Viral Video: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ; ಕೊನೆಗೆ ಆಗಿದ್ದೇನು?
ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಕೊಲೆಗೆ ಯತ್ನಿಸಿದ 19 ವರ್ಷದ ಆರೋಪಿ ಕೇಶವ್ ಶರ್ಮಾ ಟಾಯ್ಲೆಟ್‍ಗೆ ಹೋಗುವ ನೆಪ ಹೇಳಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ ಘಟನೆ ನಡೆದಿದೆ. ನಂತರ ಪೊಲಿಸರು ಆತನನ್ನು ಮತ್ತೆ ಬಂಧಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.


ಶಿಮ್ಲಾ: ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಕೊಲೆಗೆ ಯತ್ನಿಸಿದ 19 ವರ್ಷದ ಆರೋಪಿ ಕೇಶವ್ ಶರ್ಮಾ ಟಾಯ್ಲೆಟ್‍ಗೆ ಹೋಗುವ ನೆಪ ಹೇಳಿ ಪೊಲೀಸ್ ಜೀಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ. ಮೂತ್ರ ಮಾಡಲು ಟಾಯ್ಲೆಟ್ ಹೋಗಬೇಕೆಂದು ಆತ ವಿನಂತಿಸಿದ ಕಾರಣ ಅವನ ಕೋರಿಕೆಯ ಮೇರೆಗೆ ಪೋಲೀಸರು ಜೀಪಿನ ಬಾಗಿಲು ತೆರೆದಿದ್ದಾರೆ. ಆದರೆ ಆರೋಪಿ ವಾಹನದಿಂದ ಇಳಿದು ಮುಖ್ಯ ರಸ್ತೆಯ ಕಡೆಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ನಂತರ ಆತ ಪರಾರಿಯಾಗುವುದನ್ನು ಕಂಡ ಪೊಲೀಸರು ಅವನ ಬೆನ್ನಟ್ಟಿ ಅವನನ್ನು ಮತ್ತೆ ಬಂಧಿಸಿದ್ದಾರೆ. ಈ ಘಟನೆಯು ಪೊಲೀಸ್ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಕಪ್ಪು ಟೀ ಶರ್ಟ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿದ್ದ ಕೊಲೆ ಆರೋಪಿ, ಪೊಲೀಸ್ ವಾಹನದಿಂದ ಕೆಳಗಿಳಿದು ಎಕ್ಸಿಟ್ ಡೋರ್ ಕಡೆಗೆ ಓಡುತ್ತಿರುವ ವಿಡಿಯೊದಲ್ಲಿ ಸೆರೆಯಾಗಿದೆ. ಪೊಲೀಸರು ಕೂಡ ಹಿಡಿಯಲು ಆತನನ್ನು ಹಿಡಿಯಲು ಹಿಂದೆ ಓಡಿದ್ದಾರೆ. ವರದಿ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವೃದ್ಧನೊಬ್ಬನನ್ನು ಕೊಲ್ಲಲು ಪ್ರಯತ್ನಿಸಿದ ನಂತರ ಶರ್ಮಾನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಪೊಲೀಸ್ ವಾಹನದಿಂದ ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿಯ ವಿಡಿಯೊ ಇಲ್ಲಿದೆ ನೋಡಿ...
उत्तर प्रदेश के हमीरपुर जिले में एक कैदी पुलिस वाहन से शौचालय जाने का बहाना बनाकर फरार हो गया। हालांकि, पुलिस ने तत्परता दिखाते हुए उसे पुनः गिरफ्तार कर लिया। इस घटना ने पुलिस की सुरक्षा व्यवस्था पर सवाल खड़े कर दिए हैं।#Hamirpur #CrimeNews #UPPolice #viralvideo pic.twitter.com/pv5gZyWkzv
— Lallu Ram (@lalluram_news) April 5, 2025
ದಾರಿಯ ಮಧ್ಯದಲ್ಲಿ ಟಾಯ್ಲೆಟ್ ಹೋಗುವ ನೆಪ ಹೇಳಿ ಆರೋಪಿಗಳು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಈ ಹಿಂದೆ ಕೂಡ ನಡೆದಿತ್ತು. ದೆಹಲಿಯಿಂದ ಜೈಪುರವನ್ನು ಕರೆತರುವಾಗ, ದುಷ್ಕರ್ಮಿಯೊಬ್ಬ ಪೊಲೀಸರ ಮೇಲೆ ಗುಂಡು ಹಾರಿಸುವ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ತಪ್ಪಿಸಿಕೊಳ್ಳುವ ಮುನ್ನ ಆತ ಪೊಲೀಸ್ ಕಾರಿನಲ್ಲಿದ್ದ ಎಸ್ಐ ಅವರ ಪಿಸ್ತೂಲ್ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಿದ್ದ. ಆಗ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದರು.
ಆರೋಪಿಯನ್ನು ರಾಕೇಶ್ ಯಾದವ್ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಸುಲಿಗೆ ಮತ್ತು ಗುಂಡಿನ ದಾಳಿ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಒಂದು ವರ್ಷದ ಹಿಂದೆ ರಾಕೇಶ್ ಜೈಪುರದಿಂದ ಪರಾರಿಯಾಗಿದ್ದು, 1 ಕೋಟಿ ರೂ.ಗಳ ಸುಲಿಗೆ ಹಣ ನೀಡದ ಕಾರಣ ಆಭರಣ ವ್ಯಾಪಾರಿಯ ಮಗನ ಮೇಲೆ ಗುಂಡು ಹಾರಿಸಿದ್ದ. ಅದರ ನಂತರ ವಿದ್ಯಾಧರ್ ನಗರ ಪೊಲೀಸ್ ಠಾಣೆಯು ದುಷ್ಕರ್ಮಿಗಳನ್ನು ಹುಡುಕಲು ಅನೇಕ ರಾಜ್ಯಗಳಲ್ಲಿ ದಾಳಿ ನಡೆಸಿತ್ತು. ಮತ್ತು ಆತನ ಬಂಧನಕ್ಕೆ 1.25 ಲಕ್ಷ ರೂ.ಗಳ ಬಹುಮಾನವನ್ನೂ ಘೋಷಿಸಲಾಗಿತ್ತು. ನಂತರ ದುಷ್ಕರ್ಮಿ ಅಸ್ಸಾಂನಲ್ಲಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ಮೇ 13 ರಂದು ಅಸ್ಸಾಂನ ದಿಬ್ರುಗಢದ ಮೇಲೆ ದಾಳಿ ನಡೆಸಿ ಅಲ್ಲಿ ಗ್ರಾಮದ ಮನೆಯೊಂದರಲ್ಲಿ ಅಡಗಿದ್ದ ದುಷ್ಕರ್ಮಿ ರಾಕೇಶ್ ಕುಮಾರ್ ಯಾದವನನ್ನು ಬಂಧಿಸಿದ್ದರು.