MI vs LSG: ಲಖನೌ ವಿರುದ್ದದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್!
MI vs LSG: ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಮುಂಬೈ vs ಲಖನೌ

ಲಖನೌ: ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 16ನೇ ಪಂದ್ಯದಲ್ಲಿ (MI vs LSG) ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಆ ಮೂಲಕ ಎದುರಾಳಿ ಲಖನೌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದಾರೆ.
ಟಾಸ್ ಗೆದ್ದು ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತೇವೆಂದು ಹೇಳಿದರು. ಇದು ಫ್ರೆಶ್ ವಿಕೆಟ್ ಆಗಿರುವ ಕಾರಣ, ಇದು ಹೇಗೆ ವರ್ತಿಸಲಿದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ತಡವಾಗಿ ಇಬ್ಬನಿ ಇಲ್ಲಿ ಪ್ರಮುಖ ಪಾತ್ರವಹಿಸಬಹುದು. ಈ ಕಾರಣದಿಂದಾಗಿ ನಾವು ಚೇಸ್ ಮಾಡುತ್ತೇವೆ. ಅಂದ ಹಾಗೆ ರೋಹಿತ್ ಶರ್ಮಾ ಮೊಣಕಾಲಿನಲ್ಲಿ ಗಾಯವಾಗಿದೆ. ಈ ಕಾರಣದಿಂದ ಅವರು ಆಡುತ್ತಿಲ್ಲ ಹಾಗೂ ಇವರ ಬದಲು ವಿಲ್ ಜ್ಯಾಕ್ಸ್ ಇನಿಂಗ್ಸ್ ಆರಂಭಿಸಲಿದ್ದಾರೆ. ಜಸ್‌ಪ್ರೀತ್ ಬುಮ್ರಾ ಅವರು ಅತಿ ಶೀಘ್ರದಲ್ಲಿಯೇ ತಂಡಕ್ಕೆ ಮರಳಲಿದ್ದಾರೆಂದು ಹೇಳಿದ್ದಾರೆ.
IPL 2025: ʻಎಂಎಸ್ ಧೋನಿ ನನ್ನ ತಂದೆಯಿದ್ದಂತೆʼ-ಸಿಎಸ್‌ಕೆ ದಿಗ್ಗಜನಿಗೆ ಮತೀಶ ಪತಿರಣ ಗೌರವ!
ಇನ್ನು ಟಾಸ್ ಬಳಿಕ ಮಾತನಾಡಿದ ಲಖನೌ ಸೂಪರ್ ಜಯಂಟ್ಸ್ ನಾಯಕ ರಿಷಭ್ ಪಂತ್, ಒಂದು ಬ್ಯಾಟಿಂಗ್ ವಿಭಾಗವಾಗಿ ನಾವು ಶಕ್ತಿಯುತವಾಗಿದೆ. ನನ್ನನ್ನು ಸೇರಿದಂತೆ ನಮ್ಮ ತಂಡದ ಕೆಲವರು ಇನ್ನೂ ಪುಟಿದೇಳಲು ಸಾಧ್ಯವಾಗಿಲ್ಲ. ಟೂರ್ನಿಯುದ್ದಕ್ಕೂ ಅಗ್ರ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಬೇಕೆಂದು ನಾವು ಮಾತನಾಡಿಕೊಂಡಿದ್ದೇವೆ. ಈ ಪಂದ್ಯದಲ್ಲಿ ನಾವು ಎಷ್ಟು ಟಾರ್ಗೆಟ್ ಸೆಟ್ ಮಾಡಬೇಕೆಂದು ನಾನು ಚಿಂತಿಸಿಲ್ಲ. ಚೆಂಡು ಬಂದ ಹಾಗೆ ಆಡುತ್ತೇವೆ. ಒಮ್ಮೆ ಲಯ ಸಿಕ್ಕರೆ ಅದನ್ನು ಬಳಸಿಕೊಂಡು ದೊಡ್ಡ ಮೊತ್ತವನ್ನು ಕಲೆ ಹಾಕುತ್ತೇವೆ. ಅಂದ ಹಾಗೆ ನಮ್ಮ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತಂದಿದ್ದೇವೆ. ಸಿದ್ದಾರ್ಥ್ ಬದಲು ಆಕಾಶ್ ದೀಪ್ ತಂಡಕ್ಕೆ ಮರಳಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಇಲ್ಲಿಯವರೆಗೂ ಪ್ರತ್ಯೇಕವಾಗಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿವೆ ಹಾಗೂ ಕೇವಲ ಒಂದೊಂದು ಪಂದ್ಯದಲ್ಲಿ ಗೆದ್ದಿವೆ. ಇದೀಗ ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಎರಡೂ ತಂಡಗಳು ಕಣಕ್ಕೆ ಇಳಿದಿವೆ.
🚨 Toss 🚨
— IndianPremierLeague (@IPL) April 4, 2025
Mumbai Indians won the toss and opted to bowl first against Lucknow Super Giants.
Updates ▶️ https://t.co/HHS1Gsaw71#TATAIPL | #LSGvMI | @LucknowIPL | @mipaltan pic.twitter.com/sMnXPV2Xnx
ಇತ್ತಂಡಗಳ ಪ್ಲೇಯಿಂಗ್ XI
ಲಖನೌ ಸೂಪರ್ ಜಯಂಟ್ಸ್: ಏಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್(ನಾಯಕ, ವಿಕೆಟ್ ಕೀಪರ್), ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದುಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ಆಕಾಶ್ ದೀಪ್, ಆವೇಶ್ ಖಾನ್
ಮುಂಬೈ ಇಂಡಿಯನ್ಸ್ : ವಿಲ್ ಜ್ಯಾಕ್ಸ್, ರಿಯಾನ್ ರಿಕೆಲ್ಟನ್(ವಿ.ಕೀ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ರಾಜ್ ಬಾವಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಅಶ್ವನಿ ಕುಮಾರ್, ವಿಘ್ನೇಶ್ ಪುತ್ತೂರು, ಟ್ರೆಂಟ್ ಬೌಲ್ಟ್