Rishab Shetty: ರಿಷಬ್ ಶೆಟ್ಟಿ ಪುತ್ರನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ; ದೈವದ ಅಭಯ ಸಿಕ್ಕ ಬೆನ್ನಲ್ಲೇ ಮಕ್ಕಳ ವಿಡಿಯೋ ಶೇರ್ ಮಾಡಿದ ಪ್ರಗತಿ
ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದೇವರ ಮೊರೆ ಹೋಗಿದ್ದಾರೆ. ತಮ್ಮ ಕುಟುಂಬಕ್ಕಿರುವ ಸಂಕಷ್ಟವನ್ನು ದೂರ ಮಾಡುವಂತೆ ಕುಟುಂಬ ಸಮೇತ ಪಂಜುರ್ಲಿ ದೇವರ ಬಳಿ ಮನವಿ ಮಾಡಿಕೊಂಡಿದ್ದಾರೆ. ದೈವದ ಆಶೀರ್ವಾದ ಸಿಗುತ್ತಲೇ ರಿಷಬ್ ಪತ್ನಿ ಪ್ರಗತಿ ತಮ್ಮ ಮಕ್ಕಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಬೆಂಗಳೂರು: ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ದೇವರ ಮೊರೆ ಹೋಗಿದ್ದಾರೆ. ತಮ್ಮ ಕುಟುಂಬಕ್ಕಿರುವ ಸಂಕಷ್ಟವನ್ನು ದೂರ ಮಾಡುವಂತೆ ಕುಟುಂಬ ಸಮೇತ ಪಂಜುರ್ಲಿ ದೇವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ದೈವದಲ್ಲಿ ಕಷ್ಟ ಹೇಳಿಕೊಂಡ ರಿಷಬ್ ಶೆಟ್ಟಿ ತಮ್ಮ ನೋವನ್ನು ತಿಳಿಸಿದ್ದಾರೆ. ಆದ ದೈವ ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್ ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ? ನೀನು ನಂಬಿದ ದೈವ ಕೈಬಿಡಲ್ಲ ಎಂದು ದೈವ ಆಶ್ವಾಸನೆ ನೀಡಿದೆ. ದೈವದ ಆಶೀರ್ವಾದ ಸಿಗುತ್ತಲೇ ರಿಷಬ್ ಪತ್ನಿ ಪ್ರಗತಿ ತಮ್ಮ ಮಕ್ಕಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಪುತ್ರ ರನ್ವಿತ್ ಇಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಕುಟುಂಬಕ್ಕೆ ದೈವ ಅಭಯ ನೀಡಿದೆ. ಇಷ್ಟು ದಿನ ರಿಷಬ್ ಕುಂಟುಂಬ ಗೊಂದಲದಲ್ಲಿದ್ದಂತೆ ತೋರುತ್ತಿತ್ತು. ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದಲೇ ದೈವದ ಉತ್ಸವಕ್ಕೆ ಹೋಗಿದ್ದರು. ಯಾರೋ ನಿನಗೆ ಕೇಡು ಬಗೆದಿದ್ದಾರೆ, ಅವರು ಯಾರೆಂದು ನಾನು ಹೇಳಲ್ಲ, ನಿನಗೆ ಕೇಡು ಆಗದಂತೆ ನೋಡಿಕೊಳ್ಳುವೆ, ನನಗೆ ಸೇವೆ ನೀಡುವ ಹರಕೆ ಹೇಳಿಕೋ 5 ತಿಂಗಳಲ್ಲಿ ಒಳ್ಳೆದು ಮಾಡುತ್ತೇನೆ ಎಂದು ಅಭಯ ನೀಡಿದೆ. ಈ ಮೂಲಕ ಕೈಮುಗಿದು ಬೇಡಿಕೊಂಡ ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ಸಿಕ್ಕಿದೆ. ಇದೀಗ ಪ್ರಗತಿ ತಮ್ಮ ಮುದ್ದು ಮಗನ ಹುಟ್ಟುಹಬ್ಬಕ್ಕೆ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.
ವಿಡಿಯೋದಲ್ಲೇನಿದೆ?
ಪ್ರಗತಿ ಶೆಟ್ಟಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಅವರ ಇಬ್ಬರು ಮಕ್ಕಳನ್ನು ಕಾಣಬಹುದಾಗಿದೆ. ರನ್ವಿತ್ ಹಾಗೂ ಮಗಳು ರಾಧೆಯ ಇಬ್ಬರೂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯ ಮಗನೆ ನೀನು ನಮ್ಮನೆ ಬೆಳಕು. ನಿನ್ನ ನಗುವಿನಿಂದ ನಮ್ಮ ಬದುಕು ಸುಂದರವಾಗಿದೆ. ನಿನಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ.