ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕೀ‍ ಚೈನ್‌ ಗಿಫ್ಟ್‌ ಕೊಟ್ಟ ಪತ್ನಿ ಮೇಲೆ ಪತಿ ಫುಲ್‌ ಗರಂ! ಅಷ್ಟಕ್ಕೂ ಆಗಿದ್ದೇನು ಗೊತ್ತಾ? ವಿಡಿಯೊ ನೋಡಿ

ಭಾರತೀಯ ಮಹಿಳೆಯೊಬ್ಬಳು ತನ್ನ ಪತಿಗೆ ನೀಡಲು ಬೆಕ್ಕಿನ ಆಕಾರದ ಕೀಚೈನ್‍ಗಾಗಿ 77,000 ರೂ.ಗಳನ್ನು (ಸುಮಾರು 700 ಪೌಂಡ್) ಖರ್ಚು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಕೇವಲ ಒಂದು ಕೀಚೈನ್‍ಗಾಗಿ ಅಷ್ಟೊಂದು ಹಣ ಖರ್ಚು ಮಾಡಿದ್ದಕ್ಕೆ ಪತಿ ಶಾಕ್ ಆಗಿದ್ದಾನೆ. ಈ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕೀ‍ ಚೈನ್‌ ಗಿಫ್ಟ್‌ ಕೊಟ್ಟ ಪತ್ನಿ ಮೇಲೆ ಪತಿ ಫುಲ್‌ ಗರಂ!

Profile pavithra Apr 7, 2025 4:47 PM

ನವದೆಹಲಿ: ಭಾರತೀಯ ಮಹಿಳೆಯೊಬ್ಬಳು ತನ್ನ ವಿದೇಶಿ ಪತಿಯೊಂದಿಗೆ ಜೋಕ್ ಮಾಡಿದ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದರಲ್ಲಿ ಪತ್ನಿ ತನ್ನ ಪತಿಗೆ ಬೆಕ್ಕಿನ ಆಕಾರದ ಕೀಚೈನ್‍ಗಾಗಿ 77,000 ರೂ.ಗಳನ್ನು (ಸುಮಾರು 700 ಪೌಂಡ್) ಖರ್ಚು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಕೇವಲ ಒಂದು ಕೀಚೈನ್‍ಗಾಗಿ ಪತ್ನಿ ಅಷ್ಟು ದುಬಾರಿ ಹಣ ಕೊಟ್ಟು ಖರೀದಿಸಿದನ್ನು ಕೇಳಿ ಪತಿ ಶಾಕ್ ಆಗಿದ್ದಾನೆ. ಈ ಘಟನೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ತಮಾಷೆಗಾಗಿ ಹಂಚಿಕೊಳ್ಳಲಾಗಿದೆ.

ವೈರಲ್ ಆದ ವಿಡಿಯೊದಲ್ಲಿ ಮಹಿಳೆ ಸಾಂಪ್ರದಾಯಿಕ ಭಾರತೀಯ ಶೈಲಿಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಅವಳು ತಿಳಿ ಬಣ್ಣದ ಸೀರೆ ಮತ್ತು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದಾಳೆ. ಅವಳು ಕ್ಯಾಮೆರಾ ಮುಂದೆ ನಿಂತು ತೆಲುಗಿನಲ್ಲಿ ಮಾತನಾಡುತ್ತಾ, ಕೈಯಲ್ಲಿ ಬೆಕ್ಕಿನ ಆಕಾರದ ಕೀಚೈನ್ ಅನ್ನು ತೋರಿಸಿದ್ದಾಳೆ. ಆಕೆ ಈ ಕೀ ಚೈನ್ ಅನ್ನು ಆನ್‍ಲೈನ್‍ನಲ್ಲಿ £ 700ಕ್ಕೆ ಅಂದರೆ ರೂ. 77,143 ಕ್ಕೆ ಖರೀದಿಸಿದ್ದೇನೆ ಎಂದು ಹೇಳಿದ ತಕ್ಷಣ, ಪತಿ ಶಾಕ್‌ ಆಗಿದ್ದಾನೆ. "ಏನು? ಈ ನಿಷ್ಪ್ರಯೋಜಕ ವಸ್ತುವಿಗಾಗಿ ನೀನು ಅಷ್ಟು ಹಣವನ್ನು ಖರ್ಚು ಮಾಡಿದ್ದೀಯಾ? ಆ ಹಣದಿಂದ ನಾನು ಕಾರು ಖರೀದಿಸುತ್ತಿದ್ದೆ ಎಂದು ಹೇಳಿದ್ದಾನೆ. ಪತಿಯ ಪ್ರಾಮಾಣಿಕ ಪ್ರತಿಕ್ರಿಯೆ ನೆಟ್ಟಿಗರ ಮುಖದಲ್ಲಿ ನಗುವನ್ನು ಮೂಡಿಸಿದೆ.

ಮಹಿಳೆಯ ತಮಾಷೆಯ ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದು ಈಗ ನೆಟ್ಟಿಗರ ಗಮನ ಸೆಳೆದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಇದುವರೆಗೆ 99 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 2 ಲಕ್ಷ 53 ಕ್ಕೂ ಹೆಚ್ಚು ಲೈಕ್‍ಗಳು ಬಂದಿವೆ. ವಿಡಿಯೊವನ್ನು ನೋಡಿದ ನೆಟ್ಟಿಗರು ಕಾಮೆಂಟ್‍ಗಳನ್ನು ಮಾಡಿದ್ದಾರೆ. ಆತ ಬಡಪಾಯಿ ಪತಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಆದರೂ ಅವರು ಶಾಂತವಾಗಿದ್ದರು, ಕೋಪದಲ್ಲಿ ಯಾವುದೇ ತಪ್ಪು ಮಾತನ್ನು ಹೇಳಲಿಲ್ಲ - ಇದು ನಿಜವಾದ ಸಂಬಂಧ ಎಂದು ಹೊಗಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮಹಿಳೆಯ ಕೈಯಲ್ಲಿದ್ದ ಶ್ವಾನ ಕಸಿದು ಎಸ್ಕೇಪ್‌ ಆದ ಕಿರಾತಕರು! ಶಾಕಿಂಗ್‌ ವಿಡಿಯೊ ವೈರಲ್‌

ಮಹಿಳೆಯರು ತಮ್ಮ ಪತಿಯನ್ನು ತಮಾಷೆ ಮಾಡಿ ಕಾಲೆಳೆಯುವಂತಹ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಮಹಿಳೆಯೊಬ್ಬಳು ಬೆಲ್ಟ್ ಅನ್ನು ಹಾವಿನಂತೆ ಸೆಟ್ ಮಾಡಿ ತನ್ನ ಪತಿಯನ್ನು ರೂಂಗೆ ಕರೆದು ಹಾವು ಎಂದು ತೋರಿಸಿ ಆತ ಎದ್ದುಬಿದ್ದು ಓಡುವಂತೆ ಮಾಡಿದ್ದಳು. ಈ ವಿಡಿಯೊ ನೋಡುಗರು ಬಿದ್ದು ಬಿದ್ದು ನಗುವಂತೆ ಮಾಡಿತ್ತು. ಹಾಗಾಗಿ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.