Harry Brook: ಇಂಗ್ಲೆಂಡ್ ವೈಟ್ ಬಾಲ್ ತಂಡದ ನಾಯಕನಾಗಿ ಹ್ಯಾರಿ ಬ್ರೂಕ್ ನೇಮಕ!
Harry Brook England White-Ball Captain: ಇಂಗ್ಲೆಂಡ್ ಏಕದಿನ ಹಾಗೂ ಟಿ20 ತಂಡಗಳಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರನ್ನು ನಾಯಕನ್ನಾಗಿ ನೇಮಿಸಲಾಗಿದೆ. ಆ ಮೂಲಕ ಜೋಸ್ ಬಟ್ಲರ್ ಅವರ ಸ್ಥಾನವನ್ನು ಹ್ಯಾರಿ ಬ್ರೂಕ್ ತುಂಬಿದ್ದಾರೆ.

ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡಕ್ಕೆ ಹ್ಯಾರಿ ಬ್ರೂಕ್ ನಾಯಕ.

ನವದೆಹಲಿ: ಬಲಗೈ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್(Harry Brook) ಅವರನ್ನು ಇಂಗ್ಲೆಂಡ್ (England) ವೈಟ್ ಬಾಲ್ ತಂಡಕ್ಕೆ ನೂತನ ನಾಯಕನ್ನಾಗಿ ನೇಮಿಸಲಾಗಿದೆ.ಆ ಮೂಲಕ ಜೋಸ್ ಬಟ್ಲರ್ (Jos Buttler) ಅವರ ಸ್ಥಾನವನ್ನು ಹ್ಯಾರಿ ಬ್ರೂಕ್ ತುಂಬಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ವೈಫಲ್ಯ ಅನುಭವಿಸಿದ ಬಳಿಕ ಜೋಸ್ ಬಟ್ಲರ್ ಅವರು ವೈಟ್‌ಬಾಲ್ ತಂಡದ ನಾಯಕತ್ವವನ್ನು ತೊರೆದಿದ್ದರು. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಜೋಸ್ ಬಟ್ಲರ್ ಗಾಯಕ್ಕೆ ತುತ್ತಾಗಿದ್ದ ವೇಳೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ಮುನ್ನಡೆಸಿದ್ದರು. ಇದಕ್ಕೂ ಮುನ್ನ 2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಬ್ರೂಕ್ ಮುನ್ನಡೆಸಿದ್ದರು.
"ಇಂಗ್ಲೆಂಡ್‌ನ ವೈಟ್-ಬಾಲ್ ನಾಯಕನಾಗಿ ನೇಮಕಗೊಂಡಿರುವುದು ನಿಜಕ್ಕೂ ಗೌರವ. ನಾನು ವಾರ್ಫೆಡೇಲ್‌ನ ಬರ್ಲಿಯಲ್ಲಿ ಕ್ರಿಕೆಟ್ ಆಡುವ ಬಾಲ್ಯದಿಂದಲೂ, ಯಾರ್ಕ್‌ಶೈರ್ ಅನ್ನು ಪ್ರತಿನಿಧಿಸುತ್ತಿದ್ದ ವೇಳೆಯೂ ಇಂಗ್ಲೆಂಡ್ ಪರ ಆಡುವ ಮತ್ತು ಬಹುಶಃ ಒಂದು ದಿನ ತಂಡವನ್ನು ಮುನ್ನಡೆಸುವ ಕನಸು ಕಂಡಿದ್ದೆ." ಹ್ಯಾರಿ ಬ್ರೂಕ್ ತಿಳಿಸಿದ್ದಾರೆ.
IPL 2025: ಸದ್ದಿಲ್ಲದೆ ಐಪಿಎಲ್ ಟೂರ್ನಿಯಲ್ಲಿ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್!
"ಈಗ ಆ ಅವಕಾಶ ಸಿಕ್ಕಿರುವುದು ನನಗೆ ತುಂಬಾ ಸಂತೋಷ ತಂದಿದೆ. ನನ್ನ ಕುಟುಂಬ ಮತ್ತು ನನ್ನ ಪ್ರತಿಯೊಂದು ಹಂತದಲ್ಲೂ ನನ್ನನ್ನು ಬೆಂಬಲಿಸಿದ ತರಬೇತುದಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮೇಲಿನ ಅವರ ನಂಬಿಕೆಯೇ ಈ ಎಲ್ಲಾ ವ್ಯತ್ಯಾಸವನ್ನುಂಟು ಮಾಡಿದೆ ಮತ್ತು ಅವರಿಲ್ಲದೆ ನಾನು ಈ ಸ್ಥಾನದಲ್ಲಿರುತ್ತಿರಲಿಲ್ಲ," ಎಂದು ಹೇಳಿದ್ದಾರೆ.
"ಈ ದೇಶದಲ್ಲಿ ತುಂಬಾ ಪ್ರತಿಭೆಗಳಿದ್ದಾರೆ ಮತ್ತು ನಾಯಕನಾಗಿ ವೃತ್ತಿ ಜೀವನ ಆರಂಭಿಸಲು, ನಮ್ಮನ್ನು ಮುಂದೆ ಕೊಂಡೊಯ್ಯಲು ಮತ್ತು ಸರಣಿಗಳು, ವಿಶ್ವಕಪ್‌ಗಳು ಮತ್ತು ಪ್ರಮುಖ ಟೂರ್ನಿಗಳನ್ನು ಗೆಲ್ಲುವತ್ತ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನಾನು ಮುಂದುವರಿಯಲು ಮತ್ತು ನನ್ನಲ್ಲಿರುವ ಎಲ್ಲವನ್ನೂ ನೀಡಲು ಉತ್ಸುಕನಾಗಿದ್ದೇನೆ," ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬ್ರೂಕ್ ತಿಳಿಸಿದ್ದಾರೆ.
CAPTAIN BROOK 🦜
— England Cricket (@englandcricket) April 7, 2025
Harry Brook is our new Men's ODI and IT20 captain!
Read more 👇
2022ರಲ್ಲಿ ಪದಾರ್ಪಣೆ ಮಾಡಿದ್ದ ಹ್ಯಾರಿ ಬ್ರೂಕ್
26ರ ಪ್ರಾಯದ ಹ್ಯಾರಿ ಬ್ರೂಕ್ 2022ರಲ್ಲಿ ಇಂಗ್ಲೆಂಡ್ ತಂಡದ ಪರ ವೈಟ್‌ಬಾಲ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಅವರು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಹ್ಯಾರಿ ಬ್ರೂಕ್ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಪರ ಹ್ಯಾರಿ ಬ್ರೂಕ್ ಇಲ್ಲಿಯವರೆಗೂ 26 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಹಾಗೂ 34ರ ಸರಾಸರಿಯಲ್ಲಿ 816 ರನ್‌ಗಳನ್ನು ಕಲೆ ಹಾಕಿದ್ದಾರೆ. 110 ಇವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.
ಇನ್ನು ಹ್ಯಾರಿ ಬ್ರೂಕ್ 44 ಟಿ20ಐ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. 81 ಇವರ ಟಿ20ಐ ವೃತ್ತಿ ಜೀವನದ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಆಸ್ಟ್ರೇಲಿಯಾದಲ್ಲಿ 2022ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಇಂಗ್ಲೆಂಡ್ ತಂಡದಲ್ಲಿ ಬ್ರೂಕ್ ಆಡಿದ್ದರು.
MI vs RCB: 13000 ಟಿ20 ರನ್ ಪೂರ್ಣಗೊಳಿಸಿದ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ!
ವೆಸ್ಟ್ ಇಂಡೀಸ್ ಸರಣಿಯಲ್ಲಿ ಹ್ಯಾರಿ ಬ್ರೂಕ್‌ಗೆ ಮೊದಲ ಸವಾಲು
ಮೇ 29 ರಂದು ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಅಷ್ಟೇ ಪಂದ್ಯಗಳ ಟಿ20ಐ ಸರಣಿಯಲ್ಲಿ ಹ್ಯಾರಿ ಬ್ರೂಕ್ ಮೊದಲ ಬಾರಿ ನಾಯಕನಾಗಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಹ್ಯಾರಿ ಬ್ರೂಕ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ತಯಾರಿ ನಡೆಸಲಿದೆ. ಇದಾದ ಬಳಿಕ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.