MI vs GT: ರೋಹಿತ್‌ರನ್ನು ಕ್ಲೀನ್ ಬೌಲ್ಡ್ ಮಾಡಿ ಸೇಡು ತೀರಿಸಿಕೊಂಡ ಸಿರಾಜ್
ಸಿರಾಜ್ ತಾನೆಸೆದ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ತಾನೆಷ್ಟು ಬಲಿಷ್ಠ ಮತ್ತು ತನ್ನನ್ನು ಚಾಂಪಿಯನ್ಸ್ ಟ್ರೋಫಿಗೆ ಕಡೆಗಣಿಸಿದ್ದಕ್ಕೆ ಸೇಡು ತೀರಿಸಿಕೊಂಡರು. ಇದು ಐಪಿಎಲ್‌ನಲ್ಲಿ ಸಿರಾಜ್ ರೋಹಿತ್‌ರನ್ನು ಬೌಲ್ಡ್ ಮಾಡಿದ್ದು ಮೊದಲ ಬಾರಿ. ಸದ್ಯ ರೋಹಿತ್ ಕ್ಲೀನ್ ಬೌಲ್ಡ್ ಆದ ವಿಡಿಯೊ ಬಾರೀ ವೈರಲ್ ಆಗಿದೆ.

ಹೈದರಾಬಾದ್: ಶನಿವಾರ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್(MI vs GT) ಮುಖಾಮುಖಿ ಆಗಿತ್ತು. ಪಂದ್ಯದಲ್ಲಿ ಗುಜರಾತ್ ತಂಡ 60 ರನ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇದೇ ವೇಳೆ ಮೊಹಮದ್ ಸಿರಾಜ್(Mohammed Siraj) ಅವರು ರೋಹಿತ್ ಶರ್ಮ(Rohit Sharma) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ತಮ್ಮ ಸೇಡೊಂದನ್ನು ತೀರಿಸಿಕೊಂಡಿದ್ದಾರೆ.
ಕಳೆದ ಚಾಂಪಿಯನ್ಸ್ ಟ್ರೋಫಿಗೆ ಮೊಹಮದ್ ಸಿರಾಜ್ ಅವರನ್ನು ಭಾರತ ತಂಡದಿಂದ ಕಡೆಗಣಿಸಿದ ವೇಳೆ ನಾಯಕ ರೋಹಿತ್ ಶರ್ಮ, ಹೊಸ ಚೆಂಡಿನಲ್ಲಷ್ಟೇ ಸಿರಾಜ್ ಯಶ ಕಂಡಿದ್ದು, ಹಳೆಯ ಚೆಂಡಿನಲ್ಲಿ ಪರಿಣಾಮಕಾರಿ ಎನಿಸಿಲ್ಲ ಎಂಬ ಸಮರ್ಥನೆ ನೀಡಿದ್ದರು.
ಈ ಬಗ್ಗೆ ಐಪಿಎಲ್ ಆರಂಭಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಸಿರಾಜ್, ವಿಶ್ವದ ಅಗ್ರ 10 ವೇಗಿಗಳ ಪೈಕಿ ಕಳೆದೊಂದು ವರ್ಷದಲ್ಲಿ ನಾನೇ ಗರಿಷ್ಠ ವಿಕೆಟ್ ಗಳಿಸಿರುವೆ. ಎಕಾನಮಿ ಕೂಡ ಕಡಿಮೆಯಾಗಿದೆ. ಅಂಕಿ-ಅಂಶಗಳೇ ಎಲ್ಲವನ್ನು ಹೇಳುತ್ತಿವೆ. ನಾನು ಹೊಸ-ಹಳೆಯ ಚೆಂಡಿನಲ್ಲಿ ಉತ್ತಮ ನಿರ್ವಹಣೆ ತೋರಿರುವೆ ಎಂದು ಹೇಳುವ ಮೂಲಕ ತಿರುಗೇಡು ನೀಡಿದ್ದರು. ಹೀಗಾಗಿ ಇವರಿಬ್ಬರ ಮುಸುಕಿನ ಗುದ್ದಾಟ ನಿನ್ನೆಯ ಪಂದ್ಯಕ್ಕೈ ಮುನ್ನ ಭಾರೀ ಕುತೂಹಲ ಕೆರಳಿಸಿತ್ತು.
ಇದನ್ನೂ ಓದಿ IPL 2025: ಆರ್‌ಸಿಬಿ ತಂಡ ಹಳೆಯ ಆವೃತ್ತಿಗಳಿಗಿಂತ 10 ಪಟ್ಟು ಉತ್ತಮವಾಗಿದೆ ಎಂದ ಎಬಿ ಡಿ ವಿಲಿಯರ್ಸ್!
What a ball siraj bro..Rohit sharma should retire from IPL before MI benched him#GTvMI #MIvsGTpic.twitter.com/cBvERDIrji
— भाई साहब (@Bhai_saheb) March 29, 2025