ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonu Sood: ಪತ್ನಿ ಕಾರು ಅಪಘಾತ; ಸೀಟ್ ಬೆಲ್ಟ್ ಧರಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ ನಟ ಸೋನು ಸೂದ್!

ಸೋನು ಸೂದ್ ಅವರ ಪತ್ನಿ ಮತ್ತು ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಸೋನ್ ಸೂದ್ ಕುಟುಂಬ ಬದುಕಿ ಉಳಿದಿದ್ದೆ ಪವಾಡ ಎಂಬತ್ತಿತ್ತು. ಆದರೆ ಅಪಘಾತದಲ್ಲಿ ತನ್ನ ಪತ್ನಿ,ಆಕೆಯ ಸೋದರಳಿಯ ಮತ್ತು ಸಹೋದರಿಯ ಪ್ರಾಣ ಉಳಿಸಿದ್ದೇ ಸೀಟ್ ಬೆಲ್ಟ್ ಎಂಬುದಾಗಿ ನಟ ಸೋನ್ ಸೂದ್ ತಿಳಿಸಿದ್ದಾರೆ.

ಸೀಟ್ ಬೆಲ್ಟ್ ಧರಿಸುವಂತೆ ಸಾರ್ವಜನಿಕರಲ್ಲಿ‌ ನಟ ಸೋನು ಸೂದ್​ ಮನವಿ

Sonu Sood

Profile Pushpa Kumari Apr 7, 2025 6:54 PM

ನವದೆಹಲಿ: ಇತ್ತೀಚೆಗೆ ಬಾಲಿವುಡ್‌ ನಟ ಸೋನು ಸೂದ್‌ (Sonu Sood) ಪತ್ನಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಕಾರಿನಲ್ಲಿದ್ದವರು ತೀವ್ರ ಗಾಯಗೊಂಡಿದ್ದರು. ಮುಂಬೈ ನಾಗ್ಪುರ ಹೆದ್ದಾರಿಯ ಬಳಿ ಈ ಘಟನೆ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಕಾರು ನಜ್ಜು ಗುಜ್ಜಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್​ ಆಗಿತ್ತು. ಇದೀಗ ಅಪಘಾತ ನಡೆದಿರುವ ಬಗ್ಗೆ‌ ಇನ್‌ಸ್ಟಾಗ್ರಾಮ್​ನಲ್ಲಿ ವಿಡಿಯೊ ಹಂಚಿಕೊಂಡಿರುವ ನಟ ಸೋನ್ ಸೂದ್ ಸೀಟ್ ಬೆಲ್ಟ್ ಜಾಗೃತಿಯ ಬಗ್ಗೆ ಸಂದೇಶ ನೀಡಿದ್ದಾರೆ. ಕಾರಿನ ಹಿಂಭಾಗ ದಲ್ಲಿ ಕುಳಿತು ಕೊಳ್ಳುವ ಪ್ರಯಾಣಿಕರೂ ಕೂಡಾ ಸೀಟ್ ಬೆಲ್ಟ್‌ ಧರಿಸುವ ಮಹತ್ವದ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ.

ಸೋನು ಸೂದ್ ಅವರ ಪತ್ನಿ ಮತ್ತು ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಸೋನ್ ಸೂದ್ ಕುಟುಂಬ ಬದುಕಿ ಉಳಿದಿದ್ದೆ ಪವಾಡ ಎಂಬತ್ತಿತ್ತು. ಅದರೆ ಅಪಘಾತದಲ್ಲಿ ತನ್ನ ಪತ್ನಿ, ಆಕೆಯ ಸೋದರಳಿಯ ಮತ್ತು ಸಹೋದರಿಯ ಪ್ರಾಣ ಉಳಿ ಸಿದ್ದೇ ಸೀಟ್ ಬೆಲ್ಟ್ ಎಂಬುದಾಗಿ ನಟ ಸೋನ್ ಸೂದ್ ತಿಳಿಸಿದ್ದಾರೆ. ಈ ಮೂಲಕ ಕಾರಿನ ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕ‌ರೂ ಕೂಡಾ ಸೀಟ್ ಬೆಲ್ಟ್‌ ಧರಿಸುವ ಪ್ರಮುಖ ಸಂದೇಶವನ್ನು ನಟ ನೀಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್​ನಲ್ಲಿ ವಿಡಿಯೊ ಮೂಲಕ‌ ಸಂದೇಶ ನೀಡಿರುವ ನಟ, ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ ತಮ್ಮ ಪತ್ನಿ, ಆಕೆಯ ಸೋದರಳಿಯ ಮತ್ತು ಸಹೋದರಿಯ ಸುರಕ್ಷತೆಯನ್ನು ಸೀಟ್ ಬೆಲ್ಟ್ ಮಾಡಿದೆ. ಹಿಂಬದಿ ಸೀಟಿನಲ್ಲಿ ಕುಳಿತ ಪ್ರಯಾಣಿಕರು ಹೆಚ್ಚಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದಿಲ್ಲ.ಆದರೆ ಈ ಬಗ್ಗೆ ಪ್ರತಿ ಯೊಬ್ಬರು ನಿಗಾ ವಹಿಸಿ ಎಂದು ಸಂದೇಶ ನೀಡಿದ್ದಾರೆ. ಅಪಘಾತದ ನಡೆದ ದಿನವನ್ನು ನೆನಪಿಸಿಕೊಂಡ ನಟ, ಸೋನಾಲಿ ಅವರ ಅಕ್ಕ ಸುನೀತಾ ಅವರಲ್ಲಿ ಸೀಟ್ ಬೆಲ್ಟ್ ಧರಿಸಲು ತಿಳಿಸಿದ ಕೆಲವೇ ನಿಮಿಷಗಳ ನಂತರ ಕಾರು ಅಪಘಾತ ಸಂಭವಿಸಿದೆ. ಹೀಗಾಗಿ ಸೀಟ್​ ಬೆಲ್ಟ್​ ಅವರ ಜೀವ ಉಳಿಸಿತೆಂದು ಅವರು ತಿಳಿಸಿದರು.

ಇದನ್ನು ಓದಿ: Monk the Young Movie: ವಿಭಿನ್ನ ಕಥಾಹಂದರವುಳ್ಳ ʼಮಾಂಕ್ ದಿ ಯಂಗ್ʼ ಚಿತ್ರ ಫೆ.28ಕ್ಕೆ ರಿಲೀಸ್‌

ಹಿಂಭಾಗದಲ್ಲಿ ಕುಳಿತುಕೊಳ್ಳುವ ಹೆಚ್ಚಿನ ಜನರು ಸೀಟ್ ಬೆಲ್ಟ್ ಧರಿಸು ವುದಿಲ್ಲ. ಸೀಟ್​ ಬೆಲ್ಟ್​​ ಧರಿಸೋದು ಕೇವಲ ಮುಂಭಾಗದವರ ಜವಾಬ್ದಾರಿ ಎಂದು ಅಂದುಕೊಳ್ಳುತ್ತಾರೆ. ಆದರೆ ಹಿಂಬದಿ ಪ್ರಯಾಣಿಕರು ಸಿಟ್​ ಬೆಲ್ಟ್​​ ಧರಿಸದೇ ಪ್ರಯಾಣಿಸಬೇಡಿ ಎಂದು ನಿಮ್ಮೆಲ್ಲರಲ್ಲೂ ಮನವಿ ಮಾಡಿ ಕೊಳ್ಳುತ್ತೇನೆ"ಹಾಗಾಗಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ಸಿಟ್​ ಬೆಲ್ಟ್ ಧರಿಸಲು ಮರೆಯದಿರಿ ಎಂದು ಹೇಳಿದ್ದಾರೆ. ಮಾರ್ಚ್ 24ರ ರಾತ್ರಿ ನಾಗ್ಪುರದಲ್ಲಿ ರಸ್ತೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸೋ ನಾಲಿ ಸೂದ್ ಮತ್ತು ಅವರ ಸಹೋದರಿಯ ಮಗನಿಗೆ ಗಂಭೀರ ಗಾಯ ಗಳಾಗಿದ್ದು, ನಾಗ್ಪುರದಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಂಡಿದ್ದಾರೆ.