ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೆಟ್ರೋದೊಳಗೆ ಮದ್ಯ ಸೇವಿಸಿದ ಯುವಕ ; ನೆಟ್ಟಿಗರು ಫುಲ್‌ ಗರಂ!

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಕಂಪಾರ್ಟ್‍ಮೆಂಟ್ ಒಳಗಡೆ ಮೊಟ್ಟೆ ಹಾಗೂ ಮದ್ಯ ಸೇವಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಮೆಟ್ರೋದಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿರುವ ಕಾರಣ ಆತ 'ಆಲ್ಕೋಹಾಲ್' ಕುಡಿದಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಹೀಗಾ ಮಾಡೋದು!

Profile pavithra Apr 7, 2025 8:43 PM

ನವದೆಹಲಿ: ದೆಹಲಿ ಮೆಟ್ರೋ ಪ್ರತಿಬಾರಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಈ ಹಿಂದೆ ಪ್ರಯಾಣಿಕರ ನಡುವೆ ಜಗಳ, ಡ್ಯಾನ್ಸ್ ಮಾಡಿದ್ದು ಹೀಗೆ ಹಲವಾರು ಕಾರಣಕ್ಕೆ ಸುದ್ದಿಯಾಗಿತ್ತು. ಆದರೆ ಈ ಬಾರಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕನೊಬ್ಬ ಅಪರಾಧ ಎಸಗಿದ್ದಾನೆ. ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಕಂಪಾರ್ಟ್‍ಮೆಂಟ್ ಒಳಗಡೆ ಮೊಟ್ಟೆ ಹಾಗೂ ಮದ್ಯ ಸೇವಿಸಿದ್ದಾನೆ. ಮೆಟ್ರೋದಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿರುವ ಕಾರಣ ಆತ 'ಆಲ್ಕೋಹಾಲ್' ಕುಡಿಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ಆದ ವಿಡಿಯೊದಲ್ಲಿ ಅವನು ಒಂದು ಕೈಯಲ್ಲಿ ವಿಸ್ಕಿ ಗ್ಲಾಸ್ ಹಿಡಿದು, ಇನ್ನೊಂದು ಕೈಯಲ್ಲಿ ಬೇಯಿಸಿದ ಮೊಟ್ಟೆಯನ್ನು ಹಿಡಿದುಕೊಂಡಿದ್ದಾನೆ. ನಂತರ ಆತ ಗ್ಲಾಸ್‍ ಅನ್ನು ಪಕ್ಕದಲ್ಲಿ ಇಟ್ಟು ಬ್ಯಾಗ್‍ನಿಂದ ಪ್ಲಾಸ್ಟಿಕ್ ಕವರ್‌ ಅನ್ನು ತೆಗೆದು ಮೊಟ್ಟೆಯನ್ನು ಬೋಗಿಯ ಹ್ಯಾಂಡಲ್‍ಗೆ ಒಡೆದು ಅದರ ಸಿಪ್ಪೆ ತೆಗೆದು ಆ ಪ್ಲಾಸ್ಟಿಕ್‍ ಕವರ್‌ನಲ್ಲಿ ಹಾಕಿ ನಂತರ ಮತ್ತೆ ವಿಸ್ಕಿ ಗ್ಲಾಸ್ ಹಿಡಿದು ಅದನ್ನು ಹೀರುತ್ತಾ ಮೊಟ್ಟೆ ತಿಂದಿದ್ದಾನೆ. ಇದನ್ನು ಅಲ್ಲಿದ್ದ ಸಹ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದೆಹಲಿ ಮೆಟ್ರೋದೊಳಗೆ ಈತ ಮಾಡಿದ್ದೇನು ನೋಡಿ...



ಈ ವಿಡಿಯೊ ವೈರಲ್ ಆದ ನಂತರ ದೆಹಲಿ ಮೆಟ್ರೋ ಒಳಗೆ ಮದ್ಯ ಸೇವಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದರೂ, ಈ ಬಗ್ಗೆ ದೆಹಲಿ ಮೆಟ್ರೋ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ವಿಡಿಯೊ ನೋಡಿದ ನೆಟ್ಟಿಗರು ಇದು ಆಲ್ಕೋಹಾಲ್? ಅಥವಾ ಇದು ಬೇರೆ ಯಾವುದೋ ಪಾನೀಯವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೇ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

"ಮೆಟ್ರೋದಲ್ಲಿ ಜನರು ಹಾಸ್ಯಾಸ್ಪದ ರೀಲ್‍ಗಳನ್ನು ತಯಾರಿಸುವಾಗ, ಮೊಟ್ಟೆ ಮತ್ತು ಆಲ್ಕೋಹಾಲ್ ಸೇವಿಸುವುದು ದೊಡ್ಡ ವಿಷಯವಲ್ಲ" ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ ಈ ಸಾರ್ವಜನಿಕ ಸಾರಿಗೆ ಆಗಾಗ್ಗೆ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ” ಎಂದು ಮತ್ತೊಬ್ಬರು ಬರೆದಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಈ ರೀತಿಯ ಘಟನೆ ನಡೆದದಿರುವುದು ಇದೇ ಮೊದಲಲ್ಲ. ಈ ಹಿಂದೆ, ದೆಹಲಿ ಮೆಟ್ರೋದಿಂದ ಫೈಟ್‍ಗಳು, ಅಶ್ಲೀಲ ನೃತ್ಯ ಪ್ರದರ್ಶನಗಳು ಮತ್ತು ಅಶ್ಲೀಲ ಕೃತ್ಯಗಳ ವಿಡಿಯೊಗಳು ವೈರಲ್ ಆಗಿದ್ದವು. ಇತ್ತೀಚೆಗಷ್ಟೇ ದೆಹಲಿ ಮೆಟ್ರೋದ ಇಬ್ಬರು ಪ್ರಯಾಣಿಕರು ಚಲಿಸುವ ರೈಲಿನಲ್ಲಿ ಪರಸ್ಪರ ಜಗಳವಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರೈಲಿನಲ್ಲಿ ಮಹಿಳೆಯೊಂದಿಗೆ ಇದ್ದ ಯುವಕ ಮತ್ತು ಪುರುಷನೊಬ್ಬನ ನಡುವೆ ಜಗಳ ನಡೆದಿತ್ತು. ರೈಲಿನೊಳಗೆ ಅವರು ಪರಸ್ಪರ ಹೊಡೆಯುವುದು ಮತ್ತು ಒದೆಯುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ರೈಲಿನಲ್ಲಿದ್ದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು.