Rcb Instagram: ಇನ್ಸ್ಟಾಗ್ರಾಂನಲ್ಲಿ ಚೆನ್ನೈ ದಾಖಲೆ ಮುರಿದ ಆರ್‌ಸಿಬಿ
IPL 2025: ಪ್ರತಿ ಬಾರಿಯೂ ‘ಈ ಸಲ ಕಪ್ ನಮ್ದೇ’ ಎನ್ನುತ್ತಲೇ ಐಪಿಎಲ್(IPL 2025)ಗೆ ಕಾಲಿಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಆರಂಭಿಕ ಪಂದ್ಯದಲ್ಲಿ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಟೂರ್ನಿಗೆ ಆರ್‌ಸಿಬಿ ರಾಯಲ್ ಎಂಟ್ರಿ ಕೊಟ್ಟಿದೆ. ಆಡಿದ ಎರಡೂ ಪಂದ್ಯಗಳನ್ನು ಎದ್ದು ಅಜೇಯ ಓಟ ಮುಂದುವರಿಸಿದೆ.


ಬೆಂಗಳೂರು: ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ(RCB) ಇದೀಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್(Rcb Instagram)ನಲ್ಲಿ ಹೊಸ ದಾಖಲೆ ಬರೆದಿದೆ. ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಐಪಿಎಲ್(IPL 2025) ತಂಡವೆಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ. ಆರ್‌ಸಿಬಿ ಈಗ 17.8 ದಶಲಕ್ಷ ಹಿಂಬಾಲಕರನ್ನು ಪಡೆದುಕೊಂಡಿದೆ. ಈ ಮೂಲಕ ಚೆನ್ನೈ ಸೂಪರ್ಕಿಂಗ್ಸ್ (17.7 ದಶಲಕ್ಷ) ತಂಡವನ್ನು ಹಿಂದಿಕ್ಕಿದೆ.
ಮುಂಬೈ ಇಂಡಿಯನ್ಸ್ (16.2 ದಶಲಕ್ಷ), ಕೆಕೆಆರ್ (7 ದಶಲಕ್ಷ), ಸನ್ರೈಸರ್ಸ್ (5.1 ದಶಲಕ್ಷ) ಮತ್ತು ರಾಜಸ್ಥಾನ ರಾಯಲ್ಸ್ (4.7 ದಶಲಕ್ಷ) ನಂತರದ ಸ್ಥಾನದಲ್ಲಿವೆ. ಈ ಬಾರಿಯ ಆವೃತ್ತಿಯಲ್ಲಿ ಸತತ ಎರಡು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಆರ್‌ಸಿಬಿ ತನ್ನ 3ನೇ ಪಂದ್ಯವನ್ನು ಬುಧವಾರ ತವರಿನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಎದುರಾಳಿ ಗುಜರಾತ್ ಟೈಟಾನ್ಸ್.
ಇದನ್ನೂ ಓದಿ IPL 2025: 8 ಸಾವಿರ ರನ್ ಪೂರೈಸಿ ಕೊಹ್ಲಿ, ರೋಹಿತ್ ಜತೆ ಎಲೈಟ್ ಪಟ್ಟಿ ಸೇರಿದ ಸೂರ್ಯ
ಪ್ರತಿ ಬಾರಿಯೂ ‘ಈ ಸಲ ಕಪ್ ನಮ್ದೇ’ ಎನ್ನುತ್ತಲೇ ಐಪಿಎಲ್(IPL 2025)ಗೆ ಕಾಲಿಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಆರಂಭಿಕ ಪಂದ್ಯದಲ್ಲಿ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಟೂರ್ನಿಗೆ ಆರ್‌ಸಿಬಿ ರಾಯಲ್ ಎಂಟ್ರಿ ಕೊಟ್ಟಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್, ಆ ಬಳಿಕ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿಸುವ ಮೂಲಕ ಅಜೇಯ ಓಟ ಮುಂದುವರಿಸಿದೆ.
ಶುಕ್ರವಾರ ಚೆನ್ನೈ ತಂಡವನ್ನು 50 ರನ್‌ಗಳಿಂದ ಮಣಿಸಿದ ಆರ್‌ಸಿಬಿ, ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ (RCB vs CSK) ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿತ್ತು. ಜತೆಗೆ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆಗೆ ರನ್ ಆಧಾರದಲ್ಲಿ ಅತಿದೊಡ್ಡ ಸೋಲುನ್ನು ಕೂಡ ಉಣಬಡಿಸಿತ್ತು.