ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health: ಎಡ ಭುಜದ ಮುರಿತಕ್ಕೆ ಒಳಗಾಗಿದ್ದ 57 ವರ್ಷದ ವ್ಯಕ್ತಿಗೆ ಅಪರೂಪದ ಭುಜದ ಕೀಲು ಮರುನಿರ್ಮಣ ಶಸ್ತ್ರಚಿಕಿತ್ಸೆ

ಸಂಪೂರ್ಣ ತಪಾಸಣೆಯ ನಂತರ ಅವರ ಎಡ ಭುಜದ ಅಕ್ರೋಮಿಯೊಕ್ಲಾವಿಕ್ಯುಲರ್‌ (ಎಸಿ) ಕೀಲುಗಳಲ್ಲಿ ಮುರಿತವಾಗಿರುವುದು ಕಂಡು ಬಂತು. ಅಕ್ರೋಮಿಯೊಕ್ಲಾವಿಕ್ಯುಲರ್‌ ಎನ್ನುವುದು ಭುಜದಲ್ಲಿನ ಡಿಸ್ಲೊಕೇಷನ್‌ಗಳಲ್ಲಿ ಒಂದು. ಇಲ್ಲಿ ಮುರಿತವಾಗಿ 10 ದಿನ ಕಳೆದಿದ್ದರೂ ಅವರು ಹಾಗೇ ನಿರ್ಲಕ್ಷಿಸಿದ್ದರಿಂದ ಪರಿಸ್ಥಿತಿ ಸವಾಲಿನದ್ದಾಗಿತ್ತು

57 ವರ್ಷದ ವ್ಯಕ್ತಿಗೆ ಅಪರೂಪದ ಭುಜದ ಕೀಲು ಮರುನಿರ್ಮಣ ಶಸ್ತ್ರಚಿಕಿತ್ಸೆ

Profile Ashok Nayak Apr 7, 2025 5:29 PM

ಚೆನ್ನಪಟ್ಟಣ: ತೀವ್ರವಾದ ಎಡ ಭುಜದ ನೋವಿನಿಂದ ಬಳಲುತ್ತಿದ್ದ 57 ವರ್ಷದ ಚೆನ್ನಪಟ್ಟಣ ಮೂಲದ ವ್ಯಕ್ತಿಗೆ ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಭುಜದ ಕೀಲು ಮರುನಿರ್ಮಣ ಮಾಡಲಾಗಿದೆ. ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಸಲಹೆಗಾರ ಡಾ.ಮಂಜುನಾಥ್ ಕೋಡಿಹಳ್ಳಿ ಅವರ ತಂಡ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನಡೆಸಿದ್ದು, ಶಸ್ತ್ರಚಿಕಿತ್ಸೆಯಾದ ಒಂದೇ ದಿನದಲ್ಲಿ ರೋಗಿಯನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋ ಪೆಡಿಕ್ಸ್ ಸಲಹೆಗಾರ ಡಾ. ಮಂಜುನಾಥ್ ಕೋಡಿಹಳ್ಳಿ , ಚೆನ್ನಪಟ್ಟಣ ಮೂಲದ 57 ವರ್ಷದ ಪ್ರಕಾಶ್‌ ಎಂಬ ವ್ಯಕ್ತಿ ಯು ತನ್ನ ಎಡ ಭುಜದಲ್ಲಿ ಅತೀವ ನೋವು ಅನುಭವಿಸು ತ್ತಿದ್ದರು.

ನೋವು ನಿವಾರಿಸಿ ಕೊಳ್ಳಲು ಸಾಕಷ್ಟು ಪೇನ್‌ ಕಿಲ್ಲರ್‌ಗಳನ್ನು ಸತತ 10 ದಿನದವರೆಗೂ ದೂಡಿದ್ದಾರೆ. ಆದರೆ, ಅಸಾಧ್ಯವಾದ ನೋವು ಇದ್ದ ಕಾರಣ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು.

ಇದನ್ನೂ ಓದಿ: Health Tips: ಪ್ರತಿದಿನ ವಾಕಿಂಗ್ ಮಾಡಿದ್ರೆ ಹೃದಯಾಘಾತದ ಅಪಾಯ ಕಡಿಮೆ

ಸಂಪೂರ್ಣ ತಪಾಸಣೆಯ ನಂತರ ಅವರ ಎಡ ಭುಜದ ಅಕ್ರೋಮಿಯೊಕ್ಲಾವಿಕ್ಯುಲರ್‌ (ಎಸಿ) ಕೀಲುಗಳಲ್ಲಿ ಮುರಿತವಾಗಿರುವುದು ಕಂಡು ಬಂತು. ಅಕ್ರೋಮಿಯೊಕ್ಲಾವಿಕ್ಯುಲರ್‌ ಎನ್ನುವುದು ಭುಜದಲ್ಲಿನ ಡಿಸ್ಲೊಕೇಷನ್‌ಗಳಲ್ಲಿ ಒಂದು. ಇಲ್ಲಿ ಮುರಿತವಾಗಿ ೧೦ ದಿನ ಕಳೆದಿದ್ದರೂ ಅವರು ಹಾಗೇ ನಿರ್ಲಕ್ಷಿಸಿದ್ದರಿಂದ ಪರಿಸ್ಥಿತಿ ಸವಾಲಿನದ್ದಾಗಿತ್ತು. ಅವರ ಫಿಟ್‌ನೆಸ್‌ ತಿಳಿದುಕೊಳ್ಳಲು ಹೃದ್ರೋಗತಜ್ಞರ ಅಭಿಪ್ರಾಯದ ಜೊತೆಗೆ, ರೋಗಿಗೆ ಎಡ ಭುಜದ ಆತ್ರೋಸ್ಕೋಪಿಕ್‌ ಎಸಿ ಕೀಲು ಪುನರ್‌ನಿರ್ಮಾಣ ಮಾಡಲು ನಿರ್ಣಯಿಸ ಲಾಯಿತು ಎಂದರು.

ಸಾಕಷ್ಟು ಜನರು ಭುಜದ ನೋವಿದ್ದರೂ ಅದನ್ನು ನಿರ್ಲಕ್ಷಿಸಿ ಬಿಡುತ್ತಾರೆ, ಕೆಲವೊಮ್ಮೆ ಭುಜದ ಮೂಳೆ ಮುರಿತ ಅಥವಾ ಡಿಸ್ಲೊಕೇಷನ್‌ಗಳಿಂದ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಆಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಭುಜದ ನೋವನ್ನು ನಿರ್ಲಕ್ಷಿಸು ವುದು ಒಳ್ಳೆಯದಲ್ಲ ಎಂದು ಹೇಳಿದರು.

ಫೋರ್ಟಿಸ್ ಆಸ್ಪತ್ರೆ ಫೆಸಿಲಿಟಿಸ್‌ ನಿರ್ದೇಶಕ ತೇಜಸ್ವಿನಿ ಪಾರ್ಥಸಾರಥಿ ಮಾತನಾಡಿ, “ನಮ್ಮಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ರೋಬೋಟಿಕ್‌ ಶಸ್ತ್ರಚಿಕಿತ್ಸೆಗಳು ಹೆಚ್ಚು ಪ್ರಚಲಿದಲ್ಲಿದ್ದು, ವಿಶ್ವ ದರ್ಜೆಯ ಮೂಳೆಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.