾನಗಳ ಅಭಿವೃದ್ಧಿ ಬಗ್ಗೆ ಗಮನ ನೀಡಿಲ್ಲ. ನಿರ್ಮಾಣವಾಗಿ ರುವ ಅನಿಲ ಚಿತಾಗಾರ ಸಿದ್ಧವಾಗಿದ್ದರೂ ಅದನ್ನು ಚಾಲನೆ ನೀಡಲೂ ಅಧ್ಯಕ್ಷರಿಗೆ ಪುರುಸೊತ್ತಿಲ್ಲ. ಮಳೆಗಾಲ ಆರಂಭವಾದರೂ ನಗರ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ, ಇದರಿಂದ ಮಳೆ ಬಂದರೆ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ತೀವ್ರ ಸಂಕಷ್ಟ ಎದುರಿಸಬೇಕಿದೆ ಎಂದು ಆರೋಪಿಸಿದರು.
ಮುತ್ತಿಗೆ ಹಾಕುವ ಎಚ್ಚರಿಕೆ
ನಗರಸಭ್ಯ ಅಧ್ಯಕ್ಷರಾಗಿ ೯ ತಿಂಗಳು ಪೂರೈಸಿದ್ದು, ಈ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ನಾಗರಿಕರ ಸಮಸ್ಯೆಗಳನ್ನು ಚರ್ಚಿಸಲು ಸಾಮಾನ್ಯ ಸಭೆಗಳನ್ನು ನಡೆಸುತ್ತಿಲ್ಲ. ದಿನಾಂಕಗಳನ್ನು ನಿಗಧಿಗೊಳಿಸಿ ಕಡೆಗಳಿಗೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ಮುಂದೂಡು ತ್ತಿದ್ದು, ಮುಂದಿನ ೮ ದಿನದಲ್ಲಿ ಸಾಮಾನ್ಯ ಸಭೆಯನ್ನು ಕರೆಯದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾನು ನಗರಸಭೆಯ ಚುಕ್ಕಾಣಿ ಹಿಡಿದು ೯ ತಿಂಗಳು ಕಳೆದಿದೆ. ಅಲ್ಲಿಂದ ಈವರೆಗೆ ಒಂದೇ ಒಂದು ಬಿಡಿಗಾಸು ಅನುದಾನ ನಮಗೆ ಸರಕಾರದಿಂದ ಬಂದಿಲ್ಲ.ಇದು ಚಿಕ್ಕಬಳ್ಳಾಪುರ ನಗರಸಭೆಗೆ ಮಾತ್ರ ಅಲ್ಲ ರಾಜ್ಯದ ಯಾವ ನಗರಸಭೆಗೂ ಸರಕಾರ ಅನುದಾನ ನೀಡಿಲ್ಲ,ಹೀಗಿದ್ದಾಗ ನಾನು ಹೇಗೆ ಅಭಿವೃದ್ದಿಗೆ ಹಣ ನೀಡಲು ಸಾಧ್ಯ.ನನ್ನ ಅವಧಿಯಲ್ಲಿ ಯಾವ ಲೇಔಟ್‌ಗೂ ಅನುಮತಿ ನೀಡಿಲ್ಲ. ೧೫ನೇ ಹಣಕಾಸು ಯೋಜನೆಯಲ್ಲಿ ಮಾತ್ರ ೧ಕೋಟಿ ೪೦ ಲಕ್ಷ ಹಣ ಬಂದಿದ್ದು ಬಿಟ್ಟರೆ ನಯಾಪೈಸೆ ಬಂದಿಲ್ಲ.ನಗರವಾಸಿಗಳ ತೆರಿಗೆ ಹಣದಲ್ಲಿ ನಗರಸಬೆ ನಡೆಸುವ ಪರಿಸ್ಥಿತಿ ಬಂದಿದೆ. ಪ್ರತಿತಿಂಗಳು ೭೫ ರಿಂದ ೮೦ ಲಕ್ಷ ಮೇಂಟೇನೆನ್ಸ್ ಖರ್ಚು ಬರುತ್ತಿದೆ.ಆನಂದರೆಡ್ಡಿ ಕಾಲದಲ್ಲಿ ಡಾ.ಕೆ.ಸುಧಾಕರ್ ಬೇಕಾದಷ್ಟು ಅನುದಾನ ತರುತ್ತಿದ್ದರು.ಅದರಲ್ಲಿ ನಗರದ ಅಭಿವೃದ್ಧಿ ಆಗಿದೆ.ನನ್ನ ಅವಧಿಯಲ್ಲಿ ಆರೀತಿಯ ನಾಯಕರು ಇಲ್ಲ.೮ ದಿನಗಳ ಒಳಗೆ ಸಾಮಾನ್ಯ ಸಭೆ ನಡೆಯಲಿದೆ.ಈಬಗ್ಗೆ ಮಾಹಿತಿ ಕೊಡುವವರಿದ್ದೆವು.ಅಷ್ಟರಲ್ಲಿ ಇವರು ಸುದ್ದಿಗೋಷ್ಟಿ ಮಾಡಿದ್ದಾರೆ. ಬಿ ಖಾತೆಗಳನ್ನು ಯಾರ್ಯಾರು ಅರ್ಜಿ ಸಲ್ಲಿಸಿ ಬೇಕಾದ ದಾಖಲೆ ಮತ್ತು ಟ್ಯಾಕ್ಸ್ ಕಟ್ಟಿದ್ದಾರೊ ಅವರಿಗೆ ನೀಡಲಾಗಿದೆ.
-ಎ.ಗಜೇಂದ್ರ ಅಧ್ಯಕ್ಷರು ನಗರಸಭೆ ಚಿಕ್ಕಬಳ್ಳಾಪುರ.