MLA Pradeep Eshwar: ವಾರ್ಡ್ 8ರಲ್ಲಿ ನಗರವಾಸಿಗಳ ಅಹವಾಲು ಆಲಿಸಿದ ಶಾಸಕ ಪ್ರದೀಪ್ ಈಶ್ವರ್
ವಿದ್ಯುತ್ ಪೋಲ್ ತೆಗೆಸಲು ಒಬ್ಬರು ಮನವಿ ಮಾಡಿದ್ದಾರೆ. ಕೊಳಚೆ ನಿರ್ಮೂಲನೆ ಮಂಡಳಿ ಯಿಂದ 16 ಮಂದಿಗೆ ಹಕ್ಕು ಪತ್ರ ಬರಬೇಕಿದೆ. ಈ ಬಗ್ಗೆ ಒಂದು ಸಭೆ ಮಾಡಬೇಕಿದೆ, ಇದಾದ ಬಳಿಕ ಅವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಈ ವಾರ್ಡು ಇನ್ನೂ ಕೂಡ ಪೂರ್ಣ ವಾಗಿಲ್ಲ ನಾಳೆ ನಾಳಿದ್ದು ಮುಗಿಸುತ್ತೇನೆ


ಚಿಕ್ಕಬಳ್ಳಾಪುರ : ಶಾಸಕ ಪ್ರದೀಪ್ ಈಶ್ವರ್ 2023 ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಿ ಶಾಸಕರಾದ ಹೊಸತರಲ್ಲಿ ಪ್ರಾರಂಭಿಸಿದ್ದ ನಮಸ್ತೆ ಚಿಕ್ಕಬಳ್ಳಾ ಪುರ ಕಾರ್ಯಕ್ರಮ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾರ್ಯಕ್ರಮ.ನಗರದ ೮ ನೇ ವಾರ್ಡಿನಲ್ಲಿ ಸೋಮವಾರ ಮತ್ತೆ ಪ್ರಾರಂಭಿಸುವ ಮೂಲಕ ನಗರವಾಸಿಗಳ ಕಷ್ಟಕ್ಕೆ ಧನಿಯಾಗಿದ್ದು ವಿಶೇಷವಾಗಿತ್ತು. ನಗರದಲ್ಲಿರುವ ಒಟ್ಟು ೩೧ ವಾರ್ಡುಗಳ ಪೈಕಿ ೧೨ ವಾರ್ಡುಗಳಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಪೂರ್ಣಗೊಳಿಸಿರುವ ಶಾಸಕ ಪ್ರದೀಪ್ ಈಶ್ವರ್ ಟಿಜಿ ಟ್ಯಾಂಕ್ ರಸ್ತೆಯ ೮ ವಾರ್ಡಿನಲ್ಲಿ ಮನೆಮನೆಗೆ ತೆರಳಿ ನಗರವಾಸಿಗಳ ಅಹವಾಲು ಆಲಿಸಿದರು.
ಎಂದಿನಂತೆ ಮನೆಮನೆಗೆ ಭೇಡಿ ನೀಡಿದ ಶಾಸಕರು ಅವರೊಂದಿಗೆ ಮನೆ ಮಗನಂತೆ ತೆಲುಗು ಕನ್ನಡ ಶೈಲಿಯಲ್ಲಿ ಮಾತನಾಡಿದರು.ಈ ವೇಳೆ ಜನತೆ ನಮ್ಮ ಬೀದಿಯಲ್ಲಿ ನೀರಿನ ಸಮಸ್ಯೆ ಯಿದೆ ಸರಿಪಡಿಸಿ, ವಿದ್ಯುತ್ ದೀಪ ಇಲ್ಲ ವ್ಯವಸ್ಥೆ ಮಾಡಿ, ಚರಂಡಿ ಸಮಸ್ಯೆಯಿದೆ ಸರಿಪಡಿಸಿ ಎಂದೆಲ್ಲಾ ಮನವಿ ಮಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: Chikkaballapur News: ಕಲ್ಲೂಡಿ ವ್ಯವಸಾಯ ಸೇವಾ ಸಹಕಾರ ಸಂಘ : ಪುಟ್ಟಸ್ವಾಮಿಗೌಡರ ಬಣದ ಪಾಲು
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ೮ ನೇ ವಾರ್ಡಿನಲ್ಲಿ ೧೬ ಮನೆಗಳಿಗೆ ಶೌಚಾಲಯ ಸಮಸ್ಯೆಯಿದೆ. ೮ ಮನೆಗಳವರು ಬೀದಿ ದೀಪ ಸರಿಪಡಿಸಿಕೊಡಿ ಎಂದು ಕೇಳಿದ್ದಾರೆ. ಸಂಜೆಯ ಒಳಗೆ ಅದನ್ನು ಸರಿಪಡಿಸಿಕೊಡುತ್ತೇನೆ. ಎಲ್ಲೆಲ್ಲಿ ಚರಂಡಿ ಕಟ್ಟಿ ಕೊಂಡಿದೆಯೋ ಪತ್ತೆ ಹಚ್ಚಿ ಕ್ಲೀನ್ ಮಾಡಲು ನಗರಸಭೆ ಸಿಬ್ಬಂದಿಗೆ ಹೇಳಿದ್ದೇನೆ.
೨೦ ಮಂದಿ ಬಂದು ಈಗಾಗಲೇ ಕೆಲಸ ಪ್ರಾರಂಭಿಸಿದ್ದಾರೆ. ವಿದ್ಯುತ್ ಪೋಲ್ ತೆಗೆಸಲು ಒಬ್ಬರು ಮನವಿ ಮಾಡಿದ್ದಾರೆ. ಕೊಳಚೆ ನಿರ್ಮೂಲನೆ ಮಂಡಳಿಯಿAದ ೧೬ ಮಂದಿಗೆ ಹಕ್ಕು ಪತ್ರ ಬರಬೇಕಿದೆ. ಈ ಬಗ್ಗೆ ಒಂದು ಸಭೆ ಮಾಡಬೇಕಿದೆ, ಇದಾದ ಬಳಿಕ ಅವರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು. ಈ ವಾರ್ಡು ಇನ್ನೂ ಕೂಡ ಪೂರ್ಣವಾಗಿಲ್ಲ ನಾಳೆ ನಾಳಿದ್ದು ಮುಗಿಸುತ್ತೇನೆ ಎಂದರು.
೮ನೇ ವಾರ್ಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವನ್ನು ನವೀಕರಣ ಮಾಡುವಾಗ ಚರಂಡಿಗೆ ಹಾಕಿರುವ ಕಸ ನಾಗರೀಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರದೀಪ್ ಸಮಾಜ ಕಲ್ಯಾಣ ಇಲಾಖೆಗೆ ನೋಟೀಸ್ ನೀಡಿ ಇದನ್ನು ತೆರವುಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ನಗರಸಭೆ ವಾಣಿಜ್ಯ ಮಳಿಗೆ ಹರಾಜು ಪ್ರಕರಣದ ಬಗ್ಗೆ ಮಾತನಾಡಿದ ನಗರಸಭೆ ಆಡಳಿತ ಬಜೆಟ್ ಮಂಡನೆ ದಿನವೇ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದು ತಪ್ಪು. ಇದು ಜಿಲ್ಲಾಧಿಕಾರಿಗಳ ಗಮನಕ್ಕೆ ಹೋಗಿರಬಹುದು,ಬಜೆಟ್ ಆಗಲಿಲ್ಲ ಎಂದರೆ ನಗರಸಭೆ ಆಡಳಿತ ನಡೆಸಲು ಆಗುವುದಿಲ್ಲ.ಈ ಪ್ರಕ್ರಿಯೆ ಮಾರ್ಚ್ ಒಳಗೆ ಮುಗಿಯಬೇಕಿತ್ತು. ಇದನ್ನೆಲ್ಲಾ ಪರಿಗಣಿಸಿಯೇ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಆಯುಕ್ತರು ಏ.೧೬ರಕ್ಕೆ ಮುಂದೂಡಿದ್ದಾರೆ.ನನಗೆ ಜನರ ಕಷ್ಟ ಕೇಳಲು ಇಷ್ಟ.ಇನ್ ಜನರಲ್ ವಿಷಯಗಳ ಬಗ್ಗೆ ಆಸಕ್ತಿಯಿಲ್ಲ .ಹರಾಜು ಮಾಡಲೇ ಬೇಕು ಎನ್ನುವುದೇ ಆದರೆ ಆವತ್ತೇ ಬಜೆಟ್ ಯಾಕೆ ಹಾಕಿಕೊಂಡರು.ಎರಡೂ ಒಂದೇ ದಿ ಇಟ್ಟಾಗ ಆಯುಕ್ತರು ಯಾವುದಕ್ಕೆ ಆದ್ಯತೆ ಕೊಡಬೇಕು ಅದಕ್ಕೆ ಕೊಟ್ಟಿದ್ದಾರೆ ಎಂದರು.
ಸಂತೆ ಮಾರ್ಕೆಟ್ ವರ್ತಕರು ಹತ್ತಾರು ವರ್ಷಗಳಿಂದ ಸಾಲ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದೀವಿ. ಸರಕಾರಿ ನಿಯಮಾವಳಿಯಂತೆ ಅದೇನು ಎಸ್.ಆರ್.ರೇಟ್ ಇದೆಯೋ ಅದನ್ನು ನಿಗದಿ ಮಾಡಿ ಕೊಟ್ಟರೆ ನಾವೇ ಬಾಡಿಗೆಕಟ್ಟಿಕೊಂಡು ಹೋಗುತ್ತೇವೆ ಎನ್ನುತ್ತಿದ್ದಾರೆ. ಹಾಗೆ ಮಾಡಲು ಆಗುವುದಿಲ್ಲ. ನಿಯಮಾವಳಿಯಂತೆ ಬಹಿರಂಗ ಹರಾಜು ನಡೆಸ ಲೇಬೇಕು.ಕಾನೂನು ರೀತಿ ನಗರಸಭೆ ಅವರಿಗೇ ಮಾಡಿಕೊಡುವಂತಿದ್ದರೆ ಮಾಡಿ ಕೊಡಲಿ, ವರ್ತಕರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ, ಇದರಲ್ಲಿ ಶಾಸಕರದ್ದು ಏನಿರುತ್ತೆ ಹೇಳಿ?ಸಾಧ್ಯವಾದರೆ ನಗರಸಭೆ ಈಗಿರುವವರರಿಗೇ ಅವಕಾಶ ಮಾಡಿಕೊಟ್ಟರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಈ ಹರಾಜು ಪ್ರಕ್ರಿಯೆಯಲ್ಲಿ ನಗರಸಭೆ ಸದಸ್ಯರ ಅಣ್ಣಂದಿರು,ದೊಡ್ಡಪ್ಪ ಚಿಕ್ಕಪ್ಪಂದಿರು, ನಾದಿನಿ, ಅವರ ಮಕ್ಕಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಂಗಡಿ ಪಡೆದರೆ ದಯವಿಟ್ಟು ಜನತೆಗೆ ಈ ಸತ್ಯವನ್ನು ಪ್ರಸಾರ ಮಾಡಿ ಎಂದು ಶಾಸಕರು ಮಾಧ್ಯಮದವರಿಗೆ ಮನವಿ ಮಾಡಿದರು.
ನನಗೆ ಗೊತ್ತಿರುವ ಮಾಹಿತಿಯಂತೆ ನಮ್ಮ ನಗರಸಭೆ ಸದಸ್ಯರು ಸಿಕ್ಕಾಪಟ್ಟೆ ಪ್ರಾಮಾಣಿಕರು ಒಳ್ಳೆಯವರಿದ್ದಾರೆ.ಇವರ ಪ್ರಾಮಾಣಿಕತೆಯನ್ನು ಹೇಳಕ್ಕೇ ಆಗುವುದಿಲ್ಲ.ತುಂಬಾ ಪ್ರಾಮಾಣಿಕರು ಎನ್ನುವುದು ಜನರ ಅಭಿಪ್ರಾಯ.ಜನ ಸಿಕ್ಕಾಪಟ್ಟೆ ಪ್ರಾಮಾಣಿಕರು ಎಂದು ಹೇಳುತ್ತುರುವುದರಿಂದ ಅವರ ಪ್ರಾಮಾಣಿಕತೆ ಮೆಚ್ಚಲೇಬೇಕು.೨ ವರ್ಷದಿಂದ ಇವರ ಬಗ್ಗೆ ನನ್ನ ಅಭಿಪ್ರಾಯ ಇದ್ದೇ ಇದೆ.ದಯವಿಟ್ಟು ಪ್ರಾಮಾಣಿಕ ಸದಸ್ಯರೇ ನಿಮ್ಮ ಹೆಂಡತಿ, ಮಕ್ಕಳು,ಅಣ್ಣ ತಮ್ಮ, ದೊಡ್ಡಪ್ಪ, ಚಿಕ್ಕಪ್ಪ ಮಕ್ಕಳ ಕೈಲಿ ಹರಾಜಿಗೆ ಹಾಕಿಸಬೇಡಿ ಸರ್.ಒಂದು ವೇಳೆ ನೀವು ಹಾಕಿಸಿದರೆ ನಾನು ಮಾಹಿತಿ ಕಲೆ ಹಾಕುತ್ತೇನೆ.ನೀವೂ ಮಾಹಿತಿ ಕಲೆಹಾಕಿ ಎರಡನ್ನೂ ಜನರ ಮುಂದೆ ಇಡೋಣ ಎಂದು ಸವಾಲು ಹಾಕಿದರು.
ಬಹಿರಂಗ ಹರಾಜು ಬೇಡ?
೨೦೧೨ರಲ್ಲಿ ಒಂದು ಆದೇಶ ಬರುತ್ತೆ.ಅದರಂತೆ ಈಗಾಗಲೇ ಅಂಗಡಿಯಲ್ಲಿ ಇರುವವರಿಗೆ ಶೇ೫ರಷ್ಟು ಬಾಡಿಗೆ ಹೆಚ್ಚಳ ಮಾಡಿ ಅವರಿಗೇ ಕೊಡಿ ಎನ್ನುತ್ತದೆ.೨೦೧೯ರಲ್ಲಿ ಮತ್ತೊಂದು ಆದೇಶ ಬರುತ್ತದೆ.ವರ್ತಕರ ವಾದ ಏನೆಂದರೆ ಬಹಿರಂಗ ಹರಾಜು ಬೇಡ.ಇದಾದರೆ ರಾಜಸ್ಥಾನ ಗುಜರಾಜ್ ಅವರು ೧೫/೨೦ ಸಾವಿರಕ್ಕೆ ಬಿಡ್ ಕೂಗುತ್ತಾರೆ. ಒಂದು ತಿಂಗಳು ಎರಡು ತಿಂಗಳೋ ಕಟ್ಟಿ ಊರುಬಿಟ್ಟು ಹೋಗಿ ಬಿಡುತ್ತಾರೆ. ಆಗ ನಗರಸಭೆಗೆ ನಷ್ಟ ಅಲ್ಲವೆ?ನಗರಸಭೆಗೆ ನಷ್ಟವಾಗಲು ನನಗೂ ಮನಸ್ಸಿಲ್ಲ.ಬಹಿರಂಗ ಹರಾಜು ಆದ ಕೂಡಲೇ ಆಯ್ಕೆಯಾದ ಕೂಡಲೇ ಪ್ರಕಟಿಸಲು ಕಮಿಷನರ್ ಅವರಿಗೆ ಹೇಳುತ್ತೇನೆ ಎಂದರು.
ಯುಜಿಡಿಗೆ ೩೦ಕೋಟಿ ತಂದಿದ್ದೇನೆ!!
ನನ್ನ ಕಾಂಗ್ರೆಸ್ ಸರಕಾರ ನಗರದಲ್ಲಿ ಯುಜಿಡಿಗೆ ೩೦ ಕೋಟಿ ತಂದಿದ್ದೇನೆ. ಈಗಾಗಲೇ ಲೈನ್ ಎಸ್ಟಿಮೇಟ್ ಮಾಡಿ ಕೆರೆ ಪಕ್ಕದಲ್ಲಿ ಎಸ್ಟಿಪಿ ಪ್ಲಾಂಟ್ಗೆ ಜಾಗ ಹುಡುಕುತ್ತಿದ್ದೇವೆ. ನಗರಕ್ಕೆ ೩೦ ಕೋಟಿ ನಾನೇ ತಂದಿರುವುದು.ಒAದು ತಿಂಗಳಲ್ಲಿ ಈ ಕೆಲಸ ಪ್ರಾರಂಭ ವಾಗಲಿದೆ ಎಂದರು.
ಈ ವೇಳೆ ನಗರಸಭೆ ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ವಿನಯ್ ಬಂಗಾರಿ,ಮಧು,ಪರ್ಲ್ ಸಂಸ್ಥೆಯ ಜಿ.ಉಮೇಶ್ ಆಯುಕ್ತ ಮನ್ಸೂರ್ ಅಲಿ,ಡ್ಯಾನ್ಸ್ ಶ್ರೀನಿವಾಸ್, ಮೋಲ್ಡ್ ವೆಂಕಟೇಶ್,ನಾಮನಿರ್ದೇಶಿತ ಸದಸ್ಯೆ ಅಣ್ಣಮ್ಮ,ಮತ್ತಿತರರು ಇದ್ದರು.