ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮೋಜಿಗೂ ಒಂದು ಮಿತಿ ಬೇಡ್ವಾ? ರೈಲಿನಲ್ಲಿ ಇದೆಂಥಾ ಸರ್ಕಸ್‌? ವಿಡಿಯೊ ವೈರಲ್‌

ವ್ಯಕ್ತಿಯೊಬ್ಬ ಎರಡು ರೈಲು ಹಳಿಗಳ ನಡುವೆ ಇರುವಂತಹ ಮಧ್ಯಂತರ ಬೇಲಿಯ ಮೇಲೆ ಹಾರಿ ರೈಲ್ವೆ ಹಳಿಗಳ ಮೇಲೆ ನಿಂತು ನಂತರ ಮುಂಬೈ ಲೋಕಲ್ ರೈಲು ಹತ್ತಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.

ಮೋಜಿಗೂ ಒಂದು ಮಿತಿ ಬೇಡ್ವಾ? ರೈಲಿನಲ್ಲಿ ಇದೆಂಥಾ ಸರ್ಕಸ್‌ ನೋಡಿ?

Profile pavithra Apr 7, 2025 5:00 PM

ಮುಂಬೈ: ಸಾಮಾನ್ಯವಾಗಿ ಎಲ್ಲರೂ ರೈಲುಗಳನ್ನು ಹತ್ತುವಾಗ ರೈಲು ನಿಲ್ದಾಣಗಳಲ್ಲಿನ ಪ್ಲಾಟ್‍ಫಾರ್ಮ್‍ನಿಂದ ರೈಲನ್ನು ಹತ್ತುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಎರಡು ರೈಲು ಹಳಿಗಳ ನಡುವೆ ಇರುವಂತಹ ಮಧ್ಯಂತರ ಬೇಲಿಯ ಮೇಲೆ ಹಾರಿ ರೈಲ್ವೆ ಹಳಿಗಳ ಮೇಲೆ ನಿಂತು ನಂತರ ರೈಲು ಹತ್ತಿದ್ದಾನೆ.ರೈಲ್ವೆ ನಿಲ್ದಾಣದಿಂದ ರೈಲಿಗೆ ಹತ್ತುವ ಬದಲು, ಈ ವ್ಯಕ್ತಿ ಇನ್ನೊಂದು ಬದಿಯಿಂದ ರೈಲನ್ನು ಹತ್ತಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ವ್ಯಕ್ತಿ ರೈಲು ಹತ್ತಿದ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದೆ. ರೈಲು ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಅವನು ಕಪ್ಪು ಬಣ್ಣದ ಬ್ಯಾಗ್‍ ಅನ್ನು ಹಾಕಿಕೊಂಡು ರೈಲು ಹಳಿಗಳ ಮೇಲೆ ಅಪಾಯಕಾರಿಯಾಗಿ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ರೈಲು ಬಂದು ನಿಂತಾಗ, ಆ ವ್ಯಕ್ತಿ ತನ್ನ ಬ್ಯಾಗ್‍ ಅನ್ನು ರೈಲಿನ ಪಕ್ಕದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ನೀಡಿ ಶೀಘ್ರದಲ್ಲೇ ರೈಲಿನ ಸೆಕೆಂಡ್ ಕ್ಲಾಸ್‍ ಬೋಗಿಯನ್ನು ಹತ್ತಿದ್ದಾನೆ.

ಪ್ರಯಾಣಿಕನ ಹುಚ್ಚಾಟದ ವಿಡಿಯೊ ಇಲ್ಲಿದೆ

ಪ್ರಯಾಣಿಕನ ಈ ಅಜಾಗರೂಕ ಕೃತ್ಯವನ್ನು ವಿಡಿಯೊ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಈಗ ನೆಟ್ಟಿಗರ ಗಮನ ಸೆಳೆದು ವೈರಲ್ ಆಗಿದೆ. ಕೆಲವು ನೆಟ್ಟಿಗರು ಈ ವಿಡಿಯೊ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ ಈ ವ್ಯಕ್ತಿಯ ಅಪಾಯಕಾರಿ ಕೃತ್ಯವನ್ನು ಖಂಡಿಸಿದ್ದಾರೆ ಮತ್ತು ಪ್ರಯಾಣದ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಂತೆ ಮುಂಬೈನ ಜನರನ್ನು ಒತ್ತಾಯಿಸಿದ್ದಾರೆ. ಘಟನೆ ನಡೆದ ನಿಖರವಾದ ರೈಲ್ವೆ ನಿಲ್ದಾಣ ತಿಳಿದಿಲ್ಲ. ಆದರೆ ಪಶ್ಚಿಮ ರೈಲ್ವೆ ಈ ಘಟನೆಯ ಬಗ್ಗೆ ಅಥವಾ ಪ್ರಯಾಣಿಕನ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಈ ಸುದ್ದಿಯನ್ನೂ ಓದಿ:Viral Video: ದರೋಡೆ ಮಾಡಲು ಬಂದ ಖದೀಮರನ್ನು ಅಟ್ಟಾಡಿಸಿ ಹಿಡಿದ ಪೆಟ್ರೋಲ್ ಬಂಕ್ ಸಿಬಂದಿ; ವಿಡಿಯೊ ವೈರಲ್

ರೈಲು ಹತ್ತುವಾಗ ಪ್ರಯಾಣಿಕರು ಈ ರೀತಿ ಅಪಾಯಕಾರಿಯಾಗಿ ರೈಲುಗಳನ್ನು ಹತ್ತಿದ ಘಟನೆಗಳು ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಕರು ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ಇಳಿಯದೆ ನಿರ್ಬಂಧಿತ ಸ್ಥಳದಲ್ಲಿ ಅದೂ ಅಪಾಯಕಾರಿ ರೀತಿಯಲ್ಲಿ ಇಳಿದ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರೈಲಿನ ಸೆಕೆಂಡ್ ಕ್ಲಾಸ್‍ ಬೋಗಿಯಲ್ಲಿ ಪ್ರಯಾಣಿಸಿದ ಪ್ರಯಾಣಿಕರು ರೈಲ್ವೆ ನಿಲ್ದಾಣದ ಬೇಲಿಯನ್ನು ಹಿಡಿದು ಇಳಿಯುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಇವರು ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ತುಂಬಾ ದೂರ ನಡೆಯುವುದನ್ನು ತಪ್ಪಿಸಲು ಶಾರ್ಟ್ ಕಟ್ ಬಳಸಲು ಈ ರೀತಿ ಮಾಡಿದ್ದರು ಎನ್ನಲಾಗಿದೆ.