#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gaddafi Stadium: ಪಾಕ್‌ ಕ್ರೀಡಾಂಗಣಗಳ ಗುಣಮಟ್ಟದ ಬಗ್ಗೆ ನೆಟ್ಟಿಗರ ಅನುಮಾನ

ಕ್ರೀಡಾಂಗಣದಲ್ಲಿ ಅಳವಡಿಸಿರುವ ಫ್ಲಡ್‌ಲೈಟ್‌ಗಳು ಗುಣಮಟ್ಟದಿಂದ ಕೊಡಿಲ್ಲ. ಹೀಗಾಗಿ ರಚಿನ್‌ ಮಂದ ಬೆಳಕಿನಲ್ಲಿ ಚೆಂಡನ್ನು ಸರಿಯಾಗಿ ಗುರುತಿಸಲಾಗದೆ ಗಾಯ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಜತೆಗೆ ಐಸಿಸಿ ಇನ್ನಾದರೂ ಎಚ್ಚೆತ್ತುಕೊಂಡು ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಇಲ್ಲಿನ ಸ್ಟೇಡಿಯಂನ ಗುಣಮಟ್ಟ ಪರಿಶೀಲನೆ ನಡೆಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲಿ ಎಂದು ಸಲಹೆ ನೀಡಿದ್ದಾರೆ.

ಪಾಕ್‌ ಕ್ರೀಡಾಂಗಣಗಳ ಗುಣಮಟ್ಟದ ಬಗ್ಗೆ ನೆಟ್ಟಿಗರ ಅನುಮಾನ

Profile Abhilash BC Feb 9, 2025 11:22 PM

ಲಾಹೋರ್‌: ಪಾಕಿಸ್ತಾನ ವಿರುದ್ಧ ಶನಿವಾರ ನಡೆದಿದ್ದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ನ್ಯೂಜಿಲ್ಯಾಂಡ್‌ನ ರಚಿನ್‌ ರವೀಂದ್ರ ಹಣೆಗೆ ಚೆಂಡು ಬಡಿದು ಗಾಯಗೊಂಡಿತ್ತು. ಇದೀಗ ಈ ಘಟನೆ ಬೆನ್ನಲ್ಲೇ ಅಲ್ಲಿನ ಕ್ರೀಡಾಂಗಣಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗಾಗಿ(ICC Champions Trophy) ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇಲ್ಲಿನ ಸ್ಟೇಡಿಯಂಗಳನ್ನು(Gaddafi Stadium) ತರಾತುರಿಯಲ್ಲಿ ನವೀಕರಿಸಿತ್ತು. ಈ ವೇಳೆ ಕಳಪೆ ಗುಣಮಟ್ಟದ ಫ್ಲಡ್‌ಲೈಟ್‌ಗಳನ್ನು ಅಳವಡಿಸಿದ್ದೇ ರಚಿನ್‌ ರವೀಂದ್ರ ಗಾಯಕ್ಕೆ ಕಾರಣ ಎಂದು ನೆಟ್ಟಿಗರು ದೂರಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಸಲುವಾಗಿ ಪಾಕ್‌ ಕ್ರಿಕೆಟ್‌ ಮಂಡಳಿ ಪಂದ್ಯಾವಳಿ ನಡೆಯುವ ಮೈದಾನಗಳನ್ನು ನವೀಕರಿಸಲು ಮುಂದಾಗಿತ್ತು. ಕೆಲ ದಿನಗಳ ವರೆಗೂ ಇಲ್ಲಿನ ಕಾಮಗಾರಿಗಳು ನಡೆಯುತ್ತಿರುವ ವಿಡಿಯೊ ಮತ್ತು ಫೋಟೊಗಳು ವೈರಲ್‌ ಆಗಿತ್ತು. ಸ್ವತಃ ಪಾಕ್‌ ಮಾಧ್ಯಮಗಳೇ ಟೂರ್ನಿಯ ವೇಳೆಗೆ ಸ್ಟೇಡಿಯಂ ಸಿದ್ಧಗೊಳ್ಳುವುದು ಅನುಮಾನ ಮತ್ತು ಕೆಲಸ ಕಾರ್ಯಗಳು ಗುಣಮಟ್ಟದಲ್ಲಿ ನಡೆದಿಲ್ಲ ಎಂದು ವರದಿ ಮಾಡಿತ್ತು. ಇನ್ನು ಕೆಲ ಮಾಧ್ಯಮಗಳು ಲಾಹೋರ್‌ ಸ್ಟೇಡಿಯಂಗೆ ಬಾಡಿಗೆ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ ಎಂದು ವರದಿ ಮಾಡಿತ್ತು.



ಎಷ್ಟೇ ಆರೋಪ ಕೇಳಿ ಬಂದರೂ ಕೂಡ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಪಾಕ್‌ ಕ್ರಿಕೆಟ್‌ ಮಂಡಳಿ ಎಲ್ಲ ಆರೋಪವನ್ನು ತಳ್ಳಿಹಾಕಿ ಸ್ಟೇಡಿಯಂ ಸಿದ್ಧ ಎಂದು ಹೇಳುವ ಮೂಲಕ ನವೀಕರಣಗೊಂಡ ಲಾಹೋರ್‌ನ ಗಡಾಫಿ ಸ್ಟೇಡಿಯಂನ ಉದ್ಘಾಟನಾ ಸಮಾರಂಭ ನಡೆಸಿತ್ತು. ಆದರೆ ಇಲ್ಲಿ ನಡೆದ ಮೊದಲ ಪಂದ್ಯದಲ್ಲೇ ಈ ಮೈದಾನದ ಗುಣಮಟ್ಟ ಏನೆಂಬುದು ಈಗ ಸಾಬೀತಾಗಿದೆ.



ಕ್ರೀಡಾಂಗಣದಲ್ಲಿ ಅಳವಡಿಸಿರುವ ಫ್ಲಡ್‌ಲೈಟ್‌ಗಳು ಗುಣಮಟ್ಟದಿಂದ ಕೊಡಿಲ್ಲ. ಹೀಗಾಗಿ ರಚಿನ್‌ ಮಂದ ಬೆಳಕಿನಲ್ಲಿ ಚೆಂಡನ್ನು ಸರಿಯಾಗಿ ಗುರುತಿಸಲಾಗದೆ ಗಾಯ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿ ಕಳಪೆ ಗುಣಮಟ್ಟದ ಫ್ಲಡ್‌ಲೈಟ್‌ಗಳೊಂದಿಗೆ ಕ್ರೀಡಾಂಗಣಗಳನ್ನು ಆಧುನೀಕರಿಸಲಾಗಿದೆ ಎಂದು ನೆಟ್ಟಿಗರು ಪಿಸಿಬಿಯನ್ನು ಟೀಕಿಸುತ್ತಿದ್ದಾರೆ.



ಗುಣಮಟ್ಟವನ್ನು ಪರಿಶೀಲನೆ ನಡೆಸದೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಐಸಿಸಿ ಹೇಗೆ ಅನುಮತಿ ನೀಡಿತು? ಎಂದು ಹಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಐಸಿಸಿ ಮತ್ತೊಮ್ಮೆ ಇಲ್ಲಿನ ಸ್ಟೇಡಿಯಂನ ಗುಣಮಟ್ಟ ಪರಿಶೀಲನೆ ನಡೆಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲಿ ಎಂದು ಸಲಹೆ ನೀಡಿದ್ದಾರೆ.