RCB vs GT: ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವೇ ಸೋಲಿಗೆ ಕಾರಣ; ಪಾಟೀದಾರ್
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್ ತಂಡವು ಪವರ್‌ಪ್ಲೇನಲ್ಲಿಯೇ ತನ್ನ ಶಕ್ತಿಪ್ರದರ್ಶನ ಮಾಡಿತು. ಆರ್‌ಸಿಬಿಯನ್ನು 169 ರನ್‌ಗೆ ಕಟ್ಟಿ ಹಾಕಿತು. ಬಳಿಕ ಗುರಿ ಬೆನ್ನಟ್ಟಿದ ಗುಜರಾತ್ ಜಾಸ್ ಬಟ್ಲರ್ ಅಜೇಯ ಅರ್ಧಶತಕ ಮತ್ತು ಸಾಯಿ ಸುದರ್ಶನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 17.5 ಓವರ್‌ಗಳಲ್ಲಿ 170 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಬೆಂಗಳೂರು: ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs GT) ತಂಡದ ನಾಯಕ ರಜತ್ ಪಾಟೀದಾರ್(Rajat Patidar) ಹೇಳಿದ್ದಾರೆ. ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಗುಜರಾತ್ ಟೈಟಾನ್ಸ್(RCB vs GT) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್ ಅಂತರದ ಸೋಲು ಕಂಡಿತ್ತು.
ಪಂದ್ಯದ ನಂತರ ಮಾತನಾಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಪವರ್‌ಪ್ಲೇಯಲ್ಲಿ ಉತ್ತಮ ರನ್ ಗಳಿಸಿ 200ರನ್ ಕಲೆಹಾಕುವುದು ನಮ್ಮ ಯೋಜನೆಯಾಗಿತ್ತು. ಆದರೆ ನಾವು ಆರಂಭದಲ್ಲೇ ಸತತವಾಗಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು ಎಂದರು.ಬೌಲರ್‌ಗಳ ಸಾಧನೆ
ತಂಡದ ಬೌಲರ್‌ಗಳ ಶ್ರಮವನ್ನು ಪಾಟೀದಾರ್ ಕೊಂಡಾಡಿದರು. ಬೌಲರ್‌ಗಳು ಈ ಮೊತ್ತವನ್ನು ರಕ್ಷಿಸಲು ಅದ್ಭುತವಾಗಿ ಪ್ರಯತ್ನಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜಿತೇಶ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಟಿಮ್ ಡೇವಿಡ್ ಅವರು ಬ್ಯಾಟಿಂಗ್ ಮಾಡಿದ ರೀತಿ, ನಮಗೆ ಸಕಾರಾತ್ಮಕವಾಗಿತ್ತು. ಬ್ಯಾಟಿಂಗ್ ಲೈನ್-ಅಪ್ ಬಗ್ಗೆ ನಮಗೆ ವಿಶ್ವಾಸವಿದೆ. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಘಟಕವು ಬಲವಾಗಿ ಪುಟಿದೇಳುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ
ಟೂರ್ನಿಯ ಕಳೆದೆರಡೂ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದ ರಜತ್ ಪಾಟೀದಾರ್ ಬಳಗವು ತವರಿನಲ್ಲಿ ಆಡಿದ ಮೊದಲ ಹಣಾಹಣಿಯಲ್ಲಿ ಸೋತು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿಯಿತು.