ಇಂದು ಫೈನಲ್; ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
champions trophy prize money: ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ತಂಡ 19.45 ಕೋಟಿ ರೂ. ಬಹುಮಾನ ಸಿಗಲಿದೆ. ರನ್ನರ್ಅಪ್ ತಂಡ 9.72 ಕೋಟಿ ರೂ. ಗಳಿಸಲಿದೆ. ಕಿವೀಸ್ ಗೆದ್ದರೆ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಲಿದೆ. ಮತ್ತು ತಲಾ 2 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಆಸೀಸ್ ದಾಖಲೆ ಸರಿಗಟ್ಟಲಿದೆ. ಭಾರತ ಗೆದ್ದರೆ ಕಿವೀಸ್ ವಿರುದ್ಧ 25 ವರ್ಷಗಳ ಹಿಂದೆ ಫೈನಲ್ ಸೋಲಿಗೆ ಸೇಡು ತೀರಿಸಲಿದೆ.


ದುಬೈ: 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy Final) ನಿರ್ಘಾಯಕ ಘಟ್ಟ ತಲುಪಿದ್ದು ಇಂದು(ಭಾನುವಾರ) ನಡೆಯುವ ಫೈನಲ್ ಪಂದ್ಯಕ್ಕೆ ದುಬೈನಲ್ಲಿ ವೇದಿಕೆ ಸಜ್ಜುಗೊಂಡಿದೆ. ಚಾಂಪಿಯನ್ ಪಟ್ಟಕ್ಕಾಗಿ ಬಲಿಷ್ಠ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ Final) ತಂಡಗಳು ಹೋರಾಟ ನಡೆಸಲಿದೆ. ಭಾರತ ಗೆದ್ದರೆ ಚಾಂಪಿಯನ್ಸ್ ಟ್ರೋಫಿಯನ್ನು 3 ಬಾರಿ ಗೆದ್ದ ಮೊದಲ ತಂಡವೆನಿಸಲಿದೆ. ನ್ಯೂಜಿಲೆಂಡ್ ಗೆದ್ದರೆ 2ನೇ ಬಾರಿ ಟ್ರೋಫಿಗೆ ಮುತ್ತಿಕ್ಕಲಿದೆ. ಟ್ರೋಫಿ ಗೆದ್ದ ತಂಡಕ್ಕೆ ಮತ್ತು ರನ್ನರ್ ಅಪ್ ಸ್ಥಾನ ಪಡೆದ ತಂಡಕ್ಕೆ ಸಿಗುವ ಬಹುಮಾನ(champions trophy prize money) ಮೊತ್ತದ ವಿವರ ಇಲ್ಲಿದೆ.
ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ತಂಡ 19.45 ಕೋಟಿ ರೂ. ಬಹುಮಾನ ಸಿಗಲಿದೆ. ರನ್ನರ್ಅಪ್ ತಂಡ 9.72 ಕೋಟಿ ರೂ. ಗಳಿಸಲಿದೆ. ಕಿವೀಸ್ ಗೆದ್ದರೆ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಲಿದೆ. ಮತ್ತು ತಲಾ 2 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಆಸೀಸ್ ದಾಖಲೆ ಸರಿಗಟ್ಟಲಿದೆ. ಭಾರತ ಗೆದ್ದರೆ ಕಿವೀಸ್ ವಿರುದ್ಧ 25 ವರ್ಷಗಳ ಹಿಂದೆ ಫೈನಲ್ ಸೋಲಿಗೆ ಸೇಡು ತೀರಿಸಲಿದೆ.
Are you ready for the #ChampionsTrophy 2025 final? 😍
— ICC (@ICC) March 8, 2025
Match details ➡️ https://t.co/NHbnqbFDpt pic.twitter.com/qDAnau7KC4
ಭಾರತವೇ ಫೇವರಿಟ್
ಟೂರ್ನಿಯಲ್ಲಿನ ಪ್ರದರ್ಶನ ನೋಡುವಾಗ ಭಾರತ ತಂಡವೇ ಕಪ್ ಗೆಲ್ಲುವ ಫೇವರಿಟ್ ಎನ್ನಬಹುದು. ಏಕೆಂದರೆ, ಆರಂಭಿಕ ಆಟಗಾರ ಶುಭಮನ್ ಗಿಲ್, ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಅಭೂತಪೂರ್ವ ಲಯದಲ್ಲಿದ್ದಾರೆ. ಅಕ್ಷರ್, ಜಡೇಜಾ, ಹಾರ್ದಿಕ್ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲಿಯೂ ಆಲ್ರೌಂಡ್ ಸಾರ್ಮಥ್ಯ ತೋರುತ್ತಿದ್ದಾರೆ. ವರುಣ್ ಚಕ್ರವರ್ತಿ, ಕುಲ್ದೀಪ್ ಮಾರಕ ಸ್ಪಿನ್ ಕೈಚಳಕ. ಉತ್ತಮ ಲಯದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಇದನ್ನೆಲ್ಲ ನೋಡುವಾಗ ಭಾರತವೇ ಗೆಲ್ಲುವ ಸಾಧ್ಯತೆ ಅಧಿಕ. ಆದರೂ ಎಚ್ಚರ ಅಗತ್ಯ. ಎಷ್ಟೇ ಬಲಿಷ್ಠವಾಗಿದ್ದರೂ ಲಕ್ ಎನ್ನುವುದು ಕೈ ಕೊಟ್ಟರೆ ಕಷ್ಟ. ಇಂದು ಲಕ್ ಕೂಡ ಭಾರತದ ಪಾಲಾಗಿ ಕಪ್ ಗೆಲ್ಲುವಂತಾಗಲಿ ಎನ್ನುವುದು ಕೋಟಿ ಭಾರತೀಯರ ಹಾರೈಕೆಯಾಗಿದೆ.
ಇದನ್ನೂ ಓದಿ IND vs NZ final: ಫೈನಲ್‌ಗೆ ಕ್ಷಣಗಣನೆ; ಗೆದ್ದು ಬಾ ಭಾರತ
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ನ್ಯೂಜಿಲೆಂಡ್: ಡೆವೋನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ (ವಿ ಕಿ), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲಿಯಮ್ ರೌರ್ಕಿ
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ. ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.