#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Iphone SE4: ಮುಂದಿನವಾರ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಫೋನ್‌ SE4 ; ಏನಿದರ ವೈಶಿಷ್ಟ್ಯತೆ

ಆಪಲ್ ಮುಂದಿನ ವಾರದ ವೇಳೆಗೆ ಹೊಸ ಐಫೋನ್ SE 4 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 2025 ರ ಮೊದಲ ಐಫೋನ್ ಇದೀಗ ಬಿಡುಗಡೆಯಾಗಲಿದೆ. ಆಪಲ್ ಕಂಪನಿಯು ಕೈಗೆಟಕುವ ಬೆಲೆಯಲ್ಲಿ ಈ ಐಫೋನ್‌ನ್ನು ಬಿಡುಗಡೆ ಮಾಡಲಿದೆ. ಈ ಫೋನ್‌ ಪೂರ್ಣ-ಪರದೆಯ 6.1-ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಐಫೋನ್‌ SE4 ರ ವಿಶೇಷತೆಗಳೇನು? ಇಲ್ಲಿದೆ ಡಿಟೇಲ್ಸ್‌

iphone SE4

Profile Vishakha Bhat Feb 9, 2025 4:10 PM

ನವದೆಹಲಿ: ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿರುವ ಪ್ರಮುಖ ಟೆಕ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಆಪಲ್ (Iphone SE4) , ಮುಂದಿನ ವಾರದ ವೇಳೆಗೆ ಹೊಸ ಐಫೋನ್ SE 4 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 2025 ರ ಮೊದಲ ಐಫೋನ್ ಇದೀಗ ಬಿಡುಗಡೆಯಾಗಲಿದೆ. ಆಪಲ್ ಕಂಪನಿಯು ಕೈಗೆಟಕುವ ಬೆಲೆಯಲ್ಲಿ ಈ ಐಫೋನ್‌ನ್ನು ಬಿಡುಗಡೆ ಮಾಡಲಿದೆ. 2022 ರಲ್ಲಿ ಆಪಲ್ ಫೋನ್ SE ಅನ್ನು ಪರಿಚಯಿಸಿತು ಅಲ್ಲಿಂದ ಇಲ್ಲಿಯ ವರೆಗೆ ಬಳಕೆದಾರರು ಫೋನ್‌ನ ಫೀಚರ್ಸ್‌ಗಳಿಗೆ ಮನ ಸೋತಿದ್ದಾರೆ. ಐಫೋನ್ SE ಸರಣಿಯು ಯಾವಾಗಲೂ ಆಪಲ್‌ನ ಬಜೆಟ್ ಸ್ನೇಹಿ ಕೊಡುಗೆಯಾಗಿದೆ.

ಈ ಫೋನ್‌ಗಳು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡುತ್ತವೆ. 2022 ರ ಐಫೋನ್ SE ಭಾರತದಲ್ಲಿ ರೂ. 39,999 ಕ್ಕೆ ಬಿಡುಗಡೆಯಾಗಿದ್ದು, SE 4 ಬೆಲೆಯಲ್ಲಿ ಕೊಂಚ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಐಫೋನ್ SE 4 ಅನ್ನು ಒಂದೇ ಕ್ಯಾಮೆರಾ ಸಂವೇದಕದೊಂದಿಗೆ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ.

SE ಫೋನ್‌ಗಳ ಶ್ರೇಣಿಯು ಸಾಂಪ್ರದಾಯಿಕವಾಗಿ ಮೊದಲ ತಲೆಮಾರಿನ ಐಫೋನ್ ಅನ್ನು ನೆನಪಿಸುವ ಹಳೆಯ ವಿನ್ಯಾಸ ಮಾದರಿಯನ್ನು ಹೊಂದಿದ್ದು, ದೊಡ್ಡ ಬೆಜೆಲ್‌ಗಳು ಹಾಗೂ ಹೋಮ್ಂ ಬಟನ್‌ ಅನ್ನು ಹೊಂದಿರುತ್ತದೆ. SE 4 ಕೊಂಚ ಭಿನ್ನವಾಗಿದ್ದು, ಪೂರ್ಣ-ಪರದೆಯ 6.1-ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಫೋನ್ ಅನ್‌ಲಾಕ್ ಮಾಡಲು ಫೇಸ್ ಐಡಿಯಿಂದ ಟಚ್‌ ಐಡಿಗೆ ಬದಲಾಯಿಸಲಾಗಿದೆ. ಹಳೆಯ ಐಫೋನ್ ಮಾದರಿಗಳಂತೆಯೇ ಆಪಲ್ ನಾಚ್ ವಿನ್ಯಾಸದೊಂದಿಗೆ ಬರಲಿದೆ ಎಂದು ಊಹಿಸಲಾಗಿದೆ.

ಕ್ಯಾಮೆರಾ ನವೀಕರಣ: ಬಜೆಟ್ ಸ್ನೇಹಿ ಮಾದರಿಯಾಗಿದ್ದರೂ, ಐಫೋನ್ SE 4 ಕ್ಯಾಮರಾ ಕ್ವಾಲಿಟಿಯಲ್ಲಿ ರಾಜಿಯಾಗಿಲ್ಲ. 48MP ಸಿಂಗಲ್ ಕ್ಯಾಮರಾ ಮೂಲಕ ಬಿಡುಗಡೆಯಾಗಬಹುದು ಎಂದು ಊಹಿಸಲಾಗಿದೆ. ಆಪಲ್‌ನ ಮುಂದುವರಿದ ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನದೊಂದಿಗೆ, ಬಳಕೆದಾರರು ಒಂದೇ ಕ್ಯಾಮೆರಾ ಲೆನ್ಸ್‌ನೊಂದಿಗೆ ಸಹ ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ನಿರೀಕ್ಷಿಸಬಹುದು.

AI ವೈಶಿಷ್ಟ್ಯ : SE 4 ಆಧುನಿಕ ನೋಟವನ್ನು ಹೊಂದಿದ್ದು, ಆಪಲ್ ಇಂಟೆಲಿಜೆನ್ಸ್‌ನಿಂದ ನಡೆಸಲ್ಪಡುವ ಆಯ್ದ AI ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ ಎಂದು ತಿಳಿದು ಬಂದಿದೆ.

A18 ಚಿಪ್‌ಸೆಟ್ : ಐಫೋನ್ SE 4 ಗುಣಮಟ್ಟದ ಪ್ರೊಸೆಸರ್‌ ಇರಲಿದೆ ಎಂದು ಹೇಳಲಾಗುತ್ತಿದೆ ಹಾಗೂ A18 ಚಿಪ್ ಅನ್ನು ಅಳವಡಿಕೆ ಮಾಡಲಾಗಿದೆ ಎಂಬ ನಿರೀಕ್ಷೆಯೂ ಇದೆ. ಈ ಚಿಪ್‌ಸೆಟ್‌ನೊಂದಿಗೆ, ಬಳಕೆದಾರರು ವೇಗದ ವೇಗ, ಉತ್ತಮ ಬ್ಯಾಟರಿ ದಕ್ಷತೆ ಮತ್ತು ಸುಧಾರಿತ ಗೇಮಿಂಗ್ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು.

ಈ ಸುದ್ದಿಯನ್ನೂ ಓದಿ: Ravi Sajangadde Column: AI ತಂತ್ರಜ್ಞಾನದಲ್ಲಿ ಪ್ರಭುತ್ವ ಸಾಧಿಸಲು ಪೈಪೋಟಿ !

ಮುಖ್ಯವಾಗಿ SE 4 ನ್ನು ಭಾರತ ಹಾಗೂ ಚೀನಾ ಮಾರುಕಟ್ಟೆಗಳಿಗಾಗಿಯೇ ವಿನ್ಯಾಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಹಕರು ಕಡಿಮೆ ಬೆಲೆಗೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯುವುದರಿಂದ ಬೇಡಿಕೆಯೂ ಹೆಚ್ಚಿರಬಹುದು.