ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈಜು ಬಾರದಿದ್ದರೂ ಸೀರಿಯಲ್ ಶೂಟಿಂಗ್‍ಗಾಗಿ ಬಾವಿಗೆ ಹಾರಿದ ನಟಿ; ಮುಂದೆ ಆಗಿದ್ದೇನು?

ತಮಿಳು ಸೀರಿಯಲ್​ ಸಿಂಧುಭೈರವಿಯ ನಟಿ ಸುಮಲತಾ ಮಾಧನ್, ಸಿಂಧುಭೈರವಿ ಸಂಚಿಕೆ -55ಕ್ಕಾಗಿ ಈಜು ಬಾರದಿದ್ದರೂ ಜೀವದ ಹಂಗು ತೊರೆದು ಧೈರ್ಯಮಾಡಿ ಬಾವಿಗೆ ಹಾರಿದ್ದಾರೆ. ಅವರ ಈ ಸಾಹಸದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಮೆಚ್ಚುಗೆ ಗಳಿಸಿದೆ.

ಸೀರಿಯಲ್‍ ಶೂಟಿಂಗ್‌ಗಾಗಿ ಈ ನಟಿ ಮಾಡಿದ್ದೇನು ನೋಡಿ!

Profile pavithra Apr 7, 2025 8:30 PM

ಒಂದು ಸಿನಿಮಾ ಅಥವಾ ಸಿರಿಯಲ್ ಹಿಟ್ ಆಗಲು ನಿರ್ದೇಶಕರು ಹರಸಾಹಸ ಮಾಡುತ್ತಾರೆ. ತುಂಬಾ ಕಷ್ಟಕರವಾದ ದೃಶ್ಯಗಳನ್ನು ಮಾಡಲು ಮುಂದಾಗುತ್ತಾರೆ. ಅದೇರೀತಿ ನಿರ್ದೇಶಕರು ಹೇಳಿದಂತೆ ನಟ ನಟಿಯರು ಕೂಡ ತಮ್ಮ ಜೀವದ ಹಂಗು ತೊರೆದು ಇಂತಹ ಸಾಹಸದ ದೃಶ್ಯಗಳನ್ನು ಮಾಡಲು ಸಿದ್ಧರಾಗುತ್ತಾರೆ. ಆದರೆ ಇಂತಹ ಸಾಹಸದ ದೃಶ್ಯಗಳ ಶೂಟಿಂಗ್ ವೇಳೆ ಹಲವು ಬಾರಿ ಅನೇಕ ನಟ ನಟಿಯರು ಗಾಯಗೊಂಡ ಪ್ರಕರಣಗಳೂ ನಡೆದಿತ್ತು. ಇದೀಗ, ತಮಿಳು ಸೀರಿಯಲ್​ ಸಿಂಧುಭೈರವಿಯ ನಟಿ ಸುಮಲತಾ ಮಾಧನ್ ಸಾಹಸಮಯ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಮೆಚ್ಚುಗೆ ಗಳಿಸಿದೆ.

ಈ ಸೀರಿಯಲ್‍ ಶೂಟಿಂಗ್‍ನಲ್ಲಿ ನಟಿ, ಸುಮಲತಾ ಮಾಧನ್​ ಅವರು ಬಾವಿಗೆ ಹಾರುವ ದೃಶ್ಯವೊಂದು ಸೆರೆಯಾಗಿತ್ತು. ಆದರೆ ವಾಸ್ತವವಾಗಿ ನಟಿಗೆ ಈಜು ಸ್ವಲ್ಪ ಕೂಡ ಗೊತ್ತಿಲ್ಲವಂತೆ. ಆದರೂ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ. ಬಾವಿಯ ಒಳಗೆ ಶೂಟಿಂಗ್ ಮಾಡಬೇಕಾಗಿದ್ದರಿಂದ ಈಗಾಗಲೇ ಕ್ಯಾಮೆರಾಮನ್​ ಬಾವಿಗೆ ಇಳಿದಿದ್ದಾರೆ. ಆದರೆ ಸುಮಲತಾ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಧುಮುಕಿದ್ದಾರೆ. ಅವರು ಧುಮುಕಿರುವ ದೃಶ್ಯ ನೋಡಿದ ಎಂತವರಿಗಾದರೂ ಎದೆ ಝಲ್ ಎನಿಸುತ್ತದೆ.

ಸೀರಿಯಲ್‌ ಶೂಟಿಂಗ್‌ಗಾಗಿ ನಟಿ ಬಾವಿಗೆ ಹಾರಿದ ದೃಶ್ಯ ಇಲ್ಲಿದೆ ನೋಡಿ...

ಹಗ್ಗ ಕಟ್ಟಿದ್ದರೂ ಕೂಡ ಬಾವಿಗೆ ಹಾರುವುದೆಂದರೆ ಅವರಿಗೆ ಗಟ್ಟಿ ಗುಂಡಿಗೆ ಇರಬೇಕು. ಇದನ್ನು ಸಾಮಾನ್ಯ ಜನರಿಗೆ ಮಾಡಲು ಸಾಧ್ಯವಿಲ್ಲ. ಆದರೆ ಶೂಟಿಂಗ್​ ವೇಳೆ ಸಾಕಷ್ಟು ಮುಂಜಾಗರೂಕತಾ ಕ್ರಮ ತೆಗೆದುಕೊಂಡು ನಟಿ ಈ ಸಾಹಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಈಜು ಬರದಿದ್ದರೂ ಈ ಸಾಹಸ ದೃಶ್ಯ ಮಾಡಿದ ಸುಮಲತಾ ಅವರಿಗೆ ಸೀರಿಯಲ್ ತಂಡ ಅಭಿನಂದನೆ ಸಲ್ಲಿಸಿದ್ದಾರೆ. ನಟಿಯ ಧೈರ್ಯವನ್ನು ಕಂಡು ನೆಟ್ಟಿಗರು ಸಹ ಮೆಚ್ಚಿದ ಕಾರಣ ಈ ವಿಡಿಯೊ ವೈರಲ್ ಆಗಿದೆ.

serial viral video



ಈ ಸಾಹಸದ ಬಗ್ಗೆ ನಟಿ ತಮ್ಮ ಸೋಶಿಯಲ್ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ಚಿತ್ರೀಕರಿಸಿದ ಅತ್ಯಂತ ಕಠಿಣ ದೃಶ್ಯಗಳಲ್ಲಿ ಇದು ಒಂದು. ಸಿಂಧುಭೈರವಿ ಸಂಚಿಕೆ -55 ಅನ್ನು ಮುಗಿಸಲು ನಮಗೆ ಸುಮಾರು 4 ಗಂಟೆಗಳು ಬೇಕಾಯಿತು. ಅಂದುಕೊಂಡದ್ದಕ್ಕಿಂತ ಸಿಕ್ಕಾಪಟ್ಟೆ ಕಷ್ಟವಾಗಿತ್ತು ಎಂದಿದ್ದಾರೆ. ಕಠಿಣ ಪರಿಶ್ರಮ ಹಾಕಿದ ತಂಡಕ್ಕೆ ಧನ್ಯವಾದಗಳು ಮತ್ತು ನಿನ್ನೆಯಿಂದ ಪ್ರೇಕ್ಷಕರಿಂದ ನಾನು ಪಡೆಯುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.

ಎದೆ ಝುಲ್ ಅನಿಸುವಂತಹ ಸೀರಿಯಲ್ ಶೂಟಿಂಗ್‍ಗಳು ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ವೈರಲ್​ ವಿಡಿಯೊವೊಂದರಲ್ಲಿ ಒಂಟಿ ಸಲಗವೊಂದು ನಾಯಕಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ವೈರಲ್​ ಆಗಿರುವ ವಿಡಿಯೊ ಚಿನ್ನಮರುಮಗಳ್​ ಎನ್ನುವ ತಮಿಳು ಸೀರಿಯಲ್​ನದ್ದಾಗಿದೆ. ಇದರಲ್ಲಿ ಗ್ರಾಫಿಕ್ಸ್ ಬಳಸಿ ಆನೆ ಅಟ್ಟಿಸಿಕೊಂಡು ಬರುವ ದೃಶ್ಯವನ್ನು ಶೂಟ್ ಮಾಡಲಾಗಿತ್ತಂತೆ.