IPL 2025: ಸಿಎಸ್‌ಕೆ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ದಂಡ!
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 22ನೇ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ ಸಂಭಾವನೆಯಲ್ಲಿ ಶೇ 25ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ.

ಐಪಿಎಲ್ ನಿಯಮ ಉಲ್ಲಂಘಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ದಂಡವನ್ನು ವಿಧಿಸಲಾಗಿದೆ.

ಚಂಡೀಗಢ: ಚೆನ್ನೈ ಸೂಪರ್ ಕಿಂಗ್ಸ್ (Chennai Super kings) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘನೆ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (Glenn Maxwell) ದಂಡವನ್ನು ವಿಧಿಸಲಾಗಿದೆ ಹಾಗೂ ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪಂದ್ಯದ ಸಂಭಾವನೆಯಲ್ಲಿ ಶೇ 20ರಷ್ಟು ದಂಡ ಹಾಗೂ ಒಂದು ಡಿಮೆರಿಟ್ ಅಂಕವನ್ನು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ನೀಡಲಾಗಿದೆ. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಐಪಿಎಲ್ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಿದ ಆರನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
"ಆರ್ಟಿಲಕ್ 2.2 ನಿಯಮದ ಅನ್ವಯ ಮೈದಾನದ ಹೊರಗೆ ಯಾವುದೇ ಕ್ರಮಗಳಿಗೆ ಈ ರೀತಿಯ ಶಿಕ್ಷೆಯನ್ನು ನೀಡಲಾಗುತ್ತದೆ. ಉದಾಹರಣೆಗೆ ಉದೇಶಪೂರ್ವಕವಾಗಿ ವಿಕೆಟ್‌ಗಳನ್ನು ಹೊಡೆಯುವುದು ಅಥವಾ ಒದೆಯುವುದು. ಜಾಹೀರಾತು ಫಲಕಗಳು, ಕಾಂಪೌಡ್, ಡ್ರೆಸ್ಸಿಂಗ್ ಕೋಣೆಯ ಬಾಗಿಲುಗಳು, ಕನ್ನಡಿಗಳು, ಕಿಟಕಿಗಳು ಮತ್ತು ಇತರ ನೆಲೆವಸ್ತುಗಳು ಮತ್ತು ಫಿಟ್ಟಿಂಗ್‌ಗಳಿಗೆ ಹಾನಿಯನ್ನುಂಟುಮಾಡುವ ಯಾವುದೇ ಕ್ರಮಗಳು ಇದರಲ್ಲಿ ಒಳಗೊಂಡಿವೆ. ಉದಾಹರಣೆಗೆ, ಆಟಗಾರನು ಹತಾಶೆಯಿಂದ ತನ್ನ ಬ್ಯಾಟ್ ಅನ್ನು ತೀವ್ರವಾಗಿ ಬೀಸಿದಾಗ ಮತ್ತು ಜಾಹೀರಾತು ಫಲಕಕ್ಕೆ ಹಾನಿಯನ್ನುಂಟುಮಾಡಿದಾಗ ಈ ಅಪರಾಧವನ್ನು ಮಿತಿಯಿಲ್ಲದೆ ಮಾಡಬಹುದು ಎಂದು ಈ ನಿಯಮ ಹೇಳುತ್ತದೆ."
IPL 2025: 2000 ಐಪಿಎಲ್ ರನ್ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ನಿಕೋಲಸ್ ಪೂರನ್!
ಗ್ಲೆನ್ ಮ್ಯಾಕ್ಸ್‌ವೆಲ್ ಯಾವ ರೀತಿಯ ವರ್ತನೆ ತೋರುವ ಮೂಲಕ ಐಪಿಎಲ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂದು ಐಪಿಎಲ್ ಸ್ಪಷ್ಟಪಡಿಸಿಲ್ಲವಾದರೂ ದಂಡವನ್ನು ವಿಧಿಸಿದೆ. ಅಂದ ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 18 ರನ್‌ಗಳಿಂದ ಗೆಲುವು ಪಡೆಯಿತು. 39 ಎಸೆತಗಳಲ್ಲಿ ಶತಕವನ್ನು ಸಿಡಿಸಿದ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆದರೆ, ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಆದರೆ, ಬೌಲಿಂಗ್‌ನಲ್ಲಿ 11 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರು.
IPL 2025: ವೇಗದ ಶತಕ ಸಿಡಿಸಿದ ಬಳಿಕ ತಮ್ಮ ಬ್ಯಾಟಿಂಗ್ ಗೇಮ್ ಪ್ಲ್ಯಾನ್ ತಿಳಿಸಿದ ಪ್ರಿಯಾಂಶ್ ಆರ್ಯ!
ಸತತ ವೈಫಲ್ಯ ಅನುಭವಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಇವರಿಂದ ಇನ್ನೂ ದೊಡ್ಡ ಇನಿಂಗ್ಸ್ ಮೂಡಿ ಬಂದಿಲ್ಲವಾದರೂ ಪಂಜಾಬ್ ತಂಡ ಆಸ್ಟ್ರೇಲಿಯನ್ ಆಲ್‌ರೌಂಡರ್‌ಗೆ ಸತತವಾಗಿ ಅವಕಾಶಗಳನ್ನು ನೀಡುತ್ತಿದೆ. ಏಕೆಂದರೆ ಮ್ಯಾಕ್ಸ್‌ವೆಲ್ ಮ್ಯಾಚ್ ವಿನ್ನರ್. ಇವರು ಒಬ್ಬರೇ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ದಿಗ್ವೇಶ್ ಸಿಂಗ್ ರಾಠಿ, ರಿಷಭ್ ಪಂತ್, ರಜತ್ ಪಾಟಿದಾರ್ ಹಾಗೂ ರಿಯಾನ್ ಪರಾಗ್ ಅವರು ಕೂಡ ಪ್ರಸಕ್ತ ಆವೃತ್ತಿಯಲ್ಲಿ ಐಪಿಎಲ್ ನಿಯಮವನ್ನು ಉಲ್ಲಂಘನೆ ಮಾಡಿ ದಂಡವನ್ನು ಕಟ್ಟಿದ್ದಾರೆ.
IPL 2025: 39 ಎಸೆತಗಳಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಪ್ರಿಯಾಂಶ್ ಆರ್ಯ!
ಪಂಜಾಬ್ ಕಿಂಗ್ಸ್‌ಗೆ 18 ರನ್ ಜಯ
ಇನ್ನು ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್, ಪ್ರಿಯಾಂಶ್ ಆರ್ಯ ಶತಕ ಹಾಗೂ ಶಶಾಂಕ್ ಸಿಂಗ್ ಅರ್ಧಶತಕದ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಯವರೆಗೂ ಹೋರಾಟ ನಡೆಸಿ ಅಂತಿಮವಾಗಿ 20 ಓವರ್‌ಗಳಿಗೆ 201 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 18 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ಸತತವಾಗಿ ನಾಲ್ಕು ಸೋಲುಗಳನ್ನು ಅನುಭವಿಸಿದೆ.